Monsoon Fashion 2026: ಮಾನ್ಸೂನ್ ಸೀಸನ್‌ನಲ್ಲಿ ಮರಳಿದ ಡಿಸೈನರ್ ಲಾಂಗ್ ಸ್ಲೀವ್ ಸೀರೆ ಬ್ಲೌಸ್‌ಗಳು
ಮಾನ್ಸೂನ್‌ನಲ್ಲಿ ಲಾಂಗ್ ಅಥವಾ ಫುಲ್ ಸ್ಲೀವ್ ಡಿಸೈನರ್ ಸೀರೆ ಬ್ಲೌಸ್‌ಗಳು ಮರಳಿ ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಮಿಕ್ಸ್ ಮ್ಯಾಚಿಂಗ್ ಹೇಗೆ? ಈ ಎಲ್ಲದರ ಬಗ್ಗೆ ಸೀರೆ ಎಕ್ಸ್‌ಪರ್ಟ್ಸ್ ವಿವರಿಸಿದ್ದಾರೆ. ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಮಾನ್ಸೂನ್‌ನಲ್ಲಿ ಲಾಂಗ್ ಅಥವಾ ಫುಲ್ ಸ್ಲೀವ್ ಡಿಸೈನರ್ ಸೀರೆ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಲಾಂಗ್ ಸ್ಲೀವ್, ಮೊಣ ಕೈ ವರೆಗಿನ ಬ್ಲೌಸ್ ಹಾಗೂ ತ್ರೀ ಫೋರ್ತ್ ಬ್ಲೌಸ್‌ಗಳು ಸೀರೆಗಳಿಗೆ ಜತೆಯಾಗಿವೆ. ಸೀರೆಯ ಸೌಂದರ್ಯವನ್ನು ಹೆಚ್ಚಿಸುತ್ತಿವೆ.
ಉದ್ದುದ್ದ ಸ್ಲೀವ್ ಇರುವ ಸೀರೆ ಬ್ಲೌಸ್‌ಗಳ ವಿಶೇಷತೆ
ಅಂದಹಾಗೆ, ಉದ್ದುದ್ದ ಸ್ಲೀವ್ ಇರುವ ಸೀರೆ ಬ್ಲೌಸ್‌ಗಳು ಬಹಳ ಹಿಂದಿನ ಕಾಲದಿಂದಲೂ ಇವೆ. ಅದರಲ್ಲೂ ಮಲೆನಾಡು ಅಥವಾ ಹಿಲ್ ಸ್ಟೇಷನ್‌ನಲ್ಲಿರುವ ಮಹಿಳೆಯರು ಕೈಗಳನ್ನು ಬೆಚ್ಚಗಿಡಲು ಆದಷ್ಟೂ ಈ ಡಿಸೈನ್‌ನ ಅಂದರೇ, ತುಂಬು ತೋಳಿನ ಸೀರೆ ಬ್ಲೌಸ್‌ಗಳನ್ನು ಧರಿಸುತ್ತಿದ್ದರು. ಬರಬರುತ್ತಾ ಈ ಶೈಲಿಯ ಬ್ಲೌಸ್‌ಗಳು ಟ್ರೆಂಡಿಯಾದವು ಎನ್ನುತ್ತಾರೆ ಬ್ಲೌಸ್ ಡಿಸೈನರ್ ಚೇತನಾ.
ಡಿಸೈನರ್ ಲಾಂಗ್ ಸ್ಲೀವ್‌ಗಳು
ಮೊದಲೆಲ್ಲಾ ಸಾದಾ ವಿನ್ಯಾಸದಲ್ಲಿ ಟ್ರೆಂಡಿಯಾಗಿದ್ದ ಲಾಂಗ್ ಸ್ಲೀವ್‌ಗಳು ಇತ್ತೀಚೆಗೆ ಡಿಸೈನರ್ ಬ್ಲೌಸ್‌ಗಳಾಗಿವೆ. ನಾನಾ ರೂಪ ಪಡೆದುಕೊಂಡಿವೆ. ಎಂಬ್ರಾಯ್ಡರಿ ಡಿಸೈನ್‌ನಿಂದಿಡಿದು, ಪ್ರಿಂಟೆಡ್ ಹಾಗೂ ಫ್ರಿಂಜ್, ಟ್ಯಾಸೆಲ್ಸ್ ಸೇರಿದಂತೆ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಕಾಲಿಟ್ಟಿವೆ. ಟ್ರೆಂಡಿಯಾಗಿವೆ.
ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ
ಕೊಂಚ ಪ್ಲಂಪಿಯಾಗಿರುವವರು ಉದ್ದುದ್ದ ಸ್ಲೀವ್ ಇರುವ ಬ್ಲೌಸ್ ಧರಿಸಿದಾಗ ನೋಡಲು ಎಲಿಗೆಂಟ್ ಲುಕ್ ನೀಡುವುದು. ಇನ್ನು, ತೀರಾ ತೆಳ್ಳಗಿರುವವರು ಆದಷ್ಟೂ ಉದ್ದುದ್ದದ ಸೀರೆ ಬ್ಲೌಸ್ ಅವಾಯ್ಡ್ ಮಾಡಬೇಕು. ಇಲ್ಲವಾದಲ್ಲಿ ಕೈಗಳು ಮತ್ತಷ್ಟು ತೆಳುವಾಗಿ ಕಾಣಿಸಬಹುದು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ರಿಚಾ.
ಲಾಂಗ್ ಸೀರೆ ಬ್ಲೌಸ್ ಟಿಪ್ಸ್
- ಸಾದಾ ಸೀರೆಗೆ ಡಿಸೈನರ್ ಹಾಗೂ ಹೆವ್ವಿ ವರ್ಕ್ ಇರುವಂತಹ ಲಾಂಗ್ ಬ್ಲೌಸ್ ಧರಿಸಬಹುದು.
- ಬ್ಲ್ಯಾಕ್ ಕಲರ್‌ನ ಲಾಂಗ್ ಬ್ಲೌಸನ್ನು ಎಲ್ಲಾ ಬಗೆಯ ಸೀರೆಗೆ ಮ್ಯಾಚ್ ಮಾಡಬಹುದು.
- ಕ್ರಾಪ್ ಟಾಪ್‌ನಂತಿರುವ ಲಾಂಗ್ ಬ್ಲೌಸನ್ನು ಇತರೇ ಉಡುಗೆಯೊಂದಿಗೂ ಮ್ಯಾಚ್ ಮಾಡಬಹುದು.