ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Assembly Elections 2026: ಪಿಣರಾಯಿ ವಿಜಯನ್, ಮೋಹನ್ ಲಾಲ್ ಸೇರಿದಂತೆ ಮತ ಚಲಾಯಿಸಿದ ಹಲವು ಗಣ್ಯರು

ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಗುರುವಾರ ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ನಟ ಮೋಹನ್ ಲಾಲ್ ಸೇರಿದಂತೆ ಹಲವು ಗಣ್ಯರು ಬೆಳಗ್ಗೆಯ ತಮ್ಮತಮ್ಮ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಅಸ್ಸಾಂ, ಪುದುಚೇರಿ ಮುಖ್ಯಮಂತ್ರಿಗಳು ಕೂಡ ಮತದಾನ ಮಾಡಿದರು.

ಪಿಣರಾಯಿ ವಿಜಯನ್ (ಸಂಗ್ರಹ ಚಿತ್ರ)
1/10

ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ವಿಧಾನ ಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಒಂದೇ ಹಂತದಲ್ಲಿ ನಡೆಯಲಿರುವ ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಮತದಾನದಲ್ಲಿ ಹಲವು ಗಣ್ಯರು ತಮ್ಮ ತಮ್ಮ ಮತಗಟ್ಟೆಗಳಿಗೆ ಬಂದು ಮತದಾನ ನಡೆಸಿದರು.

2/10

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಪಿಣರಾಯಿಯಲ್ಲಿರುವ ಆರ್‌ಸಿ ಆಮ್ಲಾ ಮೂಲದ ಯುಪಿ ಶಾಲೆಯಲ್ಲಿ ಮತ ಚಲಾಯಿಸಿದರು. ಬಳಿಕ ಅವರು ಎಡ ಪ್ರಜಾಸತ್ತಾತ್ಮಕ ರಂಗಕ್ಕೆ ದೊಡ್ಡ ಗೆಲುವು ದೊರೆಯುವ ವಿಶ್ವಾಸ ವ್ಯಕ್ತಪಡಿಸಿ ರಾಜ್ಯದ ಭವಿಷ್ಯಕ್ಕೆ ವಿಧಾನಸಭಾ ಚುನಾವಣೆ ನಿರ್ಣಾಯಕವಾಗಿದೆ ಎಂದು ಹೇಳಿದರು.

3/10

ಕೇರಳದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಗೆ ತಿರುವನಂತಪುರಂನ ಮುದವನ್ಮುಗಲಿಲ್ ಶಾಲೆಯಲ್ಲಿ ಹಿರಿಯ ನಟ ಮೋಹನ್ ಲಾಲ್ ಅವರು ಮತ ಚಲಾಯಿಸಿದರು. ಬಿಳಿ ಶರ್ಟ್ ಧರಿಸಿ ಬಂದಿದ್ದ ಅವರು ಮತದಾನ ಆರಂಭಕ್ಕೂ ಮುನ್ನವೇ ನೇಮಮ್ ಕ್ಷೇತ್ರದ ಬೂತ್‌ಗೆ ಬಂದು ಸರತಿಯಲ್ಲಿ ನಿಂತು ಮತದಾನ ಮಾಡಿದ ಬಳಿಕ ಮತದಾರರಿಗೆ ಸಂದೇಶವಾಗಿ ತಮ್ಮ ಶಾಯಿ ಹಚ್ಚಿದ ಬೆರಳನ್ನು ಪ್ರದರ್ಶಿಸಿದರು.

4/10

ಮತದಾನ ಮಾಡಿದ ಬಳಿಕ ಸಾಮಾಜಿಕ ಮಾಧ್ಯಮ ಖಾತೆಯಾದ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಹಂಚಿಕೊಂಡ ಮೋಹನ್ ಲಾಲ್, ನಾನು ನನ್ನ ಜವಾಬ್ದಾರಿಯನ್ನು ಪೂರೈಸಿದ್ದೇನೆ. ಈಗ, ನಿಮ್ಮ ಸರದಿ. ಹೋಗಿ ಮತ ಚಲಾಯಿಸಿ ಎಂದು ತಿಳಿಸಿದ್ದಾರೆ.

