ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Monsoon Fashion 2026: ಮಳೆಗಾಲಕ್ಕೂ ಮರಳಿದ ತ್ರೀ ಪೀಸ್‌ ಕಾಟನ್‌ ಶರಾರ ಸೂಟ್‌ಗಳು

ಬೇಸಿಗೆಯಲ್ಲಿ ಟ್ರೆಂಡಿಯಾಗಿದ್ದ ಸಿಂಪಲ್‌ ಕಾಟನ್‌ ಶರಾರ ಸೂಟ್‌ಗಳು ಮಳೆಗಾಲದಲ್ಲಿಯೂ ಮುಂದುವರೆದಿವೆ. ಕಳೆದ ಬೇಸಿಗೆಯಲ್ಲಿ ಟ್ರೆಂಡಿಯಾಗಿದ್ದ ವೈವಿಧ್ಯಮಯ ಸಿಂಪಲ್‌ ಕಾಟನ್‌ ಶರಾರ ಸೂಟ್‌ಗಳು ಈ ಸಾಲಿನ ಮಳೆಗಾಲದಲ್ಲಿಯೂ ಮುಂದುವರೆದಿವೆ. ಸಮ್ಮರ್‌ ಸೀಸನ್‌ ಮುಗಿದರೂ ಕೂಡ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲಾ ವರ್ಗದ ಮಾನಿನಿಯರನ್ನು ಸವಾರಿ ಮಾಡುತ್ತಿವೆ.

ಚಿತ್ರಗಳು: ಸನಾ ಮಕ್ಬೂಲ್‌, ನಟಿ
1/5

ಮಾನ್ಸೂನ್‌ ಸೀಸನ್‌ನಲ್ಲಿಯೂ ತ್ರೀ ಪೀಸ್‌ ಕಾಟನ್‌ ಶರಾರ ಸೂಟ್‌ಗಳು ಟ್ರೆಂಡಿಯಾಗಿವೆ. ಮುಂದುವರೆದಿವೆ.

2/5

ವೈವಿಧ್ಯಮಯ ಸಿಂಪಲ್‌ ಕಾಟನ್‌ ಶರಾರ ಸೂಟ್‌ಗಳು

ಹೌದು, ಕಳೆದ ಬೇಸಿಗೆಯಲ್ಲಿ ಟ್ರೆಂಡಿಯಾಗಿದ್ದ ವೈವಿಧ್ಯಮಯ ಸಿಂಪಲ್‌ ಕಾಟನ್‌ ಶರಾರ ಸೂಟ್‌ಗಳು ಈ ಸಾಲಿನ ಮಳೆಗಾಲದಲ್ಲಿಯೂ ಮುಂದುವರೆದಿವೆ. ಸಮ್ಮರ್‌ ಸೀಸನ್‌ ಮುಗಿದರೂ ಕೂಡ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲಾ ವರ್ಗದ ಮಾನಿನಿಯರನ್ನು ಸವಾರಿ ಮಾಡುತ್ತಿವೆ. ಎಲಿಗೆಂಟ್‌ ಹಾಗೂ ಡಿಸೆಂಟ್‌ ಲುಕ್‌ ಬಯಸುವ ಮಾನಿನಿಯರನ್ನು ಸೆಳೆದಿವೆ.

