ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Miss Universe India 2025: ಮಿಸ್‌ ಯೂನಿವರ್ಸ್ ಇಂಡಿಯಾ ವಿಜೇತೆ ಮಣಿಕಾ ವಿಶ್ವಕರ್ಮ ಲೈಫ್‌ಸ್ಟೈಲ್‌ ಹೇಗಿದೆ?

Miss Universe India 2025: ಮಿಸ್‌ ಯೂನಿವರ್ಸ್ ಇಂಡಿಯಾ 2025 ಕಿರೀಟ ಮುಡಿಗೇರಿಸಿಕೊಂಡಿರುವ ರಾಜಸ್ಥಾನದ ಮಣಿಕಾ ವಿಶ್ವಕರ್ಮ ನಟಿ ಹಾಗೂ ಎನ್‌ಸಿಸಿ ಕೆಡೆಟ್‌ ಕೂಡ ಆಗಿದ್ದರು ಎಂಬುದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ! ಅವರ ಲೈಫ್‌ಸ್ಟೈಲ್‌ ಕುರಿತಂತೆ ಇಲ್ಲಿದೆ ಒಂದು ಝಲಕ್‌!

ಚಿತ್ರಗಳು: ಮಣಿಕಾ ವಿಶ್ವಕರ್ಮ, ಮಿಸ್‌ ಯೂನಿವರ್ಸ್ ಇಂಡಿಯಾ 2025 ಇನ್ಸ್ಟಾ ಖಾತೆ
1/5

ಸಾಮಾಜಿಕ ಕಳಕಳಿ ಹೊಂದಿರುವ ಮಿಸ್‌ ಯೂನಿವರ್ಸ್ ಇಂಡಿಯಾ ವಿಜೇತೆ ಮಣಿಕಾ ವಿಶ್ವಕರ್ಮ ನಟಿ ಹಾಗೂ ಎನ್‌ಸಿಸಿ ಕೆಡೆಟ್‌ ಕೂಡ ಆಗಿದ್ದರು. ಅಲ್ಲದೇ, ಸಾಕಷ್ಟು ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂಬುದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ!

ಹೌದು, ಮಣಿ ನವರಂಗ್‌ ಎಂಬ ಹೆಸರಿನಿಂದಲೇ ಇನ್ಸ್ಟಾ ಖಾತೆ ಹೊಂದಿರುವ ಮಣಿಕಾ, ರಂಗೀನ್‌ ಹುಡುಗಿ ಮಾತ್ರವಲ್ಲ, ಬ್ಯೂಟಿ ಪೇಜೆಂಟ್‌ಗೂ ಬರುವ ಮುನ್ನವೇ ನಟನಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಈ ಕುರಿತಂತೆ ಅವರು ಈ ಹಿಂದೆ ನೀಡಿರುವ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

2/5

ಮಣಿಕಾ ಫ್ಯಾಷನ್‌ ಲೋಕದ ಕನಸು

ಮಣಿಕಾಗೆ ಬ್ಯೂಟೊ ಪೇಜೆಂಟ್‌ನ ಟಾಪ್‌ 50 ಲಿಸ್ಟ್‌ನಲ್ಲಿದ್ದಾಗಿನಿಂದಲೇ ಗೆಲ್ಲುವ ಆತ್ಮವಿಶ್ವಾಸ ಹೆಚ್ಚಾಗಿತ್ತಂತೆ. ಹಾಗೆಂದು ಅವರು ಆಗಲೇ ಆಪ್ತರೊಂದಿಗೆ ಹಂಚಿಕೊಂಡಿದ್ದರಂತೆ.

3/5

ಕಲಾವಿದೆಯಾಗಿರುವ ಮಣಿಕಾ

ಮೂಲತಃ ರಾಜಸ್ಥಾನದವರಾದರೂ ಸದ್ಯ ದಿಲ್ಲಿಯಲ್ಲಿ ನೆಲೆಸಿರುವ ಮಣಿಕಾ, ಪೊಲಿಟಿಕಲ್‌ ಸೈನ್ಸ್ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಭರತನಾಟ್ಯ ಕಲಾವಿದೆ ಕೂಡ ಆಗಿದ್ದಾರೆ. ಈಗಾಗಲೇ ಸಾಕಷ್ಟು ರಾಷ್ಟ್ರೀಯ– ಅಂತಾರಾಷ್ಟ್ರೀಯ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಸರ್ಕಾರದ ಲಲಿತಾ ಕಲಾ ಅಕಾಡೆಮಿಯಿಂದ ಪುರಸ್ಕೃತರಾಗಿದ್ದಾರೆ.

4/5

ತಾಯಿಯ ಬೆಂಬಲ

ತಾಯಿ ಶಕುಂತಲಾರ ಬೆಂಬಲದಿಂದ ನಾನು ಸಾಕಷ್ಟು ಸಾಧನೆ ಮಾಡಲು ಸಹಾಯವಾಗಿದೆ ಎನ್ನುವ ಮಣಿಕಾ, ಶಾಲಾ-ಕಾಲೇಜು ದಿನಗಳಿಂದಲೇ ನಾನಾ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಂತೆ.

5/5

ಮಣಿಕಾ ನಟನಾಸಕ್ತಿ

ಪಿಯಾ ಜಿ ಎಂಬ ಮ್ಯೂಸಿಕ್‌ ಆಲ್ಬಂ ಸೇರಿದಂತೆ ಕೆಲವು ಮ್ಯೂಸಿಕ್‌ ಆಲ್ಬಂನಲ್ಲೂ ಕಾಣಿಸಿಕೊಂಡಿರುವ ಮಣಿಕಾಗೆ ಮುಂದೊಮ್ಮೆ ಅಭಿನಯಿಸಲು ಉತ್ತಮ ಅವಕಾಶ ಸಿಕ್ಕಲ್ಲಿ ಸಿನಿಮಾ ರಂಗದಲ್ಲೂ ಗುರುತಿಸಿಕೊಳ್ಳುವ ಇರಾದೆ ಇದೆಯಂತೆ. ಹಾಗೆಂದು ಅವರೇ ಮಾಧ್ಯಮದೊಂದಿಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author