Lehenga Saree Fashion 2026: ಜೆನ್ ಜಿ ಯುವತಿಯರಿಗೆ ಪ್ರಿಯವಾಯ್ತು ಲೆಹೆಂಗಾ ಸೀರೆ ಸೆಟ್
Pre-draped Lehenga Saree Sets: ಸೀರೆ ಲುಕ್ ನೀಡುವ ಪ್ರೀ ಡ್ರೇಪ್ಡ್ ಲೆಹೆಂಗಾ ಸೀರೆ ಸೆಟ್‌ಗಳು ಇದೀಗ ಜೆನ್ ಜಿ ಯುವತಿಯರಿಗೆ ಪ್ರಿಯವಾಗಿವೆ. ಅದರಲ್ಲೂ ಲೈಟ್ ಶೇಡ್‌ನವು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ರೆಡಿಮೇಡ್ ಲೆಹೆಂಗಾ ಸೀರೆ ಸೆಟ್‌ಗಳು ಇದೀಗ ಜೆನ್ ಜಿ ಹುಡುಗಿಯರ ವಾರ್ಡ್ರೋಬ್ ಸೇರುತ್ತಿವೆ. ಪರಿಣಾಮ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿವೆ.
ನಿತಾಂಶಿ ಗೋಯಲ್ ಪಾಸ್ಟೆಲ್ ಶೇಡ್ ಲೆಹೆಂಗಾ ಸೀರೆ ಸೆಟ್
ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಿತಾಂಶಿ ಗೋಯಲ್ ಧರಿಸಿ, ಫ್ಯಾಷನ್ ಶೂಟ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ, ಜೆನ್ ಜಿ ಫ್ಯಾಷನ್ ಪ್ರಿಯ ಹುಡುಗಿಯರು ಥೇಟ್ ಅದೇ ರೀತಿಯ ಪ್ರೀ ಡ್ರೇಪ್ಡ್ ಲೆಹೆಂಗಾ ಸೀರೆ ಸೆಟ್‌ಗಳನ್ನು ಆನ್‌ಲೈನ್ ಶಾಪ್‌ಗಳಲ್ಲಿ ಖರೀದಿ ಮಾಡತೊಡಗಿದರು. ಹಾಗಾಗಿ ಇವಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲು ಕಾರಣವಾಯಿತು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ನಾನಾ ವಿನ್ಯಾಸದ ಪ್ರೀ ಡ್ರೇಪ್ಡ್ ಲೆಹೆಂಗಾ ಸೀರೆ ಟ್ರೆಂಡ್
ಸೀರೆ ಎಕ್ಸ್‌ಪರ್ಟ್‌ಗಳು ಹೇಳುವಂತೆ, ಇದೀಗ ನಾನಾ ಬಗೆಯ ಪ್ರೀ ಡ್ರೇಪ್ಡ್ ಲೆಹೆಂಗಾ ಸೀರೆಗಳು ದೊರೆಯುತ್ತಿವೆ. ಅವುಗಳಲ್ಲಿ ಸಾಮಾನ್ಯವಾಗಿ ಉಡುವ ಪ್ರೀ ಡ್ರೇಪ್ಡ್ ಲೆಹೆಂಗಾ ಸೀರೆಗಳು, ಫಿಶ್‌ಕಟ್ ಲೆಹೆಂಗಾ ಸೀರೆಗಳು, ಸ್ಕರ್ಟ್ ಡ್ರೇಪ್ ಲೆಹೆಂಗಾ ಸೀರೆಗಳು ಹಾಗೂ ಲೇಯರ್ಡ್ ಲುಕ್ ಅಥವಾ ಫ್ಲೇರ್ ಲುಕ್ ನೀಡುವ ಲೆಹೆಂಗಾ ಸೀರೆ ಸೆಟ್‌ಗಳು ಸೇರಿವೆ. ಇವನ್ನು ಧರಿಸಿದಾಗ ಫ್ಯಾಷೆನಬಲ್ ಫ್ಯಾನ್ಸಿ ಸೀರೆ ಲುಕ್ ಪಡೆಯಬಹುದು ಎನ್ನುತ್ತಾರೆ.
ಜೆನ್ ಜಿ ಇಷ್ಟಪಡುವ ಪಾಸ್ಟೆಲ್ ಲೆಹೆಂಗಾ ಸೀರೆಗಳು
ಸಮೀಕ್ಷೆಯೊಂದರ ಪ್ರಕಾರ, ವಿವಾಹಿತ ಮಾನಿನಿಯರು ಅತಿ ಹೆಚ್ಚು ಡಾರ್ಕ್ ಕಲರ್ ಲೆಹೆಂಗಾ ಸೀರೆಗಳನ್ನು ಖರೀದಿಸುತ್ತಾರಂತೆ. ಆದರೆ, ಲೈಟ್ ಹಾಗೂ ಪಾಸ್ಟೆಲ್ ಶೇಡ್‌ನವನ್ನು ಜೆನ್ ಜಿ ಯುವತಿಯರು ಆಯ್ಕೆ ಮಾಡಿಕೊಳ್ಳುತ್ತಾರಂತೆ.
ಲೆಹೆಂಗಾ ಸೀರೆ ಪ್ರಿಯರಿಗೆ ಇಲ್ಲಿವೆ 5 ಟಿಪ್ಸ್
- ಫಟಾಫಟ್ ಆಗಿ ಧರಿಸಬಹುದು. ಸೀರೆಯಂತೆ ಕಾಣಿಸುವುದು.
- ಆದಷ್ಟೂ ನಾನಾ ಬಗೆಯಲ್ಲಿ ಉಡಬಹುದಾದ ಲೆಹೆಂಗಾ ಸೀರೆಗಳನ್ನು ಆಯ್ಕೆ ಮಾಡಿ.
- ಟ್ರೆಂಡಿಯಾಗಿರುವ ಕಲರ್ಸ್ ಚೂಸ್ ಮಾಡಿ.
- ಮೇಕೋವರ್ ತೀರಾ ಸಿಂಪಲ್ ಆಗಿರಲಿ.
- ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.