Makeup Trend: ನಾರಿಯರ ಇಮೇಜ್ ಬದಲಿಸುವ ಲಿಪ್ಸ್ಟಿಕ್ಸ್
Colorful Lipsticks: ಲಿಪ್ಸ್ಟಿಕ್ಸ್ ಮಾನಿನಿಯರ ಇಮೇಜ್ ಹಾಗೂ ಮೂಡನ್ನೂ ಕೂಡ ಬದಲಿಸಬಹುದು ಹಾಗೆನ್ನುತ್ತಾರೆ ಮೇಕಪ್ ಎಕ್ಸ್ಪರ್ಟ್ಸ್. ಯಾವ ಯಾವ ಕಲರ್ನವು ಹೇಗೆ ಕಾಣಿಸುತ್ತವೆ? ಯಾವ ಇಮೇಜ್ ನೀಡುತ್ತವೆ. ಈ ಎಲ್ಲದರ ಕುರಿತ ಡಿಟೇಲ್ಸ್ ಇಲ್ಲಿದೆ.
ಲಿಪ್ಸ್ಟಿಕ್ಸ್ ನಿಮ್ಮ ಇಮೇಜನ್ನು ಬದಲಿಸಬಹುದು. ಹೌದು, ತುಟಿಗೆ ಹಚ್ಚುವ ಲಿಪ್ಸ್ಟಿಕ್ಸ್ ಪ್ರತಿ ನಾರಿಯರ ಇಮೇಜ್ ಹಾಗೂ ಮೂಡನ್ನೂ ಕೂಡ ಬದಲಿಸಬಹುದು ಹಾಗೆನ್ನುತ್ತಾರೆ ಮೇಕಪ್ ಎಕ್ಸ್ಪರ್ಟ್ಸ್. ಅಷ್ಟು ಮಾತ್ರವಲ್ಲ, ಅದರಲ್ಲೂ ಕೆಲವು ಕಲರ್ಫುಲ್ ಲಿಪ್ಸ್ಟಿಕ್ಗಳಂತೂ ಮೂಡನ್ನು ಬದಲಿಸುತ್ತವಂತೆ. ಅರರೆ., ಲಿಪ್ಸ್ಟಿಕ್ಗೂ ಮೂಡಿಗೂ-ಇಮೇಜ್ಗೂ ಏನ್ ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಕೇಳಿ. ಪ್ರತಿಷ್ಠಿತ ಕಾಸ್ಮೆಟಿಕ್ ಸಂಸ್ಥೆಯೊಂದರ ಸಮೀಕ್ಷೆಯ ಪ್ರಕಾರ, ಕಲರ್ಫುಲ್ ಲಿಪ್ಸ್ಟಿಕ್ಗಳು ಮಹಿಳೆಯರ ಇಮೇಜ್ ಬದಲಿಸುತ್ತವಂತೆ. ಅಲ್ಲದೇ, ಜತೆಗಿರುವವರ ಮೂಡನ್ನು ಬದಲಿಸುತ್ತವಂತೆ. ಇದು ಪ್ರೂವ್ ಕೂಡ ಆಗಿದೆಯಂತೆ.
