ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Monsoon Kids Fashion 2026: ಮಕ್ಕಳನ್ನು ಕ್ಯೂಟಾಗಿಸುವ ಮಾನ್ಸೂನ್ ಫ್ಯಾಷನ್‌ವೇರ್‌ಗಳಿವು

ಮಳೆಗಾಲದಲ್ಲಿ ಮಕ್ಕಳನ್ನು ಕ್ಯೂಟ್ ಆಗಿಸುವ ನಾನಾ ಬಗೆಯ ಮಾನ್ಸೂನ್ ಕಿಡ್ಸ್‌ವೇರ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ದೊಡ್ಡವರು ಧರಿಸುವಂತಹ ಡಿಸೈನರ್‌ವೇರ್ಸ್ ಹಾಗೂ ಫ್ಯಾಷನ್‌ವೇರ್‌ಗಳಂತೆಯೇ ಚಿಣ್ಣರಿಗೂ ಕೂಡ ಸೂಟ್ ಆಗುವಂತಹ ನಾನಾ ಬಗೆಯ ಮಿನಿ ಡಿಸೈನರ್‌ವೇರ್‌ಗಳು ಆಗಮಿಸಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಮಕ್ಕಳನ್ನು ಮುದ್ದುಮುದ್ದಾಗಿ ಬಿಂಬಿಸುವ ಮಾನ್ಸೂನ್ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.

2/5

ಮಕ್ಕಳಿಗೆ ಮಿನಿ ಡಿಸೈನರ್‌ವೇರ್ಸ್

ದೊಡ್ಡವರು ಧರಿಸುವಂತಹ ಡಿಸೈನರ್‌ವೇರ್ಸ್ ಹಾಗೂ ಫ್ಯಾಷನ್‌ವೇರ್‌ಗಳಂತೆಯೇ ಚಿಣ್ಣರಿಗೂ ಕೂಡ ಸೂಟ್ ಆಗುವಂತಹ ನಾನಾ ಬಗೆಯ ಮಿನಿ ಡಿಸೈನರ್‌ವೇರ್‌ಗಳು ಆಗಮಿಸಿವೆ.

3/5

ಮಾಯವಾದ ಮಕ್ಕಳ ಮಿನಿ-ಮೈಕ್ರೋ ಡ್ರೆಸ್‌ಗಳು

ಮಕ್ಕಳ ಮಿನಿ, ಶಾರ್ಟ್ಸ್, ಮಿಡಿ, ಕ್ರಾಪ್ ಟಾಪ್, ಚಿಕ್ಕ ಫ್ರಾಕ್, ಹಾಲ್ಟರ್, ಬಾರ್ಡಟ್ ನೆಕ್‌ನ ಟಾಪ್‌ಗಳು ಈ ಸೀಸನ್‌ನಲ್ಲಿ ಮಾಯವಾಗಿವೆ. ಕಳೆದ ಸೀಸನ್‌ನಲ್ಲಿ ಮಕ್ಕಳನ್ನು ಸವಾರಿ ಮಾಡಿದ್ದ ಲೈಟ್‌ವೇಟ್ 2 ಪೀಸ್ ಡ್ರೆಸ್, ಮೈಕ್ರೋ, ಮಿನಿ ಸ್ಕರ್ಟ್‌ಗಳು ಕೂಡ ಸೈಡಿಗೆ ಸರಿದಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರೀಟಾ.

4/5

ಮಕ್ಕಳಿಗೂ ಬಂತು ಲೇಯರ್ ಡ್ರೆಸ್‌ಗಳು

ಮಕ್ಕಳಿಗೂ ಲೇಯರ್ ಲುಕ್ ನೀಡುವ ಔಟ್‌ಫಿಟ್‌ಗಳು ಬಂದಿವೆ. ಯಾವುದೇ ಡ್ರೆಸ್‌ನ ಮೇಲೆ ಧರಿಸಬಹುದಾದ ಕ್ರಾಪ್ ಜಾಕೆಟ್, ಕಾಲಿಗೆ ಸ್ಟಾಕಿನ್ಸ್, ಡೆನಿಮ್ ಫ್ರಾಕ್‌ಗೆ ಲೇಸ್‌ನ ಜಾಕೆಟ್, ಕಾಲಿಗೆ ಟೈಟ್ಸ್, ಇನ್ನು ಇಂಡೋ-ವೆಸ್ಟರ್ನ್ ಲುಕ್ ಕಿಡ್ಸ್‌ವೇರ್‌ನಲ್ಲಿ ಸೆಮಿ ಎಥ್ನಿಕ್ ಲುಕ್ ನೀಡುವ ಅಂಬ್ರೆಲ್ಲಾ-ಸಿಂಡ್ರೆಲ್ಲಾ ಗೌನ್‌ಗಳು ಎಂಟ್ರಿ ನೀಡಿವೆ.

5/5

ಇವುಗಳೊಂದಿಗೆ ಫುಲ್ ಸ್ಲೀವ್, ತ್ರೀ ಫೋರ್ತ್, ಫ್ರಿಲ್, ಫ್ಲೇರ್ ಫ್ರಾಕ್‌ಗಳು, ಡಬ್ಬಲ್ ಲೈನಿಂಗ್ ಇರುವಂತಹ ಔಟ್‌ಫಿಟ್ಸ್ ಹಾಗೂ ಮಲ್ಟಿ ಲೇಯರ್ ಉಡುಗೆಗಳು ಹೊಸ ವಿನ್ಯಾಸದಲ್ಲಿ ಆಗಮಿಸಿವೆ ಎನ್ನುತ್ತಾರೆ ಮಾರಾಟಗಾರರು.

ಶೀಲಾ ಸಿ ಶೆಟ್ಟಿ

View all posts by this author