ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mens Fashion 2026: ಯುವಕರ ಬಂದ್ಗಾಲ ಜಾಕೆಟ್‌ ಸೆಟ್‌ಗೂ ಸಿಕ್ತು ಗ್ಲಾಮರ್ ಟಚ್‌

Mens Bandgala Jacket Set: ಪುರುಷರ ಬಂದ್ಗಾಲ ಜಾಕೆಟ್‌ ಸೆಟ್‌ಗೆ ಇದೀಗ ಗ್ಲಾಮರಸ್‌ ಟಚ್‌ ದೊರಕಿದೆ. ಇದರೊಂದಿಗೆ ಧರಿಸುವ ಡೀಪ್‌ ವಿ ನೆಕ್‌ ಶಾರ್ಟ್ ಕುರ್ತಾ ಈ ಲುಕ್‌ಗೆ ಸಾಥ್‌ ನೀಡಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಅವಿನಾಶ್‌ ಮಿಶ್ರಾ, ನಟ.
1/5

ಮೆನ್ಸ್ ಬಂದ್ಗಾಲ ಜಾಕೆಟ್‌ ಸೆಟ್‌ಗೆ ಈ ಫೆಸ್ಟೀವ್‌ ಸೀಸನ್‌ನಲ್ಲಿ ಗ್ಲಾಮರಸ್‌ ಟಚ್‌ ದೊರಕಿದೆ.

2/5

ವಿ ನೆಕ್‌ಲೈನ್‌ನ ಶಾರ್ಟ್ ಕುರ್ತಾದಿಂದ ಗ್ಲಾಮರ್‌ ಟಚ್‌

ಅರರೆ, ಪುರುಷರ ಔಟ್‌ಫಿಟ್‌ಗೂ ಗ್ಲಾಮರ್‌ ಟಚ್ಚಾ! ಅದ್ಹೇಗೆ? ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಇಲ್ಲಿದೆ ವಿವರ. ಈ ಬಾರಿ ಶಾರ್ಟ್ ಕುರ್ತಾ ಜತೆ ಡೀಪ್‌ ವಿ ನೆಕ್‌ಲೈನ್‌ನಲ್ಲಿ ಬಂದ್ಗಾಲ ಸೆಟ್‌ ಕಾಲಿಟ್ಟಿದೆ. ಇದು ಫಿಟ್‌ & ಫೈನ್‌ ಆಗಿರುವ ಹಾಗೂ ಬಾಡಿಬಿಲ್ಡ್ ಮಾಡಿರುವ ಯುವಕರಿಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್‌.

3/5

ಡಿಸೈನರ್‌ ಬಂದ್ಗಾಲದಿಂದ ಸೆಲೆಬ್ರೆಟಿ ಲುಕ್‌

ಇತ್ತೀಚೆಗೆ ಇವೆಂಟ್‌ವೊಂದರಲ್ಲಿ ಟೆಲಿವುಡ್‌ ನಟ ಅವಿನಾಶ್‌ ಮಿಶ್ರಾ ಧರಿಸಿದ್ದ ವೈನ್‌ ಮರೂನ್‌ ಕಲರ್‌ನ ಎಂಬಾಲಿಶ್ಡ್ ಡಿಸೈನರ್‌ ಬಂದ್ಗಾಲ, ಸೋಷಿಯಲ್‌ ಮೀಡಿಯಾದ ಫ್ಯಾಷನ್‌ ಪ್ರಿಯ ಫಾಲೋವರ್‌ಗಳ ಗಮನ ಸೆಳೆಯಿತು. ಅದರಲ್ಲೂ ಫಿಟ್‌ ಆಗಿರುವ ಯುವಕರನ್ನು ಆಕರ್ಷಿಸಿತು. ಮೆನ್ಸ್ ಎಥ್ನಿಕ್‌ ಫ್ಯಾಷನ್‌ವೇರ್‌ ಲಿಸ್ಟ್‌ನಲ್ಲಿ, ಸೆಲೆಬ್ರೆಟಿ ಕೆಟಗರಿಗೆ ಸೇರಿಕೊಂಡಿತು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಆಕರ್ಷಕ ಬಂದ್ಗಾಲ ಕುರ್ತಾ ಸೂಟ್‌

ಈ ಚಿತ್ರದಲ್ಲಿರುವ ಬಂದ್ಗಾಲ ಸೂಟ್‌ನ ಜಾಕೆಟ್‌ ಮಾನೋಕ್ರೋಮ್‌ ಶೇಡ್‌ದ್ದಾಗಿದ್ದು, ಮಿನುಗುವ ಎಂಬಾಲಿಶ್ಡ್‌ ಡಿಸೈನ್‌ ಹೊಂದಿದೆ. ತಕ್ಷಣಕ್ಕೆ ಈ ಡಿಸೈನ್‌ ಮಾಮೂಲಿ ಎಂತೆನಿಸಿದರೂ ಇದರೊಳಗೆ ಧರಿಸಿರುವ ಚಂದೇರಿ ಸಿಲ್ಕ್‌ನ ಡೀಪ್‌ ವಿ ಕಟ್‌ ಇರುವಂತಹ ನೆಕ್‌ಲೈನ್‌ ಕಂಪ್ಲೀಟ್‌ ಈ ಬಂದ್ಗಾಲ ಸೂಟ್‌ ಸೆಟ್‌ಗೆ ಗ್ಲಾಮರ್‌ ಟಚ್‌ ನೀಡುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಡಿಸೈನರ್ಸ್.

5/5

ಗ್ಲಾಮರಸ್‌ ಟಚ್‌ ನೀಡುವ ಬಂದ್ಗಾಲ ಪ್ರಿಯರಿಗೆ ಟಿಪ್ಸ್

  • ಫಿಟ್‌ ಬಾಡಿ ಇದ್ದಲ್ಲಿ ಮಾತ್ರ ಈ ಶೈಲಿಯ ಔಟ್‌ಫಿಟ್‌ ಆಯ್ಕೆ ಮಾಡಿ.
  • ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಡಿಸೈನ್‌ ಚೂಸ್‌ ಮಾಡಿ.
  • ಹಬ್ಬ ಅಥವಾ ಗ್ರ್ಯಾಂಡ್‌ ಸಮಾರಂಭಗಳಿಗಾದಲ್ಲಿ ಆದಷ್ಟೂ ಗ್ರ್ಯಾಂಡ್‌ ಲುಕ್‌ ಇರುವಂತದ್ದನ್ನು ಧರಿಸಿ.

ಶೀಲಾ ಸಿ ಶೆಟ್ಟಿ

View all posts by this author