Navaratri Fashion 2025: ನವರಾತ್ರಿಗೆ ನವದುರ್ಗಾ ಚಿತ್ತಾರದ ಸೀರೆಗಳ ಆಗಮನ
Navaratri Fashion 2025: ನವರಾತ್ರಿ ಹಾಗೂ ದಸರಾ ಫೆಸ್ಟೀವ್ ಸೀಸನ್ ಫ್ಯಾಷನ್ಗೆ ಇದೀಗ ದುರ್ಗಾ ಹಾಗೂ ನವಶಕ್ತಿಯನ್ನು ಬಿಂಬಿಸುವ ಸೀರೆಗಳು ಎಂಟ್ರಿ ನೀಡಿದ್ದು, ಹಬ್ಬದ ಸೀಸನ್ನ ಗಮ್ಮತ್ತನ್ನು ಹೆಚ್ಚಿಸಲು ನಾನಾ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಯಾವ್ಯಾವ ಬಗೆಯವು ಪ್ರಚಲಿತದಲ್ಲಿವೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ವಿವರ.

ಚಿತ್ರ ಕೃಪೆ: ಪರಂಪರಾ-ದಿ ಎಥ್ನಿಕ್ವೇರ್ ಹೌಸ್ -


ನವರಾತ್ರಿ ಹಾಗೂ ದಸರಾ ಫೆಸ್ಟೀವ್ ಸೀಸನ್ನಲ್ಲಿ ಭಕ್ತಿ ಹೆಚ್ಚಿಸುವ ನವದುರ್ಗಾ, ಕಾಳಿ ದೇವಿಯ ವಿನ್ಯಾಸ ಇಲ್ಲವೇ ದೇವಿಯ ಚಿತ್ತಾರವನ್ನೊಳಗೊಂಡ ಸೀರೆಗಳು ಸೀರೆ ಲೋಕಕ್ಕೆ ಕಾಲಿಟ್ಟಿವೆ.

ನವರಾತ್ರಿ / ದಸರಾ ಸೀರೆ ಫ್ಯಾಷನ್ಗೆ ಸೇರಿದ ದೇವಿ ಚಿತ್ತಾರ
ನವದುರ್ಗೆ ಹಾಗೂ ಕಾಳಿ ಮಾತೆಯ ಚಿತ್ತಾರಗಳು ಇರುವಂತಹ ಸೀರೆಗಳು ಮೊದಲಿನಿಂದಲೇ ಮಾರುಕಟ್ಟೆಯಲ್ಲಿದ್ದವು. ಆದರೆ, ಇದೀಗ ನವರಾತ್ರಿ/ದಸರಾ ಆಚರಣೆ ಆರಂಭವಾಗುತ್ತಿದ್ದಂತೆ ಇವುಗಳ ಬೇಡಿಕೆ ಹೆಚ್ಚಾಯಿತು. ಅದರಲ್ಲೂ ಬಂಗಾಲಿ ಶೈಲಿಯ ದುರ್ಗಾ ಮಾತೆಯ ಮುಖ ಇರುವಂತಹ ಸೀರೆಗಳು ಹೆಚ್ಚು ಡಿಮ್ಯಾಂಡ್ ಪಡೆದುಕೊಂಡವು ಎನ್ನುತ್ತಾರೆ ಪರಂಪರಾ ದಿ ಎಥ್ನಿಕ್ ವೇರ್ ಸಂಸ್ಥಾಪಕಿ ಪಾಯಲ್ಸೇನ್ ಗುಪ್ತಾ. ಅವರ ಪ್ರಕಾರ, ಬಂಗಾಲಿ ಡಿಸೈನ್ನ ಈ ಸೀರೆಗಳು ಹಾಗೂ ದೇಸಿ ಲುಕ್ ನೀಡುವ ಬಾರ್ಡರ್ ಇರುವಂತಹ ಸೀರೆಗಳಿಗೂ ಇದೀಗ ಬೇಡಿಕೆ ಹೆಚ್ಚಾಗಿದೆಯಂತೆ.

