ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Monsoon Fashion 2026: ಕಾರ್ಪೊರೇಟ್‌ ಯುವತಿಯರನ್ನು ಸವಾರಿ ಮಾಡುತ್ತಿರುವ 4 ಮಾನ್ಸೂನ್‌ ಕೋಟ್‌ಗಳು

ಈ ಬಾರಿಯ ಮಾನ್ಸೂನ್‌ ಸೀಸನ್‌ನಲ್ಲಿ 4 ಶೈಲಿಯ ಮಾನ್ಸೂನ್‌ ಕೋಟ್‌ಗಳು ಕಾರ್ಪೊರೇಟ್‌ ಕ್ಷೇತ್ರದ ಯುವತಿಯರನ್ನು ಸವಾರಿ ಮಾಡುತ್ತಿವೆ. ಅವು ಯಾವುವು? ಸ್ಟೈಲಿಂಗ್‌ ಹೇಗೆ? ಈ ಎಲ್ಲದರ ಬಗ್ಗೆ ಫ್ಯಾಷನಿಸ್ಟಾಗಳು ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್‌
1/5

ಮಾನ್ಸೂನ್‌ ಸೀಸನ್‌ನಲ್ಲೂ ಫ್ಯಾಷನೆಬಲ್‌ ಆಗಿ ಕಾಣಿಸಲು ಸಹಕರಿಸುವ ಸ್ಟೈಲಿಶ್‌ ಕೋಟ್‌ಗಳು ಫ್ಯಾಷನ್‌ ಲೋಕದಲ್ಲಿ ಎಂಟ್ರಿ ನೀಡಿವೆ. ಅವುಗಳಲ್ಲಿ 4 ಶೈಲಿಯ ಕೋಟ್‌ಗಳು ಕಾರ್ಪೊರೇಟ್‌ ಕ್ಷೇತ್ರದ ಯುವತಿಯರನ್ನು ಈಗಾಗಲೇ ಸವಾರಿ ಮಾಡುತ್ತಿವೆ.

2/5

ಟ್ರಾಪಿಕಲ್‌ ಪ್ರಿಂಟೆಡ್‌ ಕೋಟ್‌ಗಳು

ಹೂ, ಎಲೆ, ಚಿಗುರು, ಬಳ್ಳಿ, ಚಿಕ್ಕ-ಪುಟ್ಟ ಗಿಡಗಳು ಸೇರಿದಂತೆ ನಾನಾ ಬಗೆಯ ಪ್ರಿಂಟ್‌ಗಳನ್ನು ಟ್ರಾಪಿಕಲ್‌ ಪ್ರಿಂಟ್ಸ್‌ನಲ್ಲಿ ಕಾಣಬಹುದು. ಇವು ನೋಡಲು ಪರಿಸರ ಪ್ರೇಮಿಯಂತೆ ಬಿಂಬಿಸುತ್ತವೆ.

ಅನಿಮಲ್‌ ಪ್ರಿಂಟೆಡ್‌ ಕೋಟ್‌ಗಳು

ಚೀತಾ, ಜಿಬ್ರಾ, ಕೌ, ಕ್ಯಾಟ್‌ ಸೇರಿದಂತೆ ನಾನಾ ಪ್ರಾಣಿಗಳ ಪ್ರಿಂಟ್‌ ಹೊಂದಿರುವ ಅನಿಮಲ್‌ ಪ್ರಿಂಟೆಡ್‌ ಕೋಟ್‌ಗಳು ವೈಲ್ಡ್ ಪಾರ್ಟಿ ಪ್ರಿಯರನ್ನು ಸೆಳೆದಿವೆ. ನೈಟ್‌ ಪಾರ್ಟಿ, ಔಟ್‌ ಸೈಡ್‌ ಪಾರ್ಟಿಗಳಲ್ಲಿ ಇವನ್ನು ಮೇಲುಡುಪಂತೆ ಧರಿಸುವುದು ಹೆಚ್ಚಾಗಿದೆ.

3/5

ಚೆಕ್ಸ್ ಪ್ರಿಂಟ್ಸ್‌ನ ಕೋಟ್‌ಗಳು

ಚಿಕ್ಕ ಚೆಕ್ಸ್, ದೊಡ್ಡ ಚೆಕ್ಸ್, ಗಿಂಗ್ನಂ ಸ್ಟೈಲಿನ ಚೆಕ್ಸ್ ಹೀಗೆ ಇತ್ತೀಚೆಗೆ ನಾನಾ ಶೈಲಿಯ ಚೆಕ್ಸ್ ಪ್ಯಾಟರ್ನ್‌ ಇರುವಂತಹ ಕೋಟ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇವು ಕಚೇರಿಯ ಮೀಟಿಂಗ್‌ ಅಥವಾ ಬಿಸ್ನೆಸ್‌ ಮೀಟಿಂಗ್‌ಗಳಲ್ಲಿ ಧರಿಸುವುದು ಕಾಮನ್‌ ಆಗಿದೆ. ಇವು ಆಫಿಷಿಯಲ್‌ ಲುಕ್‌ ನೀಡುತ್ತವೆ.

4/5

ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್‌ನ ಕೋಟ್‌ಗಳು

ಊಹೆಗೂ ಮೀರಿದ ಮಾಡರ್ನ್‌ ಆರ್ಟ್‌ನಂತೆ ಚಿತ್ತಾರ, ಬ್ರಷ್‌ ಸ್ಟ್ರೋಕ್‌ ಸೇರಿದಂತೆ ನಾನಾ ಬಗೆಯವು ಈ ಶೈಲಿಯ ಪ್ರಿಂಟೆಡ್‌ನಲ್ಲಿ ಬಂದಿವೆ. ಇವು ಕೂಡ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

5/5

ಹೀಗಿರಲಿ ಪ್ರಿಂಟೆಡ್‌ ಕೋಟ್‌ಗಳ ಸ್ಟೈಲಿಂಗ್‌

  • ಸಾದಾ ಕಾಲರ್‌ ನೆಕ್‌ ಅಥವಾ ಟರ್ಟಲ್‌ ನೆಕ್‌ಲೈನ್‌ನ ಟೀ ಶರ್ಟ್ ಈ ಕೋಟ್‌ಗಳ ಒಳಗೆ ಧರಿಸಬಹುದು.
  • ಮಾಡರ್ನ್‌ ಲುಕ್‌ಗಾಗಿ ಈ ಕೋಟ್‌ಗಳನ್ನು ಧರಿಸಬಹುದು.
  • ಸೀರೆಯ ಮೇಲೂ ಸ್ಟೈಲಿಶ್‌ ಆಗಿ ಕಾಣಿಸಬಹುದು.
  • ಜೀನ್ಸ್ ಹಾಗೂ ಟೈಟ್‌ ಪ್ಯಾಂಟ್‌ಗಳ ಮೇಲೂ ಧರಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author