Monsoon Fashion Tips 2026: ಮಾನ್ಸೂನ್‌ನಲ್ಲಿ ಜಾಕೆಟ್ ಪ್ರಿಯರಿಗೆ 6 ಸಿಂಪಲ್ ಐಡಿಯಾ
Monsoon Fashion Tips: ಡ್ರೆಸ್‌ಗಳ ಮೇಲೆ ಬಗೆಬಗೆಯ ಶೈಲಿಯಲ್ಲಿ ಜಾಕೆಟ್ ಧರಿಸಿ ಹೇಗೆಲ್ಲಾ ಸ್ಟೈಲಿಶ್ ಆಗಿ ಕಾಣಿಸಬಹುದು? ಅದಕ್ಕಾಗಿ ಏನು ಮಾಡಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಮಳೆಗಾಲದಲ್ಲಿ ಬಗೆಬಗೆಯ ಜಾಕೆಟ್ ಧರಿಸಿ, ಡಿಫರೆಂಟ್ ಸ್ಟೈಲಿಂಗ್ ಮಾಡಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದು ಅದು ಹೇಗೆ ಅಂತಿರಾ? ಅದಕ್ಕಾಗಿ ಒಂದಿಷ್ಟು ಟಿಪ್ಸ್ ಫಾಲೋ ಮಾಡಬೇಕು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಟ್ರೆಂಡಿ ಜಾಕೆಟ್ ಸ್ಟೈಲಿಂಗ್
ಟ್ರೆಂಡಿಯಾಗಿರುವ ವೆಸ್ಟರ್ನ್ ಹಾಗೂ ಯಾವುದೇ ಕ್ಯಾಶುವಲ್ ಉಡುಪಿನ ಮೇಲೆ ಜಾಕೆಟ್ ಧರಿಸುವಂತವರು ಆದಷ್ಟೂ ಕಂಟೆಂಪರರಿ ಅಂದರೇ, ಟ್ರೆಂಡಿಯಾಗಿರುವ ಡಿಸೈನ್‌ನ ಜಾಕೆಟ್ ಆಯ್ಕೆ ಮಾಡಿ ಧರಿಸಬೇಕು.
ಜಾಕೆಟ್ ಜತೆ ಕಡಿಮೆ ಜ್ಯುವೆಲರಿ ಧರಿಸಿ
ಯಾವುದೇ ಜಾಕೆಟ್ ಧರಿಸಿದರೂ ಕೂಡ ಹೆಚ್ಚು ಜ್ಯುವೆಲರಿ ಧರಿಸಕೂಡದು. ಇದು ನೋಡಲು ಮೆಸ್ಸಿಯಾಗಿ ಕಾಣಿಸಬಹುದು. ಹಾಗಾಗಿ ಜಾಕೆಟ್ ಧರಿಸಿದಾಗ ಮಿನಿಮಲ್ ಆಕ್ಸೆಸರೀಸ್ ಧರಿಸುವುದು ಉತ್ತಮ.
ಎಥ್ನಿಕ್ ಡ್ರೆಸ್‌ಗೆ ಇಂಡೋ-ವೆಸ್ಟರ್ನ್ ಲುಕ್
ಎಥ್ನಿಕ್ ಡ್ರೆಸ್ಗೆ ವೆಸ್ಟರ್ನ್ ಲುಕ್ನೀಡುವ ಜಾಕೆಟ್ ಅಷ್ಟಾಗಿ ಹೊಂದದು. ಧರಿಸಲೇಬೇಕಿದ್ದಲ್ಲಿ ಇಂಡೋ-ವೆಸ್ಟರ್ನ್ ಲುಕ್ ನೀಡಿ. ಮೇಕೋವರ್ ಸೂಕ್ತವಾಗಿರಬೇಕು. ಜಾಕೆಟ್‌ನೊಂದಿಗೆ ಧರಿಸುವ ಉಡುಪು ಪ್ರಿಂಟೆಡ್‌ನದ್ದಾಗಿರಬೇಕು. ಅದಕ್ಕೆ ಸಾದಾ ಸಾಲಿಡ್ ಶೇಡ್‌ನ ಜಾಕೆಟ್ ಧರಿಸಬೇಕು. ಇನ್ನು, ಸಾದಾ ಡ್ರೆಸ್‌ಗೆ ಪ್ರಿಂಟೆಡ್ ಜಾಕೆಟ್ ಧರಿಸಬೇಕು.
ಫಂಕಿ ಜಾಕೆಟ್ ಸ್ಟೈಲಿಂಗ್
ಫಂಕಿ ಜಾಕೆಟ್ ಪ್ರಿಯರು ವೆಸ್ಟರ್ನ್ ಲುಕ್ ಉಡುಪುಗಳನ್ನೇ ಇದಕ್ಕೆ ಮ್ಯಾಚ್ ಮಾಡುವುದು ಉತ್ತಮ. ಜೆನ್ ಜಿ ಹುಡುಗಿಯರು ಈ ಜಾಕೆಟ್ ಪ್ರಿಯರಾಗಿರುವುದರಿಂದ ಓವರ್‌ಸೈಝ್ ಜಾಕೆಟ್‌ಗಳು ಈ ಸೀಸನ್ ಟ್ರೆಂಡ್‌ನಲ್ಲಿವೆ ಎಂಬುದನ್ನು ನೆನಪಿನಲ್ಲಿಡಿ.
ಸೀರೆಯೊಂದಿಗೆ ಜಾಕೆಟ್ ಸ್ಟೈಲಿಂಗ್
ಸೀರೆಯೊಂದಿಗೆ ಜಾಕೆಟ್ ಧರಿಸುವವರು ವಿಭಿನ್ನ ಲುಕ್ ನೀಡಬೇಕೆಂದುಕೊಂಡಿದ್ದಲ್ಲಿ ಹೀಗೆ ಮಾಡಬಹುದು. ಉಡುವ ಸೀರೆಯ ಬಣ್ಣಕ್ಕೆ ಹೊಂದುವಂತಹ ಜಾಕೆಟ್ ಧರಿಸಿ, ಸೆರಗನ್ನು ಜಾಕೆಟ್ ಮೇಲೆ ಡ್ರೆಪ್ ಮಾಡಿ, ಅಂದವಾಗಿ ಡಿಫರೆಂಟಾಗಿ ಇಂಡೋ-ವೆಸ್ಟರ್ನ್ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳಬಹುದು.
ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಸ್ಟೈಲಿಂಗ್
ಜಾಕೆಟ್ ಹಾಗೂ ಡ್ರೆಸ್ಸನ್ನು ಮಿಕ್ಸ್ ಮಾಡುವ ಕಾನ್ಸೆಪ್ಟ್ ಇಂದು ತೀರಾ ಹೆಚ್ಚಾಗಿದೆ. ಹಾಗಾಗಿ ಸ್ಲಿಮ್ ಇರುವವರು ಯಾವುದೇ ಜಾಕೆಟ್ ಧರಿಸಿದರೂ ಅಂದವಾಗಿ ಕಾಣಿಸುತ್ತದೆ. ನೋ ಪ್ರಾಬ್ಲಂ! ಇನ್ನು, ಪ್ಲಂಪಿಯಾಗಿರುವವರು ಮಾತ್ರ, ಸ್ಲಿಮ್ ಫಿಟ್ ಜಾಕೆಟ್ ಆಯ್ಕೆ ಮಾಡಿ ಧರಿಸುವುದು ಬೆಸ್ಟ್ ಎನ್ನುತ್ತಾರೆ ಸ್ಟೈಲಿಸ್ಟ್ ಚೇತು.