Monsoon Fashion 2026: ಮಳೆಗಾಲದಲ್ಲಿ ಶ್ವಾನಗಳಿಗೂ ಬಂತು ಟ್ರೆಂಡಿ ಫ್ಯಾಷನ್‌ವೇರ್ಸ್
Trendy Fashionwear and Accessories: ಮಳೆಗಾಲದಲ್ಲಿ ಮನೆಯ ಶ್ವಾನಗಳನ್ನು ಅಲಂಕರಿಸುವ ವಿನೂತನ ಬಗೆಯ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳು ಎಂಟ್ರಿ ನೀಡಿವೆ. ಜತೆಗೆ ಕಲರ್‌ಫುಲ್ ವೈಬ್ರೆಂಟ್ ರೈನ್‌ಕೋಟ್‌ಗಳು ಬಂದಿವೆ. ಯಾವುದೆಲ್ಲಾ ಟ್ರೆಂಡಿಯಾಗಿವೆ? ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಮನೆಯ ಪ್ರೀತಿ-ಪಾತ್ರವಾಗಿರುವ ಶ್ವಾನಗಳಿಗೆ ಈ ಮಳೆಗಾಲದಲ್ಲಿ ವಿನೂತನ ಬಗೆಯ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳು ಲಗ್ಗೆ ಇಟ್ಟಿವೆ.
ಶ್ವಾನಗಳೊಂದಿಗೆ ಮಾನ್ಸೂನ್ ಮ್ಯಾಚಿಂಗ್
ನಿಮಗೆ ಗೊತ್ತೇ! ಶ್ವಾನ ಪ್ರಿಯರು ಕೂಡ ಈ ಸೀಸನ್‌ನಲ್ಲಿ ತಮ್ಮ ಮುದ್ದು ನಾಯಿಮರಿಗಳೊಂದಿಗೆ ಮ್ಯಾಚ್ ಮಾಡಿ ಧರಿಸಬಹುದು. ಹೌದು, ಮಾಲೀಕರು ಧರಿಸುವ ಔಟ್‌ಫಿಟ್‌ಗಳಿಗೆ ತಕ್ಕಂತೆ ಅದೇ ಶೈಲಿಯವನ್ನು ಮ್ಯಾಚ್ ಮಾಡಿ ಧರಿಸುವುದು ಇತ್ತೀಚೆಗೆ ಕಾಮನ್ ಆಗಿದೆ. ನಾಯಿಗಳಿಗೂ ಕಸ್ಟಮೈಸ್ಡ್ ಡಿಸೈನರ್‌ವೇರ್ ಸಿದ್ಧಪಡಿಸಿಕೊಡುವ ಡಿಸೈನರ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣ ಸಿಗತೊಡಗಿದ್ದಾರೆ ಎನ್ನುತ್ತಾರೆ ಡಾಗ್ ಲವರ್ಸ್ ರಾಶಿ ಹಾಗೂ ಜೆನ್.
ನಾಯಿಗಳೊಂದಿಗೆ ಟ್ವಿನ್ನಿಂಗ್
ಕೇವಲ ವ್ಯಕ್ತಿಗಳೊಂದಿಗೆ ಹಾಗೂ ಆಪ್ತರೊಂದಿಗೆ ಇದ್ದ ಟ್ವಿನ್ನಿಂಗ್ ಕಾನ್ಸೆಪ್ಟ್ ಇದೀಗ ನಾಯಿ ಮರಿಗಳೊಂದಿಗೂ ಸ್ಟಾರ್ಟ್ ಆಗಿದೆ. ಒಂದೇ ಬಣ್ಣ ಅಥವಾ ಡಿಸೈನ್‌ನ ಡಿಸೈನರ್‌ವೇರ್‌ಗಳನ್ನು ಕಸ್ಟಮೈಸ್ ಮಾಡಿಸುವ ಕಾನ್ಸೆಪ್ಟ್ ಶುರುವಾಗಿದೆ.
ನಾಯಿಗಳಿಗೂ ವೈಬ್ರೆಂಟ್ ರೈನ್ ಕೋಟ್ಸ್
ನಾಯಿಗಳಿಗೂ ಕಲರ್‌ಫುಲ್ ವೈಬ್ರೆಂಟ್ ರೈನ್‌ಕೋಟ್‌ಗಳು ಬಂದಿವೆ. ಶ್ವಾನಗಳ ಪೋಷಕರು, ಈ ಮಾನ್ಸೂನ್ ಡಾಗ್ ರೈನ್‌ಕೋಟ್‌ಗನ್ನು ಖರೀದಿ ಮಾಡತೊಡಗಿದ್ದಾರೆ. ಬೇಡಿಕೆ ಹೆಚ್ಚಾದಂತೆ, ಸಿಂಥಟಿಕ್, ಪಾಲಿಸ್ಟರ್ ಸೇರಿದಂತೆ ವಾಟರ್ ಪ್ರೂಫ್ ಫ್ಯಾಬ್ರಿಕ್‌ನಲ್ಲಿ ಇವು ನಾನಾ ಡಿಸೈನ್‌ನಲ್ಲಿ ಆಗಮಿಸಿವೆ.
ಪೆಟ್ಸ್ ರೈನ್ ಬೂಟ್ಸ್
ನಾಯಿ ಮರಿಗಳಿಗೆ ರಸ್ತೆಯ ಹಾಗೂ ನೆಲದ ಕೊಚ್ಚೆ, ಕೆಸರು ಹತ್ತದಂತೆ ಕಾಪಾಡಬಹುದಾದ ಪುಟ್ಟ ಪುಟ್ಟ ರೈನ್ ಬೂಟ್ಸ್‌ಗಳು ಕೂಡ ನಾನಾ ವಿನ್ಯಾಸದಲ್ಲಿ ಪೆಟ್ ಶಾಪ್‌ಗಳಿಗೆ ಬಂದಿವೆ. ಇನ್ನು, ಡಾಗ್ ಟವೆಲ್ಸ್ ಹಾಗೂ ವೈಪ್ಸ್ ಸೇರಿದಂತೆ, ಬೋ ಹಾಗೂ ಬೆಲ್ಟ್‌ಗಳು ಕೂಡ ಪೆಟ್ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ.