ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Meghana Raj: ಗೋವಾದಲ್ಲಿ ಮಗ ರಾಯನ್‌ ಜತೆ ಬರ್ತ್‌ಡೇ ಆಚರಿಸಿದ ಮೇಘನಾ ರಾಜ್‌: ಇಲ್ಲಿವೆ ಫೋಟೊಸ್

ನಟಿ ಮೇಘನಾ ರಾಜ್ ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯಲು ಬಯಸುತ್ತಾರೆ. ಸದ್ಯ ಮೇಘನಾ ಸಿನಿಮಾದಿಂದ ಕೊಂಚ ದೂರ ಉಳಿದಿದ್ದು ತಮ್ಮ ಮಗ ರಾಯನ್‌ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಮೇಘನಾ ಕುಟುಂಬದ ಜೊತೆ ಗೋವಾ ಟ್ರಿಪ್ ತೆರಳಿದ್ದು ಅಲ್ಲಿ ಎಂಜಾಯ್ ಮಾಡಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿವೆ..

Meghana Raj goa trip
1/6

ಬಹುಭಾಷಾ ಕಲಾವಿದೆ, ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ತಮ್ಮ 35ನೇ ಹುಟ್ಟುಹಬ್ಬವನ್ನು ಇತ್ತೀಚೆಗೆ ಗೋವಾದಲ್ಲಿ ಆಚರಿಸಿಕೊಂಡಿದ್ದು, ಈ ಸಂಭ್ರ ಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

2/6

1990ರ ಮೇ 3ರಂದು ಜನಿಸಿದ ಮೇಘನಾ ರಾಜ್‌ ತಮ್ಮ 35ನೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲು ಫ್ಯಾಮಿಲಿ ಜತೆಗೆ ಗೋವಾಕ್ಕೆ ತೆರಳಿದ್ದಾರೆ. ಗೋವಾದ ಬೀಚ್‌ನಲ್ಲಿ ಮಗನ ಜತೆಗೆ ಆಟವಾಡಿ, ಕೇಕ್‌ ಕಟ್‌ ಮಾಡಿ ಮೇಘನಾ ರಾಜ್‌ ಖುಷಿ ಪಟ್ಟಿದ್ದಾರೆ.

3/6

ಅದರಲ್ಲೂ ನಟಿ ಮೇಘನಾ ರಾಜ್ ಮಗನ ಜತೆ ಬೀಚ್​ನಲ್ಲಿ ಬಹಳಷ್ಟು ಮಜಾ ಮಾಡಿದ್ದಾರೆ. ʼʼಈ ಹುಟ್ಟುಹಬ್ಬವು ವಿಭಿನ್ನವಾಗಿತ್ತು. ನನ್ನ ಭಾವನೆಗಳನ್ನ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆದರೂ, ನಾನು ನಿಜವಾಗಿಯೂ ನಿಮ್ಮೆಲ್ಲ ರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವ ಒಂದು ಭಾವನೆ 'ಕೃತಜ್ಞತೆ'. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ನಟಿ ಮೇಘನಾ ರಾಜ್‌ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

4/6

ಗೋವಾದ ಬೀಚ್‌ನಲ್ಲಿ ಮಗನ ಜತೆಗೆ ಮೇಘನಾ ಆಟವಾಡಿದ್ದು, ಬಹಳ ಖುಷಿಯಿಂದ ಸಮಯ ಕಳೆದಿದ್ದಾರೆ. ಮೇಘನಾ ಅಭಿಮಾನಿಗಳು ಈ ಫೋಟೊಗಳಿಗೆ ಮೆಚ್ಚುಗೆ ಸೂಚಿಸಿದ್ದು, ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ನಿಮ್ಮ ಈ ಖುಷಿ ಹೀಗೆ‌ ಇರಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

5/6

ಮೇಘನಾ ರಾಜ್ ಗೋವಾ ಟ್ರಿಪ್​ಗೆ ಅವರ ತಾಯಿ ಪ್ರಮಿಳಾ ಜೋಷಾಯ್ ಮತ್ತು ಅಪ್ತ ಸ್ನೇಹಿತೆಯರು ಸಾಥ್ ನೀಡಿದ್ದಾರೆ. ಬೀಚ್ ಹಾಗೂ ಗೋವಾ ಬೀದಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ.

6/6

ನಟಿ ಮೇಘನಾ ರಾಜ್‌ ಸರ್ಜಾ ಕನ್ನಡ ಮಾತ್ರವಲ್ಲ ಮಲಯಾಳಂ ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ.‌ ಪತಿ ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ಸಿಂಗಲ್‌ ಪೇರೆಂಟ್‌ ಆಗಿ ತಮ್ಮ ಪುತ್ರನನ್ನು ನೋಡಿಕೊಳ್ಳುತ್ತಿದ್ದಾರೆ. ಸಾಕಷ್ಟು ನೋವಿನ ನಡುವೆಯೂ ಮಗ ರಾಯನ್‌ಗಾಗಿ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಎರಡನೇ ಮದುವೆ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇದ್ದು ಈ ಬಗ್ಗೆ ನಟಿ ಹಲವು ಬಾರಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.