ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Monsoon Blazer 2026: ಮಾನ್ಸೂನ್‌ ಜೆನ್ ಜಿ ಫ್ಯಾಷನ್‌ಗೆ ಲಗ್ಗೆ ಇಟ್ಟ ಫಂಕಿ ಬ್ಲೇಜರ್‌ ಡ್ರೆಸ್‌

ಮಾನ್ಸೂನ್‌ನಲ್ಲಿ ಫಂಕಿ ಲುಕ್‌ ನೀಡುವ ಮಲ್ಟಿ ಕಲರ್‌ನ ಎಸ್ಥೆಟಿಕ್‌ ಲುಕ್‌ ನೀಡುವಂತಹ ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್‌ನ ಬ್ಲೇಜರ್‌ ಡ್ರೆಸ್‌ಗಳು ಜೆನ್‌ ಜಿಯವರನ್ನು ಆವರಿಸಿಕೊಂಡಿವೆ. ಇದ್ಯಾವ ಬಗೆಯ ಬ್ಲೇಜರ್‌? ಏನಿದರ ಸ್ಪೆಷಾಲಿಟಿ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಮಧುಮಿತಾ ಸರ್ಕಾರ್‌, ನಟಿ
1/5

ಕಲರ್‌ಫುಲ್‌ ಫಂಕಿ ಬ್ಲೇಜರ್‌ ಡ್ರೆಸ್‌ಗಳು ಜೆನ್‌ ಜಿ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ. ಯೆಸ್‌! ಈ ಮಾನ್ಸೂನ್‌ನಲ್ಲಿ ಫಂಕಿ ಲುಕ್‌ ನೀಡುವಂತಹ ಮಲ್ಟಿ ಕಲರ್‌ನ ಎಸ್ಥೆಟಿಕ್‌ ಲುಕ್‌ ನೀಡುವಂತಹ ಊಹೆಗೂ ಮೀರಿದ ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್ ಇರುವಂತಹ ಬ್ಲೇಜರ್‌ ಡ್ರೆಸ್‌ಗಳು ಜೆನ್‌ ಜಿ ಫ್ಯಾಷನ್‌ನಲ್ಲಿ ಹಂಗಾಮ ಎಬ್ಬಿಸಿವೆ.

2/5

ಫಂಕಿ ಬ್ಲೇಜರ್‌ ಡ್ರೆಸ್

ಸಿಂಪಲ್‌ ಆಗಿ ಹೇಳುವುದಾದಲ್ಲಿ, ನೋಡಲು ಚಿತ್ರ-ವಿಚಿತ್ರವಾಗಿರುವಂತಹ ಡಿಸೈನ್‌ ಹೊಂದಿರುವಂತಹ ಬ್ಲೇಜರ್‌ ಡ್ರೆಸ್‌ಗಳನ್ನು ಫಂಕಿ ಬ್ಲೇಜರ್ಸ್ ಡ್ರೆಸ್‌ ಎಂದು ಕರೆಯಬಹುದು. ಅದು ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್ ಆಗಿರಬಹುದು, ಕಲರ್‌ಫುಲ್‌ ಪ್ರಿಂಟೆಡ್‌ ಫ್ಯಾಬ್ರಿಕ್‌ ಆಗಿರಬಹುದು. ಇಲ್ಲವೇ ಸೆಮಿ ಎಂಬ್ರಾಯ್ಡರಿ ಜತೆಗೆ ಮೊಟಿವ್ಸ್ ಇರುವಂತಹ ಇಲ್ಯೂಷನ್‌ ಕ್ರಿಯೇಟ್‌ ಮಾಡುವಂತಹ ವಿನ್ಯಾಸ ಹೊಂದಿರವಂತಹ ಬ್ಲೇಜರ್‌ ಡ್ರೆಸ್‌ ಆಗಿರಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

3/5

ಯೂನಿಸೆಕ್ಸ್ ಬ್ಲೇಜರ್‌ಗಳ ವಿನ್ಯಾಸ

ಯೂನಿಸೆಕ್ಸ್ ಬ್ಲೇಜರ್‌ಗಳನ್ನು ಹುಡುಗ-ಹುಡುಗಿ ಸೇರಿದಂತೆ ಯಾರೂ ಬೇಕಾದರೂ ಧರಿಸಬಹುದು. ಈ ಡ್ರೆಸ್‌ ಸೆಟ್‌ ಧರಿಸಲಾಗದು. ಕೇವಲ ಬ್ಲೇಜರ್‌ ಧರಿಸಬಹುದು. ಇನ್ನು, ಇವು ದೊಗಲೆ ಫಿಟ್ಟಿಂಗ್‌ ಹೊಂದಿರುತ್ತವಾದ್ದರಿಂದ ಈ ಜೆನ್‌ ಜಿ ಫ್ಯಾಷನ್‌ನಲ್ಲಿ ಈಗಾಗಲೇ ಟಾಪ್‌ನಲ್ಲಿ ಸ್ಥಾನ ಪಡೆದಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಲಕ್ಷುರಿ-ಹೈ ಫ್ಯಾಷನ್‌ ಲಿಸ್ಟ್‌ನಲ್ಲಿ ಬ್ಲೇಜರ್‌ ಡ್ರೆಸ್‌ಗಳು

ಈ ಬ್ಲೇಜರ್‌ ಡ್ರೆಸ್‌ಗಳು ಫಂಕಿ ಫ್ಯಾಷನ್‌ನ ಕೆಟಗರಿಯಲ್ಲಿ ಅದರಲ್ಲೂ ಲಕ್ಷುರಿ ಹೈ ಫ್ಯಾಷನ್‌ ಟಾಪ್‌ ಲಿಸ್ಟ್ಗೆ ಸೇರಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ಫಂಕಿ ಬ್ಲೇಜರ್‌ ಡ್ರೆಸ್‌ ಆಯ್ಕೆ & ಸ್ಟೈಲಿಂಗ್‌

  • ಜೆನ್‌ ಜಿ ಫ್ಯಾಷನ್‌ಗೆ ಸಾಥ್‌ ನೀಡುವ ಇವನ್ನು ಆಯ್ಕೆ ಮಾಡುವಾಗ ಮಲ್ಟಿ ಕಲರ್‌ ವಿನ್ಯಾಸ ಇರುವಂತವಕ್ಕೆ ಆದ್ಯತೆ ನೀಡಬೇಕು.
  • ಇವು ದೊಗಲೆ ಯಾಗಿರುವುದರಿಂದ ಬ್ಲೇಜರನ್ನು ಯಾರೂ ಬೇಕಾದರೂ ಧರಿಸಬಹುದು.
  • ಆಕ್ಸೆಸರೀಸ್‌ ಧರಿಸುವಾಗ ಮೆಸ್ಸಿ ಲುಕ್‌ ನೀಡಬಾರದು.

ಶೀಲಾ ಸಿ ಶೆಟ್ಟಿ

View all posts by this author