Monsoon Fashion Tips 2026: ಯುವತಿಯರ ಮಾನ್ಸೂನ್ ಫ್ಯಾಷನ್‌ವೇರ್ಸ್ ಹೀಗಿದ್ದರೇ ಚೆನ್ನ!
Monsoon Fashion Tips: ಮಾನ್ಸೂನ್ ಸೀಸನ್‌ನಲ್ಲಿ ಯುವತಿಯರು ಧರಿಸುವ ಸ್ಟೈಲಿಶ್ ಡ್ರೆಸ್‌ಗಳು ಹೇಗಿರಬೇಕು? ಹೇಗಿರಬಾರದು? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ತಿಳಿಸಿದ್ದು, ಈ ಕುರಿತಂತೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಮಾನ್ಸೂನ್‌ನಲ್ಲಿ ಯುವತಿಯರು ಧರಿಸುವ ಉಡುಪುಗಳು ನೋಡಲು ಆಕರ್ಷಕವಾಗಿದ್ದರಷ್ಟೇ ಸಾಲದು, ಧರಿಸಿದಾಗ ಕಂಫರ್ಟಬಲ್ ಆಗಿರಬೇಕು, ಎಲ್ಲದಕ್ಕಿಂತ ಹೆಚ್ಚಾಗಿ ಸೀಸನ್‌ಗೆ ತಕ್ಕಂತಿರಬೇಕು ಎನ್ನುತ್ತಾರೆ ಫ್ಯಾಷನಿಸ್ಟಾ ಜೆನ್.
ಸೀಸನ್‌ಗೆ ತಕ್ಕಂತೆ ಬದಲಾಗುವ ಫ್ಯಾಷನ್‌ವೇರ್ಸ್
ಅವರ ಪ್ರಕಾರ, ಆಯಾ ವರ್ಗದ ಅನುಗುಣವಾಗಿ ಹುಡುಗಿಯರು ಧರಿಸುವ ಉಡುಪುಗಳು ಬದಲಾಗುತ್ತವಂತೆ. ಅದರಲ್ಲೂ, ಜೆನ್ ಜಿ ಹುಡುಗಿಯರು, ಯಾವುದೇ ಸೀಸನ್ ಟ್ರೆಂಡ್ ಫಾಲೋ ಮಾಡುವುದಿಲ್ಲ, ಬದಲಾಗಿ ತಮ್ಮದೇ ಆದ ಸ್ಟೈಲಿಶ್ ಮಾರ್ಗವನ್ನು ಹಿಡಿಯುತ್ತಾರಂತೆ. ಅಂದ ಹಾಗೆ, ಇದೆಲ್ಲಾ ಓಕೆ, ಹಾಗೆಂದು ಸೀಸನ್‌ಗೆ ವಿರುದ್ಧವಾಗಿ ಕಾಣಿಸುವುದು ದಿನಚರಿಯಾಗಬಾರದು! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮಾನ್ಸೂನ್ ಡ್ರೆಸ್‌ಗಳ ಲಿಸ್ಟ್
ಮಳೆಗಾಲದಲ್ಲಿ ಟ್ರೆಂಡಿಯಾಗುವ ಜಾಕೆಟ್ ಡ್ರೆಸ್, ಕೋಟ್ ಡ್ರೆಸ್-ಫ್ರಾಕ್ಸ್, ಸ್ಕೆಟರ್ ಡ್ರೆಸ್, ಮಿಡಿ ಡ್ರೆಸ್, ಹೈ ವೇಸ್ಟ್ ಶಾಟ್ಸ್ ಆಯ್ಕೆ ಮಾಡಬಹುದು. ಇವು ಸ್ಟೈಲಿಶ್ ಆಗಿ ಕಾಣಿಸುವುದರ ಜತೆಗೆ ಟ್ರೆಂಡಿಯಾಗಿಯೂ ಬಿಂಬಿಸುತ್ತವೆ.
ಶಾರ್ಟ್ ಪ್ಯಾಂಟ್‌ಗಳಿಗೆ ಓಕೆ ಹೇಳಿ
ಕೇಪ್ರೀಸ್, ಆಂಕೆಲ್ ಲೆಂಥ್, ಕ್ರಾಪ್ಡ್ ಪ್ಯಾಂಟ್, ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಪುಶ್ ಬ್ಯಾಕ್‌ನಂತಹ ಪ್ಯಾಂಟ್‌ಗಳನ್ನು ಧರಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಪಲ್ಹಾಜೋ, ಪ್ಯಾರಲಲ್, ಬೂಟ್ ಕಟ್, ಶರರಾ, ಘರಾರದಂತಹ ಅಗಲವಾದ ನೆಲಹಾಸುವಂತಹ ಪ್ಯಾಂಟ್‌ಗಳನ್ನು ಧರಿಸಬೇಡಿ.
ನೆಲ ಮುಟ್ಟುವ ಗೌನ್‌ಗಳನ್ನು ದೂರವಿಡಿ
ಹೊರಗಡೆ ನಡೆಯುವಾಗ ನೆಲವನ್ನು ಮುಟ್ಟುವಂತಹ ಉದ್ದುದ್ದ ಮ್ಯಾಕ್ಸಿ, ಗೌನ್‌ಗಳಿಗೆ ಸದ್ಯಕ್ಕೆ ಬೈ ಹೇಳಿ. ಇವು ನೋಡಲು ಮಾತ್ರ ಆಕರ್ಷಕವಾಗಿ ಕಾಣಿಸುತ್ತವೆ. ಇವನ್ನು ನಿರ್ವಹಣೆ ಮಾಡುವುದು ಕಷ್ಟ.
ಲೈಟ್‌ವೇಟ್ ಉಡುಗೆ ಧರಿಸಿ
ಲೇಯರಿಂಗ್ ಹೆಸರಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಉಡುಗೆಗಳು ಉಸಿರುಕಟ್ಟಿಸಬಹುದು. ಮಳೆಯಲ್ಲಿ ಒದ್ದೆಯಾದರಂತೂ ಕಿರಿಕಿರಿ ಎನಿಸಬಹುದು. ಇದನ್ನು ಅವಾಯ್ಡ್ ಮಾಡಲು, ಬೇಗನೇ ಒಣಗುವ ಲೈಟ್‌ವೇಟ್ ಡ್ರೆಸ್‌ಗಳಿಗೆ ಸೈ ಎನ್ನಿ.
ಹೆವ್ವಿ ಡಿಸೈನರ್‌ವೇರ್ ಅವಾಯ್ಡ್ ಮಾಡಿ
ಹೆವ್ವಿ ಎಥ್ನಿಕ್‌ವೇರ್‌ಗಳನ್ನು ಅವಾಯ್ಡ್ ಮಾಡಿ. ಎಥ್ನಿಕ್‌ವೇರ್ ಧರಿಸಲೇ ಬೇಕಿದ್ದಲ್ಲಿ ಆದಷ್ಟೂ ಆಂಕೆಲ್ ಲೆಂಥ್ ಡಿಸೈನರ್‌ವೇರ್ಸ್ ಸೆಲೆಕ್ಟ್ ಮಾಡಿ. ಶಾರ್ಟ್ ಕುರ್ತಾ, ಆಂಕೆಲ್ ಲೆಂಥ್ ಚೂಡಿದಾರ್, ಸಲ್ವಾರ್‌ಗಳನ್ನು ಧರಿಸಿ.