ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mehndi Trend 2025: ಕಥೆ ಹೇಳುವ ಬ್ರೈಡಲ್ ಮೆಹಂದಿ ಡಿಸೈನ್ಸ್

Mehndi Trend 2025: ಈ ಬಾರಿಯ ವೆಡ್ಡಿಂಗ್ ಸೀಸನ್‌ನಲ್ಲಿ ಕಥೆ ಹೇಳುವ ಬ್ರೈಡಲ್ ಮೆಹಂದಿ ಚಿತ್ತಾರಗಳು ಟ್ರೆಂಡಿಯಾಗಿವೆ. ನಾನಾ ವಿನ್ಯಾಸದಲ್ಲಿ ಮೂಡುವ ಈ ಚಿತ್ತಾರಗಳು ಮದುಮಗಳ ಕೈಗಳನ್ನು ಅಲಂಕರಿಸುತ್ತಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಬ್ರೈಡಲ್ ಮೆಹಂದಿಯಲ್ಲಿಇದೀಗ ಸ್ಟೋರಿ ಟೆಲ್ಲಿಂಗ್ ಅಂದರೆ, ಕಥೆ ಹೇಳುವ ಮೆಹಂದಿ ಡಿಸೈನ್‌ಗಳು ಪಾಪ್ಯುಲರ್ ಆಗಿವೆ. ಹೌದು, ವೆಡ್ಡಿಂಗ್ ಸೀಸನ್‌ನಲ್ಲಿ ಮದುಮಗಳ ಕೈಗಳನ್ನು ಅಲಂಕರಿಸುವ ಡಿಸೈನ್‌ಗಳಲ್ಲಿ ಇವು ಸೇರಿಕೊಂಡಿವೆ.

ಡಿಸೈನ್‌ನಲ್ಲಿ ಮಿಕ್ಸ್ ಮ್ಯಾಚ್

ಅರೇಬಿಕ್, ಸಿಂಗಲ್ ಲೈನ್, ಗ್ರ್ಯಾಂಡ್ ಫ್ಲೋರಲ್ ಹೀಗೆ ಸಾಕಷ್ಟು ಮೆಹಂದಿ ಡಿಸೈನ್‌ಗಳು ಬ್ರೈಡಲ್ ಮೆಹಂದಿ ಡಿಸೈನ್‌ನಲ್ಲಿ ಮೊದಲಿನಿಂದಲೂ ಬೇಡಿಕೆ ಕಳೆದುಕೊಂಡಿಲ್ಲ. ಇವುಗಳ ಮಧ್ಯೆ ಕಥೆ ಹೇಳುವ ಮೆಹಂದಿ ಡಿಸೈನ್ ಟ್ರೆಂಡಿಯಾಗಿದೆ. ಹಾಗೆಂದು ಇವು ಪ್ರತ್ಯೇಕವಾಗಿ ಚಿತ್ತಾರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ! ಬದಲಿಗೆ ಮಿಕ್ಸ್ ಮ್ಯಾಚ್ ಡಿಸೈನ್‌ಗಳಲ್ಲಿ ಇವು ಕೂಡ ಬೆರೆತು ಹೋಗುತ್ತಿವೆ.

2/5

ಏನಿದು ಸ್ಟೋರಿ ಟೆಲ್ಲಿಂಗ್ ಮೆಹಂದಿ?

ಎರಡು ಕೈಗಳಲ್ಲಿ ಹಾಕುವ ಮೆಹಂದಿಯಲ್ಲೆ ಚಿಕ್ಕ ಪುಟ್ಟ ಚಿತ್ತಾರಗಳಲ್ಲೆ ಪ್ರೇಮ ಕಥೆ ಬಿಂಬಿಸುವ ಚಿತ್ತಾರಗಳು, ಕೃಷ್ಣ ರಾಧೆಯ ಪೊಟ್ರೈಟ್, ಇಲ್ಲವೇ ವಧು-ವರನ ಪ್ರೇಮ ಸಲ್ಲಾಪದ ಚಿತ್ತಾರ, ಸಿಂಡ್ರೆಲ್ಲಾ ಮೋಹಕ ಚಿತ್ತಾರ ಹೀಗೆ ವಧುವಿನ ಇಚ್ಛೆಯನುಸಾರ ಮೆಹಂದಿ ಡಿಸೈನ್‌ಗಳನ್ನು ಹಾಕಲಾಗುತ್ತದೆ. ಇವು ಕಸ್ಟಮೈಸ್ಡ್ ಡಿಸೈನ್‌ಗಳಾಗಿರುತ್ತವೆ. ಹಾಗೆಂದು ಕೈಗಳಲ್ಲಿಇಡೀ ಕಥೆಯನ್ನು ಹೇಳಲಾಗುವುದಿಲ್ಲ. ಬದಲಿಗೆ ಕೆಲವು ಸಣ್ಣಪುಟ್ಟ ಚಿತ್ತಾರದ ಮೂಲಕ ಮೂಡಿಸಲಾಗುತ್ತದೆ ಎನ್ನುತ್ತಾರೆ ಮೆಹಂದಿ ಎಕ್ಸ್‌ಪರ್ಟ್ಸ್ ರೀನಾ.

