Monsoon Fashion 2025: ಮಾನ್ಸೂನ್ ಸೀಸನ್ನಲ್ಲೂ ಮುಂದುವರಿದ ಫ್ಲೋರಲ್ ಸೀರೆಗಳು
Monsoon Fashion 2025: ಸಮ್ಮರ್ ಹಾಗೂ ಸ್ಪ್ರಿಂಗ್ ಸೀಸನ್ನಲ್ಲಿದ್ದ ಫ್ಲೋರಲ್ ಪ್ರಿಂಟೆಡ್ ಸೀರೆಗಳು ಇದೀಗ ಮಾನ್ಸೂನ್ ಸೀಸನ್ಗೂ ಮುಂದುವರೆದಿವೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ಸೀರೆಗಳನ್ನು ಈ ಸೀಸನ್ಗೆ ಹೊಂದುವಂತೆ ಹೇಗೆಲ್ಲಾ ಉಡಬಹುದು? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ವಿವರಿಸಿದ್ದಾರೆ.

ಚಿತ್ರಗಳು: ಮಾನುಶಿ ಚಿಲ್ಲರ್, ಮಿಸ್ ವರ್ಲ್ಡ್ 2017, ಬಾಲಿವುಡ್ ನಟಿ


ಫ್ಲೋರಲ್ ಸೀರೆಗಳು ಮಾನ್ಸೂನ್ ಸೀಸನ್ನಲ್ಲೂ ಟ್ರೆಂಡಿಯಾಗಿವೆ.

ಫ್ಲೋರಲ್ ಪ್ರಿಂಟೆಡ್ ಸೀರೆಗಳ ಜಾದೂ
ಹೌದು, ಪ್ರತಿ ಸೀಸನ್ನಲ್ಲಿ ಸಮ್ಮರ್ ಹಾಗೂ ಸ್ಪ್ರಿಂಗ್ ಸೀಸನ್ನಲ್ಲಿ ಮರಳಿ ಟ್ರೆಂಡಿಯಾಗುವ ಬಗೆಬಗೆಯ ಫ್ಲೋರಲ್ ಪ್ರಿಂಟೆಡ್ ಸೀರೆಗಳು ಇದೀಗ ಮಾನ್ಸೂನ್ ಸೀಸನ್ನಲ್ಲೂ ಮುಂದುವರೆದಿವೆ. ಅಷ್ಟೇಕೆ! ಸೆಲೆಬ್ರೆಟಿಗಳನ್ನು ಸವಾರಿ ಮಾಡತೊಡಗಿವೆ.

ಮಾನುಶಿ ಉಟ್ಟ ಫ್ಲೋರಲ್ ಸೀರೆ
ಅಂದಹಾಗೆ, ಮಾಜಿ ಮಿಸ್ ವರ್ಲ್ಡ್ 2017 ಮಾನುಶಿ ಚಿಲ್ಲರ್ ಬಾಲಿವುಡ್ ನಟಿ ಕೂಡ. ಹಾಗಾಗಿ ಇವರು ಧರಿಸುವ ಉಡುಗೆಗಳು ಹಾಗೂ ಔಟ್ಫಿಟ್ಗಳು ಆಗಾಗ್ಗೆ ಟ್ರೆಂಡಿಯಾಗುತ್ತವೆ. ಇದೀಗ ಅವರು ಉಟ್ಟಿರುವ ಈ ಸಿಂಪಲ್ ಫ್ಲೋರಲ್ ಲೈಟ್ವೈಟ್ ಸೀರೆಯು ಮಾನ್ಸೂನ್ನಲ್ಲೂ ಟ್ರೆಂಡಿಯಾಗಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಲೈಟ್ ಕಲರ್ನ ಈ ಫ್ಲೋರಲ್ ಸೀರೆಗಳು ಇವರನ್ನು ಮಾತ್ರವಲ್ಲ, ಬಾಲಿವುಡ್ ಸೆಲೆಬ್ರೆಟಿಗಳನ್ನು ಬರಸೆಳೆದಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಮಾನ್ಸೂನ್ಗೆ ಮರಳಿದ್ದು ಯಾಕೆ?
ಈ ಹಿಂದೆ ಫ್ಲೋರಲ್ ವಿನ್ಯಾಸಗಳು ಕೇವಲ ಸಮ್ಮರ್ ಹಾಗೂ ಸ್ಪ್ರಿಂಗ್ಗೆ ಮಾತ್ರ ಸೀಮಿತ ಎಂಬಂತಿತ್ತು. ಇದೀಗ ಈ ವಿನ್ಯಾಸದವು ಮಾನ್ಸೂನ್ನಲ್ಲೂ ಚಾಲ್ತಿಯಲ್ಲಿವೆ. ಇದಕ್ಕೆ ಪ್ರಮುಖ ಕಾರಣ ಅವುಗಳ ಪ್ರಿಂಟ್ಸ್ ಹಾಗೂ ಮನೋಲ್ಲಾಸ ನೀಡುವ ಸಿಂಪಲ್ ವಿನ್ಯಾಸಗಳು ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಫ್ಲೋರಲ್ ಸೀರೆಗಳ ಸ್ಟೈಲಿಂಗ್ಗೆ 5 ಐಡಿಯಾ
- ನಿಮ್ಮ ಸ್ಕಿನ್ ಟೋನ್ಗೆ ತಕ್ಕಂತೆ ಫ್ಲೋರಲ್ ಸೀರೆಗಳ ಕಲರ್ ಆಯ್ಕೆ ಮಾಡಿ.
- ಬಿಗ್ ಹಾಗೂ ಸ್ಮಾಲ್ ಪ್ರಿಂಟ್ಸ್ ಇರುವ ಫ್ಲೋರಲ್ ಪ್ರಿಂಟ್ಸ್ನ ಆಯ್ಕೆ ನಿಮ್ಮ ಎತ್ತರ ಹಾಗೂ ಆಕಾರಕ್ಕೆ ತಕ್ಕಂತೆ ಚೂಸ್ ಮಾಡಬೇಕು.
- ಕುಳ್ಳಗಿರುವವರು ಆದಷ್ಟೂ ಸ್ಮಾಲ್ ಪ್ರಿಂಟ್ಸ್ ಆಯ್ಕೆ ಮಾಡುವುದು ಉತ್ತಮ,
- ಎತ್ತರವಿರುವವರಿಗೆ ಯಾವುದೇ ಬಗೆಯ ಪ್ರಿಂಟ್ಸ್ ಸೀರೆ ಕೂಡ ಮ್ಯಾಚ್ ಆಗುತ್ತದೆ.
- ಮಿನಿಮಲ್ ಆಕ್ಸೆಸರೀಸ್ ಧರಿಸಿದರೇ ಸಾಕು.