5/10

ನಟ ಸುರೇಶ್ ಗೋಪಿ ಅವರು ಕೇರಳದ ಗುರುವಾಯೂರ್ ದೇವಸ್ವಂ ಇಂಗ್ಲಿಷ್ ಮಾಧ್ಯಮ ಶಾಲೆಯ ಬೂತ್ 137 ರಲ್ಲಿ ಮತ ಚಲಾಯಿಸಿದರು. ನಟ ಪೃಥ್ವಿರಾಜ್ ತಮ್ಮ ಪತ್ನಿ ಸುಪ್ರಿಯಾ ಅವರೊಂದಿಗೆ ತೇವರ ಮೀನುಗಾರಿಕಾ ಶಾಲೆಯಲ್ಲಿ ಬೆಳಗ್ಗೆ ಬೇಗನೆ ಬಂದು ಮತದಾನ ಮಾಡಿದರು.

6/10

ಕಡವಂತರ ವೈಎಂಸಿಎಯಲ್ಲಿ ಮತ ಚಲಾಯಿಸಿದ ನಟ ರೆಂಜಿ ಪಣಿಕರ್, ಪ್ರಜಾಪ್ರಭುತ್ವವು ಒಳ್ಳೆಯ ಮತ್ತು ಸವಾಲಿನ ಎರಡೂ ಸಮಯಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇತರ ದೇಶಗಳನ್ನು ನೋಡಿದಾಗ, ನಮ್ಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಆನಂದಿಸಲು ನಾವು ಎಷ್ಟು ಅದೃಷ್ಟವಂತರು ಎಂಬುದು ಅರಿವಾಗುತ್ತದೆ ಎಂದರು.

7/10

ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಕುಟುಂಬ ಸಮೇತ ಬಂದು ಮತಗಟ್ಟೆ ಸಂಖ್ಯೆ 166 ರಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಅವರು ಹಳದಿ ಶಾಲು ಧರಿಸಿದ್ದರು. ಬಳಿಕ ಅವರು ಮಾತನಾಡಿ, ಎಲ್ಲ ಮತದಾರರು ತಪ್ಪದೆ ಮತದಾನ ಮಾಡಿ. ನಾನು ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ ಎಂದ ಹೇಳಿದರು.

8/10

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಗುವಾಹಟಿಯ ಜಲುಕ್ಬರಿಯಲ್ಲಿ ತಮ್ಮ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿದರು. ಇದಕ್ಕೂ ಮೊದಲು ಅವರು ಪತ್ನಿ ರಿನಿಕಿ ಭೂಯಾನ್ ಶರ್ಮಾ ಮತ್ತು ಮಕ್ಕಳೊಂದಿಗೆ ಕಾಮಾಕ್ಯ ದೇವಾಲಯ ಸೇರಿದಂತೆ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

9/10

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಗುರುವಾರ ಮುಖ್ಯಮಂತ್ರಿ ಎನ್. ರಂಗಸಾಮಿ ಅವರು ಬೈಕ್ ನಲ್ಲಿ ದಿಲಾಸಪೇಟೆ ಸರ್ಕಾರಿ ಮಾಧ್ಯಮಿಕ ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಅವರ ಭದ್ರತಾ ಸಿಬ್ಬಂದಿ ಕೂಡ ಜೊತೆಯಲ್ಲಿದ್ದರು.

10/10

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ತಿಮ್ಮಾಪುರದಲ್ಲಿ ಮತದಾನ ಮಾಡಿದರು. ಬೆಂಬಲಿಗರೊಂದಿಗೆ ಅವರು ಮತಗಟ್ಟೆಗೆ ಆಗಮಿಸಿದರು.

ವಿದ್ಯಾ ಇರ್ವತ್ತೂರು

View all posts by this author