3/5

ಕಸ್ಟಮೈಸ್ಡ್ ಮೆಹಂದಿ ಚಿತ್ತಾರ

ಕೆಲವೊಮ್ಮೆ ವರ ಹಾಗೂ ವಧುವಿನ ಪ್ರೇಮ ಕಥೆಯನ್ನು ಇನಿಶಿಯಲ್ ಮೂಲಕ ಇಲ್ಲವೇ ಅವರ ಸಿಗ್ನೇಚರ್ ಸ್ಟೈಲ್ ಇರುವ ಯಾವುದಾದರೂ ಸಿಂಬಾಲಿಕ್ ಚಿತ್ತಾರದ ಮೂಲಕ ಕೈಗಳ ಮೇಲೆ ಮೆಹಂದಿಯಲ್ಲಿ ಚಿತ್ತಾರ ಮೂಡಿಸಲಾಗುತ್ತದೆ. ಇದು ಅವರವರ ಆಯ್ಕೆಯ ಅನುಗುಣದ ಆಧಾರದ ಮೇಲೆ ನಿರ್ಧರಿತವಾಗಿರುತ್ತದೆ ಎನ್ನುತ್ತಾರೆ ಮೆಹಂದಿ ಡಿಸೈನರ್ಸ್.

4/5

ವೆಡ್ಡಿಂಗ್ ಸೀಸನ್‌ನಲ್ಲಿ ಬೇಡಿಕೆ ಹೆಚ್ಚು

ಮೂಲತಃ ನಾರ್ತ್ ಇಂಡಿಯಾದಿಂದ ಬಂದ ಈ ಮೆಹಂದಿ ಟ್ರೆಂಡ್ ಇದೀಗ ನಮ್ಮ ದಕ್ಷಿಣ ಭಾರತದಲ್ಲೂ ಕಾಮನ್ ಆಗತೊಡಗಿದೆ. ಅಚ್ಚರಿಯ ವಿಚಾರವೆಂದರೆ, ಕಂಟೆಂಪರರಿ ವಿನ್ಯಾಸಗಳಲ್ಲೂ ಕಾಣಿಸಿಕೊಳ್ಳತೊಡಗಿದೆ ಎನ್ನುತ್ತಾರೆ ಮೆಹಂದಿ ಡಿಸೈನರ್ ರಾಶಿ.

5/5

ಸ್ಟೋರಿ ಟೆಲ್ಲಿಂಗ್ ಮೆಹಂದಿ ಡಿಸೈನ್ಸ್ ಆಯ್ಕೆ ಹೀಗಿರಲಿ

  • ಆದಷ್ಟೂ ಮೆಸ್ಸಿ ವಿನ್ಯಾಸ ಚೂಸ್ ಮಾಡಬೇಡಿ.
  • ಸಿಂಪಲ್ ಹಾಗೂ ಅರ್ಥವಾಗುವಂತಿರಲಿ.
  • ಮನಸ್ಸಿಗೆ ಬೇಸರವಾಗುವಂತಹ ಕಥೆಯ ಚಿತ್ತಾರ ಬೇಡ.
  • ಮನಸ್ಸಿಗೆ ಖುಷಿ ನೀಡುವಂತಹ ಚಿತ್ತಾರಗಳನ್ನೇ ಆಯ್ಕೆಮಾಡಿ.
  • ನೋಡಲು ಎಲ್ಲರಿಗೂ ಇಷ್ಟವಾಗುವಂತದ್ದನ್ನು ಸೆಲೆಕ್ಟ್ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author