ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ahmedabad Plane Crash: ತಟ್ಟೆಗೆ ಹಾಕಿದ್ದ ಊಟ, ಸಿಲುಕಿಕೊಂಡ ವಿಮಾನದ ಭಾಗಗಳು; ದುರಂತದ ಭೀಕರತೆಗೆ ಸಾಕ್ಷಿಯಾದ ಚಿತ್ರಗಳಿವು

ಗುರುವಾರ ಮಧ್ಯಾಹ್ನ ಏರ್ ಇಂಡಿಯಾ ವಿಮಾನವು ಟೇಕ್‌ ಆಪ್‌ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಅದು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ ಮೇಲೆ ಬಿದ್ದಿದೆ. ಪರಿಣಾಮ 5 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

1/5

ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರ (ಜೂನ್ 12) ಮಧ್ಯಾಹ್ನ (Ahmedabad Plane Crash) ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿ ನಗರ ಪ್ರದೇಶದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು.

2/5

ವಿಮಾನ ವೈದ್ಯಕೀಯ ಹಾಸ್ಟೆಲ್‌ ಮೇಲೆ ಬಿದ್ದಿದೆ. ಪರಿಣಾಮ 5 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ವಿಮಾನ ಅಪ್ಪಳಿಸಿದ ಹೊಡೆತಕ್ಕೆ ಇಡೀ ಹಾಸ್ಟೆಲ್‌ ಕಟ್ಟಡವೇ ಛಿದ್ರ ಛಿದ್ರವಾಗಿದೆ.

3/5

ಆಗಷ್ಟೇ ವಿದ್ಯಾರ್ಥಿಗಳು ಊಟಕ್ಕೆಂದು ಮೆಸ್‌ಗೆ ಬಂದಿದ್ದರು. ಅಷ್ಟರಲ್ಲಾಗಲೇ ಘನ ಘೋರ ದುರಂತ ನಡೆದು ಹೋಗಿದೆ. ಯಮನಂತೆ ಬಂದ ವಿಮಾನ ಹಾಸ್ಟೆಲ್‌ ಕಟ್ಟಡಕ್ಕೆ ಅಪ್ಪಳಿಸಿದೆ. ಅಪಘಾತದ ನಂತರ ಊಟದ ತಟ್ಟೆ ಅಲ್ಲಲ್ಲಿ ಬಿದ್ದಿರುವುದನ್ನು ನೋಡಬಹುದು.

4/5

ಅಹಮದಾಬಾದ್ ವಿಮಾನ ಅಪಘಾತದ ನಂತರ ಕಂಡುಬಂದ ಸೂಟ್‌ಕೇಸ್‌ಗಳು. ಅಪಘಾತದ ಬಳಿಕ ವಿಮಾನದಲ್ಲಿದ್ದ ವಸ್ತುಗಳು ಎಲ್ಲೆಡೆ ಬಿದ್ದಿವೆ. ಸದ್ಯ ತೆರವು ಕಾರ್ಯ ನಡೆಯುತ್ತಿದೆ.

5/5

ವಿಮಾನದ ಒಂದು ಭಾಗ ಹಾಸ್ಟೆಲ್ ಆವರಣದಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.