ಬಣ್ಣಗಳ ಆಧಾರಿತ ಇಮೇಜ್
ಮೇಕಪ್ ಎಕ್ಸ್ಪರ್ಟ್ಸ್ ಪ್ರಕಾರ, ಇಂದು ಮಾರುಕಟ್ಟೆಯಲ್ಲಿ ನೂರಾರು ಶೇಡ್ಸ್ನ ಲಿಪ್ಸ್ಟಿಕ್ ಲಭ್ಯವಿದೆ. ಹಾಗೆಂದು ಎಲ್ಲವೂ ನಿಮ್ಮ ಮೂಡನ್ನು ಬದಲಿಸುತ್ತದೆ ಎಂದಲ್ಲ. ಅದು ಬಣ್ಣಗಳ ಮೇಲೂ ನಿರ್ಧರಿತವಾಗುತ್ತದೆ. ಅದರಲ್ಲೂ ಯೂನಿವರ್ಸಲ್ ಕಲರ್ ಎಂದೇ ಹೇಳಲಾಗುವ ರೆಡ್, ಪಿಂಕ್, ಬ್ರೌನ್ ಹಾಗೂ ಮೆಜಂತಾ ಬಣ್ಣಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುತ್ತಾರೆ. ಅವರ ಪ್ರಕಾರ, ಈ ಬಣ್ಣ ಸೂಟ್ ಆಗುವ ಮಾನಿನಿಯರೂ ನಿಜಕ್ಕೂ ಅದೃಷ್ಠವಂತರು. ಯಾಕಂದ್ರೆ, ಅವರು ಆಗಾಗ್ಗೆ ಲುಕ್ ಬದಲಿಸಬಹುದು. ಸೋ, ಬಣ್ಣಬಣ್ಣದ ಲಿಪ್ಸ್ಟಿಕ್ ಲೇಪನಕ್ಕೆ ಮುನ್ನ, ನೀವು ಕೂಡ ಅವುಗಳ ಬಗ್ಗೆ ನೀವು ಸ್ವಲ್ಪ ತಿಳಿದುಕೊಳ್ಳಿ ಎನ್ನುತ್ತಾರೆ.
ರೆಡ್ - ಕಲರ್ ಆಫ್ ಫ್ಯಾಷನ್
ಬ್ರೈಟ್ ರೆಡ್ ಬಣ್ಣ ಎಂದರೇ, ಆಕರ್ಷಕ ಬಣ್ಣ. ಅಂದ ಹಾಗೆ, ಇದು ಎಲ್ಲರಿಗೂ ಸೂಟ್ ಆಗುವ ಮಾಮೂಲಿ ಬಣ್ಣವಲ್ಲ. ಯಾವತ್ತೂ, ರೆಡ್ ಲಿಪ್ಸ್ಟಿಕ್ ಬಳಸದವರೂ, ಅಪ್ಪಿ-ತಪ್ಪಿ ಯರ್ರಾಬಿರ್ರಿ ಬಳಸಿದಲ್ಲಿ ಮಾರಮ್ಮನಂತೆ ಕಂಡರೂ ಅಚ್ಚರಿಯಿಲ್ಲ. ಒಟ್ನಲ್ಲಿ, ಈ ಕಲರ್ ಹಚ್ಚಿಕೊಳ್ಳುವವರಿಗೆ ಶೇಡ್ಸ್ ಬಗ್ಗೆ ಪರಿಜ್ಞಾನ ಇದ್ದರೇ ಒಳ್ಳೆದು. ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದು ಒಂದು ಕಲೆ. ರೆಡ್ ಲಿಪ್ಸ್ಟಿಕ್ ಲೈಟಾಗಿ, ಡಾರ್ಕಾಗಿ ಚರ್ಮಕ್ಕೆ ಸೂಟ್ ಆಗುವಂತೆ ಲೇಪಿಸಿಕೊಂಡು ರೂಢಿಸಿಕೊಂಡರೇ ಓಕೆ. ಈ ಬಣ್ಣ ಹೆಚ್ಚು-ಕಡಿಮೆಯಾದರೇ ಒಳ್ಳೆಯ ಹಾಗೂ ಕೆಟ್ಟ ಇಮೇಜ್ ಬದಲಿಸುವುದರಲ್ಲಿ ಎರಡು ಮಾತಿಲ್ಲ! ಗ್ಲಾಮರಸ್ ಬ್ಲಾಕ್-ಬ್ಲ್ಯೂ ಮತ್ತು ಬೂದು ಬಣ್ಣದ ಪಾರ್ಟಿವೇರ್ ಡ್ರೆಸ್ಗಳಿಗೆ ಸಕತ್ ಮ್ಯಾಚ್ ಆಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನೈಟ್ ಪಾರ್ಟಿಗಳಿಗೆ ಗುಡ್ ಕಲರ್.
