ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monsoon Lipsticks 2025: ಮಾನ್ಸೂನ್‌ಗೆ ಕಾಲಿಟ್ಟ ವೈವಿಧ್ಯಮಯ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

ಮಾನ್ಸೂನ್ ಸೀಸನ್‌ನಲ್ಲಿ ಮಳೆಯಲ್ಲಿ ನೆನೆದರೂ ಒದ್ದೆಯಾದರೂ ಮಾಸದಂತಹ ನ್ಯಾಚುರಲ್ ಲುಕ್ ನೀಡುವ ವಾಟರ್ ಪ್ರೂಫ್ ಲಿಪ್ಸ್‌ಟಿಕ್ಸ್ ಹೊಸ ರೂಪದಲ್ಲಿ ಮರಳಿವೆ. ಯಾವ್ಯಾವ ಶೇಡ್‌ಗಳು ಬಂದಿವೆ? ಬಳಕೆ ಹೇಗೆ? ಎಲ್ಲದರ ಕುರಿತಂತೆ ಇಲ್ಲಿದೆ ಸಂಪೂರ್ಣ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ವಾಟರ್ ಪ್ರೂಫ್ ಮ್ಯಾಟ್ ಲಿಪ್ ಶೇಡ್‌

ನ್ಯಾಚುರಲ್ ಲುಕ್ ನೀಡುವ ಲಾಂಗ್ ಲಾಸ್ಟಿಂಗ್ ಕಾನ್ಸೆಪ್ಟ್ ಹೊಂದಿರುವ ವಾಟರ್ ಪ್ರೂಫ್ ಮ್ಯಾಟ್ ಲಿಪ್ ಶೇಡ್‌ಗಳು ಈ ಬಾರಿಯ ಮಾನ್ಸೂನ್ ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ. ವೈನ್ ರೆಡ್, ರೂಬಿ ರೆಡ್, ವೆರೈಟಿ ನ್ಯೂಡ್ ಶೇಡ್ಸ್, ರೆಡ್ ವೈನ್, ಕೂಲ್ ಪಿಂಕ್, ಪ್ಲಮ್ ಶೇಡ್, ಆರೆಂಜ್, ಪೀಚ್ ಕೋರಲ್ ಸೇರಿದಂತೆ ತುಟಿಯನ್ನು ಹೈಲೈಟ್ ಮಾಡುವಂತಹ ಹಾಲೋಗ್ರಾಫಿಕ್ ಗ್ಲಾಸ್ ಮತ್ತು ಶಿಮ್ಮರ್ ಪೌಡರ್ ಟಚ್ ನೀಡುವಂತಹ ನಾನಾ ಲಿಪ್ ಮೇಕಪ್ ಕಾನ್ಸೆಪ್ಟ್‌ಗೆ ಹೊಂದುವಂತಹ ಲಿಪ್ ಕಾಸ್ಮೆಟಿಕ್ ಪ್ರಾಡಕ್ಟ್‌ಗಳು ಮಾನ್ಸೂನ್ ಸೀಸನ್‌ನ ಬಾಗಿಲು ಬಡಿದಿವೆ. ಲಿಕ್ವಿಡ್ ಹಾಗೂ ಕ್ರಯಾನ್ಸ್ ಮಾದರಿಯಲ್ಲೂ ದೊರೆಯುತ್ತಿವೆ.

2/5

ತಿಳಿ ವರ್ಣದಲ್ಲಿ ಎವರ್‌ಗ್ರೀನ್ ರೆಡ್ ಶೇಡ್ಸ್

ಎಂದಿಗೂ ಮರೆಯಾಗದ ಎವರ್‌ಗ್ರೀನ್ ಲಿಪ್ ಶೇಡ್ ಆದ ರೆಡ್ ಶೇಡ್‌ನಲ್ಲಿ ಇದೀಗ ನಾನಾ ಲೈಟ್ ಶೇಡ್ ಮಿಕ್ಸ್ ಕ್ಲಾಸಿಕ್ ವರ್ಣಗಳು ಕಾಣಿಸಿಕೊಂಡಿವೆ. ಸಮೀಕ್ಷೆಯೊಂದರ ಪ್ರಕಾರ, ಪರ್ಪಲ್ ಹಾಗೂ ಬ್ರೌನ್ ಶೇಡ್‌ಗಳು ಪಾಪ್ ಅಪ್ ಕಲರ್ಸ್‌ನಲ್ಲಿದ್ದರೂ ಸದ್ಯಕ್ಕೆ ಈ ಸೀಸನ್‌ನಲ್ಲಿ ಸೈಡಿಗೆ ಸರಿದಿವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್. ಹಚ್ಚಿದರೇ ಹರಡುವ ಗ್ಲಾಸಿ ಲಿಪ್ ಶೇಡ್‌ಗಳು ಈಗ ಟ್ರೆಂಡ್‌ನಲ್ಲಿಲ್ಲ. ಶೈನಿಂಗ್ ಲಿಪ್ಸ್‌ಟಿಕ್‌ಗಳು ಮರೆಯಾಗಿವೆ. ಮಳೆಗಾಲಕ್ಕೆ ಹೊಂದುವಂತಹ ಮ್ಯಾಟ್ ಹಾಗೂ ವಾಟರ್‌ಫ್ರೂಫ್ ಲಿಪ್‌ಶೇಡ್‌ಗಳು ಆಗಮಿಸಿವೆ.

3/5

ಲಿಪ್ಸ್‌ಟಿಕ್ಸ್ ಆಯ್ಕೆ

ಮಳೆಗಾಲ ಬಂದಾಯ್ತು. ಸೋ, ಸದ್ಯ ಶೈನಿಂಗ್ ಲಿಪ್ಸ್‌ಟಿಕ್ಸ್‌ಗೆ ಬೈ ಬೈ ಹೇಳಿ. ಈ ಕಾಲಕ್ಕೆ ಸೂಟ್ ಆಗುವಂತಹ ಲಿಪ್‌ಶೇರ್‌ಗಳನ್ನೆ ಬಳಸಿ. ಈಗಾಗಲೇ ವಾಟರ್‌ಫ್ರೂಫ್ ಹಾಗೂ ಮ್ಯಾಟ್ ಲಿಪ್ಸ್‌ಟಿಕ್‌ಗಳು ಬಂದಾಗಿದೆ. ಟ್ರೆಡಿಷನಲ್ ಲುಕ್ ಹಾಗೂ ಕ್ಯಾಶುವಲ್‌ ವೇರ್‌ಗೆ ಸೂಟ್ ಆಗುವಂತಹ ಟು ಇನ್ ವನ್ ಲಿಪ್ಸ್‌ಟಿಕ್‌ಗಳನ್ನು ಖರೀದಿಸಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.

4/5

ಮಾನ್ಸೂನ್‌ನಲ್ಲಿ ಲಿಪ್ ಆರೈಕೆ ಅಗತ್ಯ

ಪ್ರತಿದಿನ ಲಿಪ್ಸ್‌ಟಿಕ್ ಹಚ್ಚುವ ಅಭ್ಯಾಸವಿರುವವರು ಪ್ರತಿ ರಾತ್ರಿ ಮಲಗುವ ವೇಳೆ ಲಿಪ್ ಬಾಮ್ ಹಚ್ಚಿಕೊಳ್ಳುವ ಅಭ್ಯಾಸ ಇರಿಸಿಕೊಳ್ಳಬೇಕು. ಇದರಿಂದ ತುಟಿಗಳು ಒರಟಾಗುವುದಿಲ್ಲ. ಬದಲಿಗೆ ಮ್ಯಾಟ್ ಹಾಗೂ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್ ಬಳಸಿದಾಗಲೂ ಸುಕೋಮಲವಾಗಿ ಕಾಣುತ್ತವೆ ಎಂದು ಸಲಹೆ ನೀಡುತ್ತಾರೆ ಮೇಕಪ್ ಆರ್ಟಿಸ್ಟ್ ರೋಸ್. ಇನ್ನು ಪಾರ್ಟಿಗೆ ಹೋಗುವವರು ಕೂಲ್ ಕಲರ್‌ಗಳಲ್ಲಿ ಲಭ್ಯವಿರುವ ಬಗೆಬಗೆಯ ಮ್ಯಾಟ್ ಲಿಪ್ಸ್‌ಟಿಕ್‌ಗಳನ್ನು ಬಳಸಬಹುದು. ಇದರ ಮೇಲೆ ಶಿಮ್ಮರ್ ಪೌಡರ್ ಬಳಸಿ ಫಂಕಿ ಲುಕ್ ನೀಡಬಹುದು ಎನ್ನುತ್ತಾರೆ.

5/5

ಲಿಪ್ಸ್‌ಟಿಕ್ಸ್ ಟಿಪ್ಸ್

  • ತಿಳಿ ತುಟಿಗೆ ಯಾವುದೇ ಮ್ಯಾಟ್ ಬಣ್ಣವೂ ಓಕೆ.
  • ಡಾರ್ಕ್ ಆಗಿರುವ ತುಟಿಗಳಿಗೆ ಟ್ರಯಲ್ ನೋಡಿ, ಆಯ್ಕೆ ಮಾಡಿ, ಹಚ್ಚಿ.
  • ಡಾರ್ಕ್ ಲೈನ್ ಇರುವ ತುಟಿಗಳಿಗೆ ಲಿಪ್ ಲೈನರ್ ಬಳಸಿ.
  • ಟ್ರೆಡಿಷನಲ್ ಡ್ರೆಸ್‌ಗೆ ಸೂಕ್ತ ಶೇಡ್ ಬಳಸಿ.

ಶೀಲಾ ಸಿ ಶೆಟ್ಟಿ

View all posts by this author