ಸೆಶೆಲ್ಸ್ ಸಸ್ಯೋದ್ಯಾನದಲ್ಲಿ ದೈತ್ಯ ಆಮೆಗಳನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ; ಫೋಟೊ ಇಲ್ಲಿದೆ
Modi and Herminie Visit Seychelles: ಶನಿವಾರ (ಜೂನ್ 27) ಸೀಶೆಲ್ಸ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಮತ್ತು ಉನ್ನತ ಮಟ್ಟದ ನಿಯೋಗ ಬರಮಾಡಿಕೊಂಡಿತು. ಮೋದಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ವಿಮಾನ ನಿಲ್ದಾಣದಲ್ಲಿ, ಅವರನ್ನು ನೃತ್ಯ ಪ್ರದರ್ಶನಗಳೊಂದಿಗೆ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದ ಹೊರಗೆ ಭಾರತೀಯ ವಲಸಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
ಮೂರು ದಿನಗಳ ಪ್ರವಾಸ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ದ್ವೀಪ ರಾಷ್ಟ್ರ ಸೆಶೆಲ್ಸ್‌ಗೆ ತಮ್ಮ ಮೂರು ದಿನಗಳ ಅಧಿಕೃತ ಭೇಟಿಯ ಭಾಗವಾಗಿ, ಶನಿವಾರ (ಜೂ. 27) ಆ ದೇಶದ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರೊಂದಿಗೆ ಸೆಶೆಲ್ಸ್ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದರು. ಈ ವೇಳೆ ಉಭಯ ನಾಯಕರು ದೈತ್ಯ ಆಮೆ ಆವರಣವನ್ನು ವೀಕ್ಷಿಸಿದರು. ನಂತರ ಗಿಡ ನೆಡುವ ಸಮಾರಂಭದಲ್ಲಿ ಭಾಗವಹಿಸಿದರು.
ಪರಿಸರ ಸಂರಕ್ಷಣೆಗೆ ಒತ್ತು
ಉಭಯ ನಾಯಕರು ಪ್ರಮುಖವಾಗಿ ಜೀವವೈವಿಧ್ಯ ಮತ್ತು ಪರಿಸರ ರಕ್ಷಣೆಯ ಬಗ್ಗೆ ಗಮನ ಹರಿಸಿದರು. ಈ ಸಂದರ್ಭದಲ್ಲಿ ಸೆಶೆಲ್ಸ್‌ನ ರಾಷ್ಟ್ರೀಯ ಲಾಂಛನವೂ ಆಗಿರುವ ಮತ್ತು ಅಲ್ಲಿನ ವಿಶಿಷ್ಟ ಪ್ರಭೇದವಾದ ಅಪರೂಪದ 'ಕೋಕೋ ಡಿ ಮೆರ್' ತಾಳೆ ಸಸಿಯನ್ನು ನೆಡಲಾಯಿತು.
ಸ್ನೇಹ ಸಂಬಂಧ ಗಟ್ಟಿಗೊಳಿಸಿದ ಆಮೆ
“ಆಲ್ಡಾಬ್ರಾ ದೈತ್ಯ ಆಮೆ ಭಾರತ ಮತ್ತು ಸೀಶೆಲ್ಸ್ ನಡುವಿನ ವಿಶೇಷ ಸ್ನೇಹದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. 2014ರಲ್ಲಿ ಅವುಗಳಲ್ಲಿ ಎರಡನ್ನು ಕೋಲ್ಕತಾದ ಅಲಿಪೋರ್ ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಲಾಯಿತು. ಕೆಲವು ವರ್ಷಗಳ ನಂತರ, ಸೀಶೆಲ್ಸ್ ಹೈದರಾಬಾದ್ ಮೃಗಾಲಯಕ್ಕೆ ಇನ್ನೂ ಕೆಲವು ಆಮೆಗಳನ್ನು ಉಡುಗೊರೆಯಾಗಿ ನೀಡಿತು” ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದರು.
ಕೊಕೊ ಡಿ ಮೆರ್ ಗಿಡ ನಾಟಿ
ಮೋದಿ ಮತ್ತು ಹರ್ಮಿನಿ ಸಸ್ಯೋದ್ಯಾನದಲ್ಲಿ ಕೊಕೊ ಡಿ ಮೆರ್ ನೆಟ್ಟರು. ಈ ಪ್ರಭೇದವು ಸೀಶೆಲ್ಸ್‌ಗೆ ವಿಶಿಷ್ಟವಾಗಿದೆ. ಕೊಕೊ ಡಿ ಮೆರ್ ಅನ್ನು ಸೀಶೆಲ್ಸ್‌ನಲ್ಲಿ ವ್ಯಾಪಕವಾಗಿ ಗೌರವಿಸಲಾಗುತ್ತದೆ. ಈ ಪ್ರಭೇದವು ಅತಿದೊಡ್ಡ ಬೀಜಗಳು ಮತ್ತು ಭಾರವಾದ ಹಣ್ಣುಗಳಲ್ಲಿ ಒಂದನ್ನು ಉತ್ಪಾದಿಸುತ್ತದೆ.
ಅದ್ಧೂರಿ ಸ್ವಾಗತ
ಶನಿವಾರ ಸೀಶೆಲ್ಸ್‌ಗೆ ಆಗಮಿಸಿದ ಮೋದಿ ಅವರನ್ನು ಅಧ್ಯಕ್ಷ ಹರ್ಮಿನಿ ಮತ್ತು ಉನ್ನತ ಮಟ್ಟದ ನಿಯೋಗ ಬರಮಾಡಿಕೊಂಡಿತು. ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ವಿಮಾನ ನಿಲ್ದಾಣದಲ್ಲಿ, ಅವರನ್ನು ನೃತ್ಯ ಪ್ರದರ್ಶನಗಳೊಂದಿಗೆ ಸ್ವಾಗತಿಸಲಾಯಿತು. ಕಚ್‌ನ ನೃತ್ಯ ಪ್ರದರ್ಶನವೂ ಇತ್ತು.