ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nayanthara: ವೆಡ್ಡಿಂಗ್‌ ಆನಿವರ್ಸರಿ ಸಂಭ್ರಮದಲ್ಲಿ ನಯಯತಾರಾ-ವಿಘ್ನೇಶ್ ಶಿವನ್; ಸ್ಪೆಷಲ್‌ ಫೋಟೋಸ್‌ ಶೇರ್‌

ಲೇಡಿ ಸೂಪರ್ ಸ್ಟಾರ್ ನಯನತಾರ ಹಾಗೂ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇದೀಗ ನಟಿ‌ ನಯನತಾರ ಇನ್ಸ್ಟಾಗ್ರಾಮ್‌ನಲ್ಲಿ ಪತಿ ಜೊತೆಗಿನ ಸ್ಪೆಷಲ್‌ ಪೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಟೋ ಸಿಕ್ಕಪಟ್ಟೆ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು ಈ ಕ್ಯೂಟ್ ಜೋಡಿಗೆ ಕಮೆಂಟ್‌ಗಳ ಮೂಲಕ ಶುಭ ಹಾರೈಸುತ್ತಿದ್ದಾರೆ.

1/9

ನಯನತಾರ ತಮ್ಮ ಬಹುಕಾಲದ ಗೆಳೆಯ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಜೂನ್ 9 ರಂದು ಮದುವೆ ಯಾದರು. ಮಹಾಬಲಿಪುರಂನ ಖಾಸಗಿ ರೆಸಾರ್ಟ್‌ನಲ್ಲಿ ದಂಪತಿಗಳು ತಮ್ಮ ವಿವಾಹ ವನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡಿಕೊಂಡರು.ಸದ್ಯ ಈ ಕ್ಯೂಟ್ ಜೋಡಿ 3ನೇ ವರ್ಷದ ವೆಡ್ಡಿಂಗ್ ಆನಿವರ್ಸರಿಯ ಸಂಭ್ರಮದಲ್ಲಿ ತೊಡಗಿದ್ದಾರೆ‌

2/9

ಈ ವಿಶೇಷ ದಿನದ ಅಂಗವಾಗಿ, ನಯನತಾರ ತಮ್ಮ ಇನ್‌ ಸ್ಟಾಗ್ರಾಮ್ ನಲ್ಲಿ ಒಂದು ವಿಶೇಷ ಪೋಸ್ಟ್ ಹಂಚಿ ಕೊಂಡಿ ದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

3/9

ಪೋಸ್ಟ್ ನಲ್ಲಿ ಇದುವರೆಗೂ ಬಯಸಿದ ಎಲ್ಲವೂ ನೀನು! ನಮ್ಮಿಬ್ಬರಿಂದ ಜೀವನ ಆರಂಭವಾಗಿ ಈಗ ನಾಲ್ಕು ಜನರ ಕುಟುಂಬವಾಯಿತು. ನಾನು ಇನ್ನೇನು ಕೇಳಬೇಕು? ಪ್ರೇಮ ಅಂದರೆ ಏನು ಎನ್ನುವುದನ್ನು ನೀನು ಕಲಿಸಿದ್ದೆ... ಹ್ಯಾಪಿ ಅನಿವರ್ಸರಿ ನನ್ನ ಸಂಗಾತಿ… ಎಂದಿಗೂ ನಿನ್ನ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

4/9

ಈ ಪೋಸ್ಟ್ ಜೊತೆಗೆ ಹಲವು ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಈ ಜೋಡಿ ಹರಟೆ ಹೊಡೆಯುತ್ತಾ, ನಗುತ್ತಾ, ಆತ್ಮೀಯ ಸಮಯವನ್ನು ಒಟ್ಟಿಗೆ ಆನಂದಿಸುತ್ತಿರುವ ದೃಶ್ಯವನ್ನು ಫೋಟೋದಲ್ಲಿ ಕಾಣಬಹುದು.

5/9

ಈ ಕ್ಯೂಟ್ ಜೋಡಿಯ ಫೋಟೋ ಕಂಡು ಫ್ಯಾನ್ಸ್ ಸಖತ್ ಖಷಿಪಟ್ಟಿದ್ದಾರೆ. ಈ ಫೋಟೋಗೆ ಸಾಕಷ್ಟು ಲೈಕ್ಸ್ ಬರುತ್ತಿದ್ದು ಅನೇಕ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್​ ಶುಭಾಶಯ ತಿಳಿಸುತ್ತಿದ್ದಾರೆ.

6/9

ಬಹುಭಾಷೆಯಲ್ಲಿ ನಟಿ ನಯನತಾರ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಉಪೇಂದ್ರ ನಿರ್ದೇಶಿಸಿದ ಸೂಪರ್ ಚಿತ್ರದಲ್ಲಿ ನಟಿಸಿದ್ದರು‌.ಇದು 2010ರಲ್ಲಿ ತೆರೆಕಂಡಿತು. ಆ ಬಳಿಕ ಕನ್ನಡದ ಬೇರೆ ಯಾವುದೇ ಚಿತ್ರದಲ್ಲೂ ನಯನತಾರ‌ ನಟಿಸಿಲ್ಲ.

7/9

ತಮಿಳು ಚಿತ್ರರಂಗದಲ್ಲಿ ನಿರ್ದೇಶಕನಾಗಿ ವಿಘ್ನೇಶ್​ ಶಿವನ್​ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕನಾಗಿಯು ಅವರು ಖ್ಯಾತಿ ಪಡೆದಿದ್ದಾರೆ. ‘ನಾನುಂ ರೌಡಿ ಧಾನ್​’, ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಿ ನಯನತಾರ ಮತ್ತು ವಿಘ್ನೇಶ್​ ಶಿವನ್​ ಜತೆಯಾಗಿ ಕೆಲಸ ಮಾಡಿದ್ದರು.

8/9

ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ವರ್ಷ ಜೂನ್‌ನಲ್ಲಿ ಮದುವೆ ಆಗಿದ್ದರು. ಮದುವೆಯಾಗಿ ನಾಲ್ಕೇ ತಿಂಗಳಿಗೆ ಈ ದಂಪತಿ ಅವಳಿ ಮಕ್ಕಳಿಗೆ ಪೋಷಕರಾಗಿದ್ದರು. ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದು ಕೊಂಡಿದ್ದ ನಯನತಾರ ಮತ್ತು ವಿಘ್ನೇಶ್ ಶಿವನ್ ಅವರು ತಮ್ಮ ಮಕ್ಕಳಿಗೆ ಉಯೀರ್ ಮತ್ತು ಉಲಗಂ ಎಂದು ನಾಮಕರಣ ಮಾಡಿದ್ದರು.

9/9

ನಯನತಾರ ಇತ್ತೀಚೆಗೆ ನೆಟ್‌ಫ್ಲಿಕ್ಸ್ ಬಿಡುಗಡೆಯಾದ ಟೆಸ್ಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ‌ಮೂಕುತಿ ಅಮ್ಮನ್ 2 ಚಿತ್ರೀಕರಣದಲ್ಲಿಯೂ ನಟಿಸಿದ್ದರು.