ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mouni Roy: ಗೋಲ್ಡನ್‌ ಕಲರ್‌ ಸೀರೆಯಲ್ಲಿ ಮಿಂಚಿದ ಬೆಂಗಾಲಿ ಬೆಡಗಿ ಮೌನಿ ರಾಯ್‌; ಫೋಟೋಸ್‌ ನೋಡಿ

ಬಾಲಿವುಡ್‌ ನಟಿ ಮೌನಿ ರಾಯ್‌ ಸದಾ ತಮ್ಮ ಫ್ಯಾಶನ್‌ ಲುಕ್‌ನಿಂದ ಗಮನ ಸೆಳೆಯುತ್ತಾರೆ. ಕಿರುತೆರೆ ಮೂಲಕ ಪಾದಾರ್ಪಣೆ ಮಾಡಿದ ಅವರು ಇದೀಗ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೌನಿ ಉಟ್ಟಿದ್ದ ಸೀರೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

1/5

ಬಾಲಿವುಡ್‌ ನಟಿ ಮೌನಿ ರಾಯ್‌ ಸದಾ ತಮ್ಮ ಫ್ಯಾಶನ್‌ ಲುಕ್‌ನಿಂದ ಗಮನ ಸೆಳೆಯುತ್ತಾರೆ. ಇದೀಗ ಮೌನಿ ರಾಯ್‌ ಗೋಲ್ಡನ್‌ ಕಲರ್‌ ಸೀರೆಯುಟ್ಟು ಮಿಂಚಿದ್ದಾರೆ. ಫ್ರೆಂಚ್ ರಿವೇರಿಯಾದಲ್ಲಿ ನಡೆದ 2025 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ಮೌನಿ ರಾಯ್ ತಮ್ಮ ಅದ್ಭುತ ನೋಟದಿಂದ ಅಭಿಮಾನಿಗಳನ್ನು ಮೂಕವಿಸ್ಮಿತಗೊಳಿಸಿದರು.

2/5

ಮೌನಿ ರಾಯ್‌ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿನ್ನದ ಸೀರೆಯಲ್ಲಿ ತಮ್ಮ ವಿಂಟೇಜ್ ಶೈಲಿಯ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಅವರು ಸೀರೆಯನ್ನು ಕೆಲವು ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದಾರೆ. ಗೋಲ್ಡ್‌ ಕಲರ್‌ ಸೀರೆ ಉಟ್ಟಿದ್ದು, ಅದಕ್ಕೆ ಮ್ಯಾಚ್‌ ಆಗುವಂತೆ ಗೋಲ್ಡನ್‌ ಬ್ಲೌಸ್‌ ಧರಿಸಿದ್ದಾರೆ.

3/5

ಮೌನಿ ನೋ ಮೇಕ್‌ಅಪ್‌ ಲುಕ್‌ನಲ್ಲಿ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ. ತೋಳಿಲ್ಲದ, ಆಳವಾದ ಕಟ್ ವಿನ್ಯಾಸವನ್ನು ಹೊಂದಿದ್ದ ಬ್ಲೌಸ್, ಷಾಂಪೇನ್-ಟೋನ್ಡ್ ಥ್ರೆಡ್‌ಗಳಲ್ಲಿ ವಿನ್ಯಾಸ ಮಾಡಲಾಗಿದೆ. ಅದರ ಜೊತೆಗೆ ಮ್ಯಾಚ್‌ ಆಗುವ ಕಿವಿಯೋಲೆಯನ್ನು ಧರಿಸಿದ್ದಾರೆ.

4/5

ಟಿವಿ ಸೀರಿಯಲ್ ನಿಂದ ಹಿಡಿದು ಚಲನಚಿತ್ರಗಳವರೆಗೆ ತನ್ನ ಛಾಪು ಮೂಡಿಸಿರುವ ನಟಿ ಮೌನಿ ರಾಯ್ (Mouni Roy) ತನ್ನ ಅದ್ಭುತ ನಟನೆ ಮತ್ತು ಫ್ಯಾಶನ್ ಟ್ರೆಂಡ್ ಗೆ ಹೆಸರುವಾಸಿಯಾಗಿದ್ದಾರೆ. ನಟಿ ಪ್ರತಿದಿನ ತನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇದರಲ್ಲಿ ಅವರು ಕೆಲವೊಮ್ಮೆ ವೆಸ್ಟರ್ನ್ ಉಡುಪಿನಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವೊಮ್ಮೆ ಸಾಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ.

5/5

ಮೌನಿಯ ಫ್ಯಾಷನ್‌ ಲುಕ್‌ ಎಲ್ಲರ ಮನ ಸೆಳೆಯುತ್ತದೆ. ಬಳುಕುವ ಬಳ್ಳಿಯಂತಿರುವ ಮೌನಿ ಸೇರಿಯಲ್ಲಿ ನವಿಲಿನ ಸೌಂದರ್ಯವನ್ನು ನಾಚಿಸಿವಂತಿದ್ದಾರೆ.