Monsoon Fashion 2026: ಮಳೆಗೆ ಬಂತು ವೈಬ್ರೆಂಟ್ ಕಲರ್ಸ್‌ನ ರೈನ್‌ಕೋಟ್ಸ್
ಮಾನ್ಸೂನ್‌ಗೆ ವೈಬ್ರೆಂಟ್ ಶೇಡ್ಸ್‌ನ ಬಣ್ಣಬಣ್ಣದ ರೈನ್‌ಕೋಟ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಔಟ್‌ಫಿಟ್ ಮೇಲೆ ಧರಿಸಿದರೂ ಟೈಟಾಗದ ಫಿಟ್ಟಿಂಗ್ ರೈನ್‌ಕೋಟ್ಸ್, ಟ್ರಾನ್ಸ್‌ಪರೆಂಟ್ ರೈನ್‌ಕೋಟ್ಸ್, ಚಿಣ್ಣರ ಫಂಕಿ ಡಬ್ಬಲ್ ಕವರ್ಡ್ ರೈನ್‌ಕೋಟ್‌ಗಳು ಎಂಟ್ರಿ ನೀಡಿವೆ. ಯಾವ್ಯಾವ ವರ್ಣದವು ಬಂದಿವೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಮಾಹಿತಿ ನೀಡಿದ್ದಾರೆ.
1/5
ಮಾನ್ಸೂನ್‌ಗೆ ವೈಬ್ರೆಂಟ್ ಬಣ್ಣದ ರೈನ್‌ಕೋಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
2/5
ವೆರೈಟಿ ರೈನ್‌ಕೋಟ್ಸ್
ಔಟ್‌ಫಿಟ್ ಮೇಲೆ ಧರಿಸಿದರೂ ಟೈಟಾಗಾದ ಫಿಟ್ಟಿಂಗ್ ರೈನ್‌ಕೋಟ್ಸ್, ಟ್ರಾನ್ಸಪರೆಂಟ್ ರೈನ್‌ಕೋಟ್ಸ್, ಚಿಣ್ಣರ ಫಂಕಿ ಡಬ್ಬಲ್ ಕವರ್ಡ್ ರೈನ್‌ಕೋಟ್‌ಗಳು ಎಂಟ್ರಿ ನೀಡಿವೆ.
3/5
ಮಳೆಗೆ ವಾಟರ್ ಪ್ರೂಫ್ ರೈನ್‌ಕೋಟ್ಸ್
ವಾಟರ್ ಪ್ರೂಫ್ ರೈನ್ ಕೋಟ್‌ಗಳಲ್ಲಿ ಲಾಂಗ್, ಶಾರ್ಟ್, ಜಾಕೆಟ್ ಶೈಲಿಯವು ಟ್ರೆಂಡಿಯಾಗಿವೆ. ಹಳದಿ, ಕೇಸರಿ, ರೆಡ್, ಪಿಸ್ತಾ, ನಿಯಾನ್ ವರ್ಣದ ಕಲರ್‌ಫುಲ್ ರೈನ್‌ಕೋಟ್‌ಗಳು ಎಲ್ಲೆಡೆ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್.
4/5
ಮಕ್ಕಳ ರೈನ್‌ಕೋಟ್
ಶಾಲಾ ಮಕ್ಕಳಿಗೆ ಕಲರ್‌ಫುಲ್ ಕಾಮಿಕ್ಸ್ ಪ್ರಿಂಟ್ ಹಾಗೂ ಚೋಟಾ ಭೀಮ್, ಫ್ಲವರ್ಸ್, ನಿಂಜಾ, ಮೊಗ್ಲಿ, ಡೋರೆಮನ್ ಸೇರಿದಂತೆ ಕಾರ್ಟೂನ್ ಕ್ಯಾರೆಕ್ಟರ್‌ಗಳ ಚಿತ್ತಾರವಿರುವಂತಹ ಹೂಡಿ ಶೈಲಿಯ ವೈಬ್ರೆಂಟ್ ಕಲರ್‌ನ ರೈನ್‌ಕೋಟ್‌ಗಳು ಮಾರುಕಟ್ಟೆಯಲ್ಲಿ ಬಂದಿವೆ.
5/5
ರೈನ್‌ಕೋಟ್ ಆಯ್ಕೆ ಹೇಗೆ?
- ರೈನ್‌ಕೋಟ್ ಕೊಳ್ಳಬೇಕಾದಲ್ಲಿಆದಷ್ಟೂ ಲಾಂಗ್ ರೈನ್‌ಕೋಟ್‌ಗಳನ್ನೇ ಪ್ರಿಫರ್ ಮಾಡಿ.
- ಅದಷ್ಟು ರೆಕ್ಸಿನ್ ಇಲ್ಲವೇ ನೀರು ಜಾರಿ ಹೋಗುವಂತಹ ರೈನ್‌ಕೋಟನ್ನು ಸೆಲೆಕ್ಟ್, ಮಾಡಿ.
- ಕಾಲೇಜು ತೆರಳುವ ಹುಡುಗಿಯರಾದಲ್ಲಿ ಟ್ರೆಂಚ್ ಕೋಟ್ ಶೈಲಿಯಲ್ಲಿಇರುವಂತದ್ದನ್ನು ಆಯ್ದುಕೊಳ್ಳಿ.
- ಸೀರೆ ಧರಿಸುವ ಮಹಿಳೆಯರಾದಲ್ಲಿಆದಷ್ಟು ಸೆಂಟರ್ ಸ್ಲಿಟ್ಸ್ ಇರುವ ರೈನ್ಕೋಟನ್ನು ಧರಿಸುವುದು ಉತ್ತಮ. ಯಾಕೆಂದರೇ ಇದು ವಾಕ್ ಮಾಡಲು ಸಹಕಾರಿ.
- ಪುರುಷರಿಗೆ ಆದಷ್ಟು ಬ್ಲಾಕ್ ಇಲ್ಲವೇ ಬ್ರೌನ್ ವರ್ಣದ ರೈನ್‌ಕೋಟ್ ಉತ್ತಮ ಆಯ್ಕೆ.
- ಕಾಲೇಜು ಹೈದರಿಗೆ ಕೊಂಚ ಫನ್ನಿ ಲುಕ್ ಅಥವಾ ಫಂಕಿ ಲುಕ್ ನೀಡುವ ಕ್ವಿರ್ಕ್ ಕಾನ್ಸೆಪ್ಟ್‌ನದ್ದು ಓಕೆ. ಕಲರ್‌ನದ್ದು ಟ್ರೈ ಮಾಡಬಹುದು.
- ದಪ್ಪ ಮೆಟೀರಿಯಲ್‌ನ ರೈನ್‌ಕೋಟ್ ಬೇಡ.
- ನೀರು ಹೀರದಂತಿರುವ ಮೆಟೀರಿಯಲ್‌ನದ್ದು ಕೊಳ್ಳಿ.
- ರೈನ್‌ಕೋಟ್ ಧರಿಸಿದಾಗ ಹೆಚ್ಚು ಆಕ್ಸೆಸರೀಸ್ ಧರಿಸಬೇಡಿ.