ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಧಿಕಾರಾವಧಿಯ 25ನೇ ವರ್ಷ ಆಚರಿಸುತ್ತಿರುವ ಪ್ರಧಾನಿ ಮೋದಿ; ಸರ್ಕಾರದ ಮುಖ್ಯಸ್ಥರಾಗಿ ಸುದೀರ್ಘ ಸೇವೆ ಸಲ್ಲಿಸಿದ ನಾಯಕರಿವರು

ಪ್ರಧಾನಿ ನರೇಂದ್ರ ಮೋದಿ ಅವರು 2025ರ ಅಕ್ಟೋಬರ್ ತಿಂಗಳಲ್ಲಿ ಸರ್ಕಾರದ ಮುಖ್ಯಸ್ಥರಾಗಿ ತಮ್ಮ ಅಧಿಕಾರಾವಧಿಯ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರು ಬಳಿಕ ದೇಶದ ಪ್ರಧಾನಿಯಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸರ್ಕಾರದ ಮುಖ್ಯಸ್ಥರು ಎಂದು ಗುರುತಿಸಿಕೊಂಡಿದ್ದಾರೆ. ಇವರೊಂದಿಗೆ ಇನ್ನು ಮೂವರು ದೇಶದ ದೀರ್ಘಾವಧಿಯ ಅಧಿಕಾರವನ್ನು ಪಡೆದಿದ್ದು, ಅವರೆಲ್ಲರ ಕುರಿತು ಕಿರು ಮಾಹಿತಿ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
1/7

ದಾಖಲೆ ಬರೆದ ಮೋದಿ

2001ರಿಂದ 2014ರ ವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯಾ ಅನಂತರ ಭಾರತದ ಮೂರನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಸಿಕ್ಕಿಂನ ಮಾಜಿ ಸಿಎಂ ಪವನ್ ಕುಮಾರ್ ಚಾಮ್ಲಿಂಗ್ ಅವರ 8,930 ದಿನಗಳ ದಾಖಲೆಯನ್ನು ಅವರು ಸರಿಸಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಿ ಮೋದಿ ಅವರು ಸಾರ್ವಜನಿಕ ಜೀವನದಲ್ಲಿಗುಜರಾತ್ ಮುಖ್ಯಮಂತ್ರಿಯಾಗಿ ಬಳಿಕ ಪ್ರಧಾನಿಯಾಗಿ ಒಟ್ಟು 8,931 ದಿನಗಳನ್ನು ಕಳೆದಿದ್ದಾರೆ.

2/7

25ನೇ ವರ್ಷಕ್ಕೆ ಪದಾರ್ಪಣೆ

ಪ್ರಧಾನಿಯಾಗಿವ ಮೊದಲು ಅವರು 2001ರ ಅಕ್ಟೋಬರ್ ತಿಂಗಳಿನಿಂದ 2014ರ ಮೇ ವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಭಾರತ ಸ್ವಾತಂತ್ರ್ಯದ ಬಳಿಕ ದೇಶದ ಅತ್ಯನ್ನತ ಹುದ್ದೆಯನ್ನು ಏರಿ ದೀರ್ಘಾವಧಿಯವರೆಗೆ ಅಧಿಕಾರದಲ್ಲಿ ಕುಳಿತ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಬಳಿಕ ಮೂರನೇ ಸ್ಥಾನವನ್ನು ನರೇಂದ್ರ ಮೋದಿ ಪಡೆದುಕೊಂಡಿದ್ದಾರೆ. ಇವರು 2025ರ ಅಕ್ಟೋಬರ್ ತಿಂಗಳಲ್ಲಿ ಸರ್ಕಾರದ ಮುಖ್ಯಸ್ಥರಾಗಿ ತಮ್ಮ ಅಧಿಕಾರಾವಧಿಯ 25ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು.

3/7

ಪವನ್ ಕುಮಾರ್ ಚಾಮ್ಲಿಂಗ್

ಭಾರತದಲ್ಲಿ ಅತಿ ಹೆಚ್ಚು ಕಾಲ ಸರ್ಕಾರಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರಲ್ಲಿ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಇವರು 1994 ರಿಂದ 2019 ರವರೆಗೆ 25 ವರ್ಷಗಳ ಕಾಲ ಅವರು ಅಧಿಕಾರದಲ್ಲಿದ್ದರು.

4/7

ನವೀನ್ ಪಟ್ನಾಯಕ್

ಅತಿ ಹೆಚ್ಚು ಕಾಲ ಸರ್ಕಾರಗಳ ಮುಖ್ಯಸ್ಥರಾಗಿರುವವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವವರು ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್. ಇವರು 2000ರ ಮಾರ್ಚ್ 5ರಿಂದ 2024ರ ಜೂನ್ 12ರವರೆಗೆ ಅಧಿಕಾರದಲ್ಲಿದ್ದರು.

5/7

ಜ್ಯೋತಿ ಬಸು

ನಾಲ್ಕನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಹಿರಿಯ ನಾಯಕ ಜ್ಯೋತಿ ಬಸು ಇದ್ದು, ಇವರು 1977 ರಿಂದ 2000 ರವರೆಗೆ ರಾಜ್ಯವನ್ನು ಆಳಿದರು. ಇವರು 23 ವರ್ಷಗಳಿಗೂ ಹೆಚ್ಚು ಕಾಲ ಪಶ್ಚಿಮ ಬಂಗಾಳದಲ್ಲಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡಿದ್ದಾರೆ.

6/7

ಗೆಗಾಂಗ್ ಅಪಾಂಗ್

ಐದನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಅವರಿದ್ದು, ಇವರು 1980ರ ಜನವರಿಯಿಂದ 1999ರ ಜನವರಿವರೆಗೆ ಮತ್ತು 2003ರ ಆಗಸ್ಟ್ 4 ತಿಂಗಳಿನಿಂದ 2007ರ ಏಪ್ರಿಲ್ 9ರವರೆಗೆ ಅಧಿಕಾರ ವಹಿಸಿಕೊಂಡರು.

7/7

ಶುಭಾಶಯಗಳ ಮಹಾಪೂರ

ದೇಶದ ಪ್ರಧಾನಿಯಾಗಿ ದೀರ್ಘಾವಧಿ ಕಾಲ ಸೇವೆ ಸಲ್ಲಿಸಿದ್ದಕ್ಕೆ ಪ್ರಧಾನಿ ಮೋದಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅವರ ಈ ಸಾಧನೆಯು ರಾಷ್ಟ್ರದ ಮೊದಲ ಆಡಳಿತ, ಬಡವರ ಕಲ್ಯಾಣ ಮತ್ತು ಭಾರತದ ಜಾಗತಿಕ ಸ್ಥಾನಮಾನವನ್ನು ಉನ್ನತೀಕರಿಸುವ ಅವರ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ವಿದ್ಯಾ ಇರ್ವತ್ತೂರು

View all posts by this author