Monsoon Styling Tips 2026: ಮಾನ್ಸೂನ್ ಔಟಿಂಗ್ ಪ್ರಿಯರಿಗೆ 6 ಸ್ಟೈಲಿಂಗ್ ಮಂತ್ರ
Monsoon Styling Tips: ಮಳೆಗಾಲದಲ್ಲಿ ಔಟಿಂಗ್ ಅಥವಾ ಟ್ರಾವೆಲ್ ಮಾಡುವವರು ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿದಲ್ಲಿ, ಆರಾಮ ಎಂದೆನಿಸುವುದು ಜತೆಗೆ ಯಾವುದೇ ತಲೆ ಬಿಸಿಯಾಗದು ಎನ್ನುವ ಲೈಫ್‌ಸ್ಟೈಲ್ ಎಕ್ಸ್‌ಪರ್ಟ್ ನಿಶಾ ಒಂದಿಷ್ಟು ಸಿಂಪಲ್ ಟಿಪ್ಸ್ ತಿಳಿಸಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಮಳೆಗಾಲದಲ್ಲಿ ಔಟಿಂಗ್ ಅಥವಾ ಟ್ರಾವೆಲ್ ಮಾಡುವವರು ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿದಲ್ಲಿ, ಆರಾಮ ಎಂದೆನಿಸುವುದು ಜತೆಗೆ ಯಾವುದೇ ತಲೆ ಬಿಸಿಯಾಗದು ಎನ್ನುವ ಲೈಫ್‌ಸ್ಟೈಲ್ ಎಕ್ಸ್‌ಪರ್ಟ್ ನಿಶಾ ಒಂದಿಷ್ಟು ಸಿಂಪಲ್ ಟಿಪ್ಸ್ ತಿಳಿಸಿದ್ದಾರೆ.
ಮಾನ್ಸೂನ್‌ಗೆ ಮ್ಯಾಚ್ ಆಗುವ ಡ್ರೆಸ್ ಕೋಡ್
ಮಾನ್ಸೂನ್‌ನಲ್ಲಿ ಭಾರವಿರುವ ಸೀರೆ, ಗಾಗ್ರ, ಲೆಹೆಂಗಾ ಧರಿಸಿ ಹೊರ ಹೋಗುವುದನ್ನು ಅವಾಯ್ಡ್ ಮಾಡಿ. ಲೈಟ್‌ವೇಟ್ ಡ್ರೆಸ್ ಆಯ್ಕೆ ಮಾಡಿ. ಪುರುಷರು ಜುಬ್ಬಾ, ಪೈಜಾಮಗಳಿಂದ ದೂರವಿರಿ. ಫುಲ್ ಸ್ಲೀವ್ ಪುಲ್ ಓವರ್ಸ್ , ಜಾಕೆಟ್ ಪ್ರಿಫರ್ ಮಾಡಿ. ಕಾಟನ್ ಕ್ಲಾತಿಂಗ್ ಕೂಡ ಓಕೆ. ಇನ್ನು, ಒದ್ದೆಯಾದರೂ ದೇಹ ಕಾಣಿಸದಂತಹ ಸುಲಭವಾಗಿ ಒಣಗುವಂತಹ ಫ್ಯಾಬ್ರಿಕ್‌ನ ಉಡುಪುಗಳ ಆಯ್ಕೆ ಮಾಡಿ.
ಟ್ರೆಂಡಿಯಾಗಿರುವ ರೈನ್‌ಕೋಟ್ ಜತೆಗಿರಿಸಿಕೊಳ್ಳಿ
ಫುಲ್ ಲೆಂಥ್‌ನ ರೈನ್‌ಕೋಟ್‌ಗಳನ್ನು ಜತೆಗಿರಿಸಿಕೊಳ್ಳಿ. ಮಳೆಯಲ್ಲಿ ಉಡುಪುಗಳು ಒದ್ದೆಯಾಗುವುದಿಲ್ಲ. ನೋಡಲು ಆಕರ್ಷಕವಾಗಿ ಕಾಣುತ್ತವೆ. ಇದೀಗ ಟ್ರೆಂಡಿಯಾಗಿರುವ ಪಾರದರ್ಶಕ ಲಾಂಗ್ ಟ್ರೆಂಚ್ ಕೋಟ್ ಶೈಲಿಯ ರೈನ್ ಕೋಟ್ ಧರಿಸಿ, ಫ್ಯಾಷೆನಬಲ್ ಆಗಿ ಕಾಣಿಸಬಹುದು.
ಅಂಬ್ರೆಲ್ಲಾ ನಿಮ್ಮ ಜತೆಯಲ್ಲಿರಲಿ
ಒಂದು ಛತ್ರಿಯಾದರೂ ನಿಮ್ಮ ಜತೆಗಿರಲಿ. ಬ್ಯಾಗ್ಗಳಲ್ಲಿ ಫೋಲ್ಡೆಡ್ ಕಾಂಪಾಕ್ಟ್ ಛತ್ರಿಗಳನ್ನು ಕೊಂಡೊಯ್ಯಬಹುದು.
ವಾಟರ್ ಪ್ರೂಫ್ ಬ್ಯಾಗ್ ಬಳಕೆ ಮಾಡಿ
ಟ್ರೆಂಡಿಯಾಗಿರುವ ವಾಟರ್ ಪ್ರೂಫ್ ಬ್ಯಾಗ್‌ಗಳನ್ನು ಕೊಳ್ಳಿ. ಲೆದರ್ ಹಾಗೂ ಸಾಫ್ಟ್ ಮೆಟಿರಿಯಲ್‌ನ ಬ್ಯಾಗ್‌ಗಳಿಗೆ ಕೆಲಕಾಲ ಗುಡ್ ಬಾಯ್ ಹೇಳಿ. ಲಾಂಗ್ ಲೆಂಥ್‌ನವಕ್ಕಿಂತ ಶಾರ್ಟ್ ಲೆಂಥ್‌ನವನ್ನು ಆಯ್ಕೆ ಮಾಡಿ. ಬ್ಯಾಕ್ ಪ್ಯಾಕ್ ಶೈಲಿಯ ವಾಟರ್‌ಫ್ರೂಫ್ ಬ್ಯಾಗ್‌ಗಳನ್ನು ಔಟಿಂಗ್‌ಗೆ ಬಳಸಬಹುದು.
ರೈನ್ ಬೂಟ್ಸ್ – ಸ್ಯಾಂಡಲ್ಸ್ ಧರಿಸಿ
ಜಾರುವ ಸ್ಲಿಪ್ಪರ್, ಪ್ಲಿಪ್-ಫ್ಲಾಪ್ ಬೇಡ. ಈ ಸೀಸನ್‌ಗೆ ಹೊಂದುವಂತಹ ಸ್ಯಾಂಡಲ್ಸ್, ಶೂ ಅಥವಾ ಬೂಟ್ಸ್ ಧರಿಸಿ. ಹೊರಗೆ ಹೋಗಿ ಬಂದಾಕ್ಷಣ ಪಾದರಕ್ಷೆಗಳನ್ನು ಒಣಗಿಸಿ.
ಮೇಕೋವರ್ ಸಿಂಪಲ್ಲಾಗಿರಲಿ
ಔಟಿಂಗ್‌ನಲ್ಲಿ ಯಾವುದೇ ಕಾರಣಕ್ಕೂ ಮೇಕಪ್ ಹಾಗೂ ಓವರ್ ಎಂದೆನಿಸುವ ಮೇಕೋವರ್ ಬೇಡ! ಸಿಂಪಲ್ ಲುಕ್‌ಗೆ ಆದ್ಯತೆ ನೀಡಿ.