ದಾಂಪತ್ಯ ಜೀವನಕ್ಕೆ ಕಾಲಿಟ್ಟ ʼನೀನಾದೆ ನಾʼ ಖ್ಯಾತಿಯ ಅರುಣ್ ಕುಮಾರ್
ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼನೀನಾದೆ ನಾʼ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅವರು ಋತಿಕಾ ಅಶೋಕ್ ಎಂಬವರ ಜತೆ ಆಪ್ತರ ಸಮ್ಮುಖದಲ್ಲಿ ವಿವಾಹಿತರಾದರು. ಅವರಿಗೆ ಕಿರುತೆರೆ ಕಲಾವಿದರು ಅಬಿನಂದನೆ ಸಲ್ಲಿಸಿದ್ದಾರೆ.
ಅರುಣ್ ಕುಮಾರ್ ಮತ್ತು ರೀತಿಕಾ ಅಶೋಕ್ -
Ramesh B
Dec 6, 2025 3:50 PM
1/5
ಅರುಣ್ ಮತ್ತು ಋತಿಕಾ ಅವರ ವಿವಾಹ ನವೆಂಬರ್ 30ರಂದು ನಡೆಯಿತು.
2/5
ಇವರ ನಿಶ್ಚಿತಾರ್ಥ ಮೇ 28ರಂದು ಬೆಂಗಳೂರಿನ ಸೌತ್ ಗ್ರ್ಯಾಂಡ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿತ್ತು.
3/5
ಅರುಣ್ ಕುಮಾರ್ ʼನಾಗಿಣಿʼ, ʼನನ್ನರಸಿ ರಾಧೆʼ, ʼನೀನಾದೆ ನಾʼ ಮುಂತಾದ ಧಾರಾವಾಹಿಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ.
4/5
ಧಾರಾವಾಹಿ ಮಾತ್ರವಲ್ಲ ಸಿನಿಮಾಗಳಲ್ಲಿಯೂ ಅರುಣ್ ಕಾಣಿಸಿಕೊಂಡಿದ್ದಾರೆ. ಸದ್ಯ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಪದ್ಮಾವತಿ ಫಿಲ್ಮ್ ಹೌಸ್ ಅಡಿಯಲ್ಲಿ ಬರುತ್ತಿರುವ ʼಬಲರಾಮʼ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಋತಿಕಾ ಅಶೋಕ್ ಯಾವ ಊರಿನವರು, ಅವರ ಹಿನ್ನೆಲೆ ಏನು ಎನ್ನುವುದು ತಿಳಿದು ಬಂದಿಲ್ಲ.
5/5
ಅರುಣ್ ಕುಮಾರ್ ತಮ್ಮ ಮದುವೆಯ ಫೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ʼʼನನಗೆ ನೀನು, ನಿನಗೆ ನಾನು; ಹೊಸ ಬದುಕಿನ ಹೊಸ ಶುಭಾರಂಭ...ʼʼ ಎಂಬ ಕ್ಯಾಪ್ಶನ್ ನೀಡಿದ್ದಾರೆ.