3/5

ತ್ರೀ ಪೀಸ್‌ ಕಾಟನ್‌ ಶರಾರ ಸೂಟ್‌

ಜಾರ್ಜೆಟ್‌, ಶಿಫಾನ್‌, ಕ್ರೇಪ್‌, ಸಿಲ್ಕ್‌ ಹೀಗೆ ನಾನಾ ಫ್ಯಾಬ್ರಿಕ್‌ಗಳಲ್ಲಿ ಪ್ರಚಲಿತದಲ್ಲಿದ್ದ ತ್ರೀ ಪೀಸ್‌ ಶರಾರ ಸೂಟ್‌ಗಳು ನಂತರ ಕಾಟನ್‌ ಫ್ಯಾಬ್ರಿಕ್‌ನಲ್ಲಿಯೂ ಬಿಡುಗಡೆಗೊಂಡು ಶರಾರ ಪ್ರಿಯರ ಮನ ಗೆದ್ದಿದ್ದವು. ಕುರ್ತಾ, ಶರಾರ ಪ್ಯಾಂಟ್‌ ಹಾಗೂ ದುಪಟ್ಟಾ ಸೇರಿದಂತೆ ತ್ರೀ ಪೀಸ್‌ ಸೂಟ್‌ ರೂಪದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡು ಬೇಡಿಕೆ ಸೃಷ್ಟಿಸಿಕೊಂಡವು. ಎಲ್ಲದಕ್ಕಿಂತ ಹೆಚ್ಚಾಗಿ ಹ್ಯಾಂಡ್‌ಮೇಡ್‌ ಥ್ರೆಡ್‌ ಡಿಸೈನ್‌ ಹಾಗೂ ಮೆಷಿನ್‌ ಎಂಬ್ರಾಯ್ಡರಿ ಇರುವಂತಹ ಕಾಟನ್‌ ಶರಾರ ಸೂಟ್‌ಗಳು ಅತಿ ಹೆಚ್ಚು ಡಿಮ್ಯಾಂಡ್‌ ಹೆಚ್ಚಿಸಿಕೊಂಡವು ಎನ್ನುತ್ತಾರೆ ಮಾರಾಟಗಾರರು.

4/5

ಸನಾ ಮಕ್ಬೂಲ್‌ ಶರಾರ ಸೂಟ್‌

ಫ್ಯಾಷನ್‌ ವಿಮರ್ಶಕರ ಪ್ರಕಾರ, ಇತ್ತೀಚೆಗೆ ಹಿಂದಿ ಬಿಗ್‌ಬಾಸ್‌ ಸ್ಪರ್ಧಿ ಸನಾ ಮಕ್ಬೂಲ್‌ ಕಾಣಿಸಿಕೊಂಡಿದ್ದ ತ್ರೀ ಪೀಸ್‌ ಕಾಟನ್‌ ವೈಟ್‌ ಶರಾರ ಸೂಟ್‌ ಸಾಕಷ್ಟು ಹುಡುಗಿಯರಿಗೆ ಇಷ್ಟವಾಗಿತ್ತು. ಸಿಂಪಲ್‌ ಆಗಿ ಕಾಣಿಸುವುದರೊಂದಿಗೆ ಅವರ ಸೌಂದರ್ಯವನ್ನು ಈ ಸೂಟ್‌ ಇಮ್ಮಡಿಗೊಳಿಸಿತ್ತು. ಇದಕ್ಕೆ ಪೂರಕ ಎಂಬಂತೆ ಆನ್‌ಲೈನ್‌ ಮಾರಾಟಗಾರರು ಇದೇ ಸಮಯದಲ್ಲಿ ಮತ್ತಷ್ಟು ಶರಾರ ಸೂಟ್‌ಗಳನ್ನು ಪರಿಚಯಿಸಿದರು. ಪರಿಣಾಮ, ಈ ಸೀಸನ್‌ನಲ್ಲೂ ಬೇಡಿಕೆ ಮುಂದುವರಿಯಿತು ಎನ್ನುತ್ತಾರೆ.

5/5

ತ್ರೀ ಪೀಸ್‌ ಕಾಟನ್‌ ಶರಾರ ಸೂಟ್‌ ಟಿಪ್ಸ್‌

  • ಕೊಳ್ಳುವ ಮುನ್ನ ಟ್ರಯಲ್‌ ನೋಡಿ.
  • ವೈಟ್‌, ಆಫ್‌ ವೈಟ್‌ ಅಥವಾ ಕ್ರೀಮ್‌ ಶರಾರ ಸೂಟ್‌ನ ನಿರ್ವಹಣೆಯನ್ನು ಸರಿಯಾಗಿ ತಿಳಿದುಕೊಳ್ಳಿ.
  • ಸಿಂಪಲ್‌ ಲುಕ್‌ ಅಂದವಾಗಿ ಕಾಣಿಸುತ್ತದೆ.
  • ಮೇಕೋವರ್‌ ಕೂಡ ನೋಡಲು ಸಿಂಪಲ್‌ ಆಗಿರುವುದು ಅಗತ್ಯ.
  • ಮ್ಯಾಚಿಂಗ್‌ ಸ್ಯಾಂಡಲ್ಸ್‌, ಆಕ್ಸೆಸರೀಸ್‌ ಧರಿಸಿ.

ಶೀಲಾ ಸಿ ಶೆಟ್ಟಿ

View all posts by this author