ಪಿಂಕ್ - ಖುಷಿಯ ಸಂಕೇತ
ಬಬ್ಲಿ ಹುಡುಗಿಯರ ಎವರ್ಗ್ರೀನ್ ಫೇವರೀಟ್ ಕಲರ್ ಇದು. ಟಿನೇಜ್ ಹುಡುಗಿಯರಿಗಂತೂ ಪರ್ಫೆಕ್ಟ್ ಕಲರ್. ಈ ಬಣ್ಣ ಖುಷಿ ಹಾಗೂ ಸಂತೋಷದ ಸಿಂಬಲ್.
ಲೈಟ್ ಕಲರ್, ಪ್ರಿಂಟೆಡ್ ಉಡುಪುಗಳಿಗೆ ಪಕ್ಕಾ ಸೂಟ್ ಆಗುತ್ತದೆ. ದಿನವೀಡಿ ಉಲ್ಲಾಸವಿಡುವ ಕಲರ್ ಎಂದರೂ ತಪ್ಪಿಲ್ಲ. ಯಂಗ್ ಲುಕ್ ಬಣ್ಣ ಎಂದೂ ಕರೆಯುತ್ತಾರೆ.
ಬ್ರೌನ್ - ಒಲವಿನ ಬಣ್ಣ
ಬ್ರೌನ್ ಕಲರ್ ಎಂದರೇ ಸಾಕು, ಫ್ಯಾಷನಿಸ್ಟಾಗಳು ಬಳಸೋ ಪದ ಸ್ಟನ್ನಿಂಗ್ ಕಲರ್ ಎಂಬುದು, ಅಷ್ಟೇ ಅಲ್ಲ, ಈ ಕಲರ್ ಲಕ್ಷುರಿ ಲೈಫ್ನ ಸಂಕೇತ. ಹೈಕ್ಲಾಸ್ ಹೆಂಗಸರು ಬಳಸುವ ಬಣ್ಣವಿದು. ಇದರಲ್ಲೂ ತಿಳಿ-ಗಾಢ ಎಂದೆಲ್ಲಾ ಶೇಡ್ಸ್ ಪ್ರಯೋಗ ಮಾಡಬಹುದು. ಪ್ರೆಸ್ಟೀಜಿಯಸ್ ಬಣ್ಣ ಎಂದೇ ಕರೆಯಲಾಗುವ ಈ ಬಣ್ಣ ಯಾವುದೇ ಡಾರ್ಕ್ ಉಡುಪಿಗೂ, ಬಾರ್ಡರ್ ಸೀರೆಗಳಿಗೂ ಮ್ಯಾಚ್ ಆಗುತ್ತದೆ.
ಮೆಜಂತಾ- ವೈಭವದ ದ್ಯೋತಕ
ಇದು ರಿಚ್ ಕಲರ್. ವೈನ್ ಕಲರ್ ಎಂದು ಪ್ರಚಲಿತದಲ್ಲಿರುವ ಈ ಬಣ್ಣದಲ್ಲಿ ಕಡಿಮೆ ಎಂದರೂ ಹತ್ತಕ್ಕೂ ಹೆಚ್ಚು ಶೇಡ್ಸ್ ಪ್ರಯೋಗಿಸಬಹುದಂತೆ.
ಕೋರಲ್ ಹಾಗೂ ಆಯಿಲ್ ರೆಡ್ ಉಡುಪುಗಳು ಸಕತ್ ಮ್ಯಾಚಿಂಗ್. ಗ್ಲಾಮರ್ ಹಾಗೂ ಬ್ಯೂಟಿಯನ್ನು ಹೆಚ್ಚಿಸುವ ಬಣ್ಣ ಎನ್ನುತ್ತಾರೆ ಫ್ಯಾಷನಿಸ್ಟಾಗಳು.