ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Navaratri Fashion 2026: ನವರಾತ್ರಿಯ ರಂಗೇರಿಸುವ ಆರೆಂಜ್ ಕಲರ್‌ವೇರ್ಸ್

ನವರಾತ್ರಿಯ ಮೊದಲ ದಿನ ಆರೆಂಜ್, ಅಂದರೆ ಕಿತ್ತಳೆ ಅಥವಾ ಕೇಸರಿ ಬಣ್ಣಕ್ಕೆ ಆದ್ಯತೆ. ಈ ವರ್ಣ ನೋಡಲು ಆಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ನೂರು ಜನರ ಮಧ್ಯೆಯೂ ಎದ್ದು ಕಾಣುವಂತೆ ಬಿಂಬಿಸುತ್ತದೆ. ಈ ಬ್ರೈಟ್ ಕಲರ್‌ನಲ್ಲಿ ನೀವು ಹೇಗೆಲ್ಲಾ ಕಾಣಿಸಿಕೊಳ್ಳಬಹುದು? ಎಂಬುದಕ್ಕೆ ಫ್ಯಾಷನ್ ಎಕ್ಸ್‌ಪರ್ಟ್‌ಗಳು ಒಂದಿಷ್ಟು ಐಡಿಯಾ ನೀಡಿದ್ದಾರೆ.

ಚಿತ್ರಗಳು: ಪಿಕ್ಸೆಲ್
1/5

ನವರಾತ್ರಿಯ ಮೊದಲ ದಿನ ಆರೆಂಜ್, ಅಂದರೆ ಕಿತ್ತಳೆ ಅಥವಾ ಕೇಸರಿ ಬಣ್ಣಕ್ಕೆ ಆದ್ಯತೆ. ಈ ವರ್ಣ ನೋಡಲು ಆಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ನೂರು ಜನರ ಮಧ್ಯೆಯೂ ಎದ್ದು ಕಾಣುವಂತೆ ಬಿಂಬಿಸುತ್ತದೆ. ಸ್ಟೈಲಿಸ್ಟ್‌ಗಳು ಈ ವರ್ಣವನ್ನು ಹ್ಯಾಪಿ ಕಲರ್‌ ಎಂದು ಕೂಡ ಕರೆಯುತ್ತಾರೆ. ಈ ದಿನ ಈ ಶೇಡ್‌ನ ಸೀರೆ ಇಲ್ಲವೇ ಡಿಸೈನರ್‌ ಧರಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿದಲ್ಲಿ ಅತ್ಯಾಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಡಿಸೈನರ್ಸ್.

2/5

ಆರೆಂಜ್ ಕಲರ್‌ನ ನಾನಾ ಶೇಡ್‌ಗಳು

ಕೇಸರಿ, ತಿಳಿ ಕೇಸರಿ, ಮಾರ್ಸೆಲ್ಲಾ, ಬ್ರಿಕ್ ಆರೆಂಜ್ ಹೀಗೆ ಸಾಕಷ್ಟು ವರ್ಣಗಳು ಆರೆಂಜ್ ಬಣ್ಣದಲ್ಲಿ ಕಾಣಬಹುದು. ಹಿಂದೂ ಧರ್ಮದ ಪ್ರತೀಕ ಎಂಬಂತೆ ಸನ್ಯಾಸಿಗಳು, ಗುರೂಜೀಗಳು ಬಹುತೇಕ ಹಿಂದೂತ್ವ ಪ್ರತಿಪಾದಿಸುವವರು ಈ ವರ್ಣದ ಉಡುಪುಗಳನ್ನು ಧರಿಸುವುದನ್ನು ಕೂಡ ಕಾಣಬಹುದು.

3/5

ಆರೆಂಜ್ ಕಲರ್‌ನ ಸೀರೆಗಳ ಜಾದೂ

ನವರಾತ್ರಿಗೆ ಆರೆಂಜ್ ಕಲರ್‌ನ ಸೀರೆಯನ್ನು ಉಡುವುದಾದಲ್ಲಿ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಡಿಸೈನರ್ ಬ್ಲೌಸ್ ಹಾಗೂ ಕಾಂಟ್ರಾಸ್ಟ್ ಬ್ಲೌಸ್‌ಗಳನ್ನು ಧರಿಸಿ. ಗೋಲ್ಡನ್, ವೈಟ್-ಬ್ಲ್ಯಾಕ್ ಮೆಟಲ್ ಆಕ್ಸೆಸರೀಸ್‌ಗಳನ್ನು ಧರಿಸಬಹುದು.

ಸೀಸನ್‌ನಲ್ಲಿರುವ ಸೀರೆಗಳು ‌

ಜಾರ್ಜೆಟ್, ಕ್ರೇಪ್, ಸೆಮಿ ಸಿಲಕ್, ಮೈಸೂರ್ ಸಿಲ್ಕ್, ಜಮಾದಾನಿ, ಇಳಕಲ್, ಮೊಳಕಾಲ್ಮೂರು, ಬನಾರಸ್ ಹೀಗೆ ನಾನಾ ಶೈಲಿಯ ಆರೆಂಜ್ ಸೀರೆಗಳನ್ನು ಉಟ್ಟು, ಅದಕ್ಕೆ ತಕ್ಕಂತೆ ಜ್ಯುವೆಲರಿ ಧರಿಸಿ, ಸ್ಟೈಲಿಂಗ್ ಮಾಡಿ, ಸಂಭ್ರಮಿಸಿ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ಶ್ವೇತಾ.

4/5

ಕಿತ್ತಳೆ ವರ್ಣದ ಡಿಸೈನರ್‌ವೇರ್ ಸ್ಟೈಲಿಂಗ್

ಇನ್ನು, ಈ ಸೀಸನ್‌ನಲ್ಲಿ ಕಿತ್ತಳೆ ವರ್ಣದ ಮ್ಯಾಕ್ಸಿ, ಗೌನ್ ಹಾಗೂ ಲೆಹೆಂಗಾಗಳು ಗ್ರ್ಯಾಂಡ್‌ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿವೆ. ಅದರಲ್ಲೂ ಲಾಂಗ್ ಎಥ್ನಿಕ್ ಗೌನ್‌ಗಳು ಅತ್ಯಾಕರ್ಷಕ ವಿನ್ಯಾಸದಲ್ಲಿ ಬಂದಿವೆ. ಅವುಗಳನ್ನು ಸೂಕ್ತ ಸ್ಟೈಲಿಂಗ್ ಮಾಡಿ, ಸೆಲೆಬ್ರೇಟ್ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಆರೆಂಜ್ ವರ್ಣದ ಸ್ಟೈಲಿಂಗ್ ಟಿಪ್ಸ್

  • ಗೋಲ್ಡನ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ.
  • ಹೇರ್‌ಬನ್ ಅಥವಾ ಬ್ರೈಡ್ ಡಿಸೈನ್ ಹಾಕಿಕೊಳ್ಳಿ.
  • ಹಣೆಗೆ ಅಗಲವಾದ ಬಂಗಾಲಿ ಬಿಂದಿ ಇಡಿ.
  • ಉಡುಪಿಗೆ ತಕ್ಕಂತೆ ಸ್ಟೈಲಿಂಗ್ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author