ದೇವಿ ಮುಖವಿರುವ ಸೀರೆಗಳ ಚಿತ್ತಾರ
ದೇವಿಯ ಸುಂದರ ಮುಖವಿರುವ ಸೀರೆಗಳ ಚಿತ್ತಾರ ಆದಷ್ಟೂ ಪಲ್ಲು ಹಾಗೂ ಸೆರಗಿನ ಭಾಗದಲ್ಲಿ ಚಿತ್ರಿಸಲಾಗಿರುತ್ತದೆ. ಕೆಲವು ಪ್ರಿಂಟ್ನಲ್ಲಿ ಇದ್ದರೇ ಕೆಲವು ಹ್ಯಾಂಡ್ವರ್ಕ್ ಅಥವಾ ಪ್ಯಾಚ್ ವರ್ಕ್ನಲ್ಲಿ ದೊರೆಯುತ್ತವೆ. ಇವು ಆಯಾ ಕಾಂಟ್ರಾಸ್ಟ್ ಸೀರೆ ಇಲ್ಲವೇ ಕಾಟನ್, ಸೆಮಿ ಕಾಟನ್ ಸೀರೆಗಳಿಗೆ ಸೂಟ್ ಆಗುವಂತೆ ಈ ವಿನ್ಯಾಸ ಇರುತ್ತವೆ. ಈ ಶೈಲಿಯ ಸೀರೆಗಳು ಇದೀಗ ನಾರ್ತ್ ಇಂಡಿಯಾ ಭಾಗಗಳಲ್ಲಿ ಮಾತ್ರವಲ್ಲ, ನಮ್ಮಲ್ಲೂ ಟ್ರೆಂಡಿಯಾಗುತ್ತಿವೆ. ಮುಂಬರುವ ನವರಾತ್ರಿ ಸೀಸನ್ಗೆ ಈಗಾಗಲೇ ಆನ್ಲೈನ್ನಲ್ಲಿ ಇವುಗಳ ಖರೀದಿ ಶುರುವಾಗಿದೆ ಎನ್ನುತ್ತಾರೆ ಪಾಯಲ್.

ದೇವಿಯ ಚಿತ್ತಾರವಿರುವ ಸೀರೆ ಪ್ರಿಯರಿಗೆ ಸಲಹೆಗಳು
- ನವರಾತ್ರಿ/ದಸರಾ ಸಂಭ್ರಮಾಚರಣೆಗೆ ಧರಿಸಬಹುದು.
- ಒಂದೆರೆಡು ಸೀರೆಗೆ ಧರಿಸುವಂತಹ ಕಾನ್ಸೆಪ್ಟ್ ಸೆಲೆಕ್ಟ್ ಮಾಡಿ.
- ಆದಷ್ಟೂ ಇಂತಹ ಸೀರೆಗಳನ್ನು ಡೀಸೆಂಟ್ ಆಗಿ ಸ್ಟೈಲಿಂಗ್ ಮಾಡಿ.
- ಇಂತಹ ಸೀರೆಗಳಿಗೆ ವೈಟ್ ಹಾಗೂ ಬ್ಲ್ಯಾಕ್ ಮೆಟಲ್ ಇಲ್ಲವೇ ಆಕ್ಸಿಡೈಸ್ಡ್ ಜ್ಯುವೆಲರಿ ಧರಿಸಬಹುದು.

ನವರಾತ್ರಿ ಹಾಗೂ ದಸರಾ ಫೆಸ್ಟೀವ್ ಸೀಸನ್ ಫ್ಯಾಷನ್ಗೆ ಇದೀಗ ದುರ್ಗಾ ಹಾಗೂ ನವಶಕ್ತಿಯನ್ನು ಬಿಂಬಿಸುವ ಸೀರೆಗಳು ಸೀರೆ ಲೋಕಕ್ಕೆ ಕಾಲಿಟ್ಟಿವೆ.