ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

New Year Fashion 2026: ವಿಂಟರ್‌ನ ನಯಾ ಲುಕ್‌ಗೆ ಸೇರಿದ ಡಿಸೈನರ್‌ ಕಟೌಟ್‌ ಗೌನ್‌

New Year Fashion: ವಿಂಟರ್‌ ಸೀಸನ್‌ನ ಹೊಸ ವರ್ಷದ ನಯಾ ಲುಕ್‌ಗೆ ಇದೀಗ ಮಾಡೆಲ್‌ ಹಾಗೂ ನಟಿ ಜೋಯಾ ಅಫ್ರೋಜ್‌ ಡಿಸೈನರ್‌ ಕಟೌಟ್‌ ಗೌನ್‌ ಸೇರಿದೆ. ಸದ್ಯ ಗೌನ್‌ ಪ್ರಿಯರನ್ನು ಸೆಳೆದಿದೆ ಹಾಗೂ ಟ್ರೆಂಡಿಯಾಗಿದೆ.‌ ಏನಿದರ ವಿಶೇ‍ಷತೆ? ಈ ಕುರಿತ ವಿವರ ಇಲ್ಲಿದೆ.

ನಟಿ ಜೋಯಾ ಆಫ್ರೋಜ್‌ (ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ 2012), ಚಿತ್ರಕೃಪೆ: ಸೌರಭ್‌ ಡಾಲ್ವಿ ಫೋಟೋಗ್ರಫಿ.
1/5

ವಿಂಟರ್‌ ಸೀಸನ್‌ನ ಹೊಸ ವರ್ಷದ ನಯಾ ಲುಕ್‌ಗೆ ಇದೀಗ ಮಾಡೆಲ್‌ ಹಾಗೂ ನಟಿ ಜೋಯಾ ಅಫ್ರೋಜ್‌ ಡಿಸೈನರ್‌ ಕಟೌಟ್‌ ಗೌನ್‌ ಸೇರಿದೆ. ಸದ್ಯ ಗೌನ್‌ ಪ್ರಿಯರನ್ನು ಸೆಳೆದಿದೆ ಹಾಗೂ ಟ್ರೆಂಡಿಯಾಗಿದೆ.

2/5

ರೂಪಾಂತರಗೊಂಡ ಕಟೌಟ್‌ ಗೌನ್‌

ಹೌದು, ಈ ಹೊಸ ವರ್ಷದ ಸೀಸನ್‌ನಲ್ಲಿ ಸಾಕಷ್ಟು ಗೌನ್‌ಗಳು ರೂಪಾಂತರಗೊಂಡಿದ್ದು, ಗ್ಲಾಮರಸ್‌ ಲುಕ್‌ ನೀಡುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಈ ಲಿಸ್ಟ್‌ಗೆ ಜೋಯಾ ಅಫ್ರೋಜ್‌ ಧರಿಸಿದ್ದ ಈ ಬ್ಲ್ಯಾಕ್‌ ಡಾರ್ಕ್‌ ಶೇಡ್‌ನ ಕಟೌಟ್‌ ಗೌನ್‌ ಕೂಡ ಸೇರಿದೆ.

3/5

ಡಿಸೈನರ್‌ ಕಟೌಟ್‌ ಗೌನ್‌ ವಿಶೇಷತೆ

ಅಂದಹಾಗೆ, ಜೋಯಾ ಅಫ್ರೋಜ್‌ ಧರಿಸಿರುವ ಈ ಡಿಸೈನರ್‌ ಕಟೌಟ್‌ ಗೌನ್‌ ವಿಶೇಷತೆಯೆಂದರೇ ಇದೊಂದು ನೋಡಲು ಸಿಂಪಲ್‌ ಸಾದಾ ಗೌನ್‌ನಂತೆ ಕಂಡರೂ ಕಟೌಟ್‌ ವಿನ್ಯಾಸದ ಸುತ್ತಮುತ್ತ ಸ್ವರೋಸ್ಕಿಯಂತೆ ಕಾಣಿಸುವ ಕ್ರಿಸ್ಟಲ್‌ ಸ್ಟೋನ್‌ ಅಥವಾ ಬೀಡ್ಸ್ ಬಳಕೆ ಮಾಡಿ ವಿನ್ಯಾಸಗೊಳಿಸಲಾಗಿದೆ. ಸಿಂಗಲ್‌ ಶೋಲ್ಡರ್‌ ಗೌನ್‌ನಂತೆ ಕಂಡರೂ, ಮತ್ತೊಂದು ಶೋಲ್ಡರ್‌ಗೆ ಲಾಂಗ್‌ ಸ್ಲೀವ್‌ ವಿನ್ಯಾಸ ಮಾಡಲಾಗಿದೆ. ಇನ್ನು, ಕಾಲುಗಳನ್ನು ಹೈಲೈಟ್‌ ಮಾಡಲು ಗೌನ್‌ಗೆ ಸ್ಲಿಟ್‌ ಕಟ್‌ ನೀಡಲಾಗಿದೆ. ವೇಸ್ಟ್‌ಲೈನ್‌ ಬಳಿ ಕಟೌಟ್‌ ಮಾಡಲಾಗಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.

4/5

ಸೂಪರ್‌ ಮಾಡೆಲ್‌ ಲುಕ್‌ಗಾಗಿ ಕಟೌಟ್‌ ಗೌನ್‌

ಇನ್ನು, ಗೌನ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸುವುದು ಅಸಾಧ್ಯ ಎನ್ನುವಂತಹ ಯುವತಿಯರಿಗಾಗಿ ಇಂತಹ ಕಟೌಟ್‌ ಗೌನ್‌ಗಳು ಇತ್ತೀಚೆಗೆ ನಯಾ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ಆಕರ್ಷಕ ಕಟೌಟ್‌ ಗೌನ್‌

ಒಟ್ಟಿನಲ್ಲಿ, ಕೇವಲ ಮಾಡೆಲ್‌ಗಳು ಮಾತ್ರವಲ್ಲ,ಸಾಮಾನ್ಯ ಹುಡುಗಿಯರು ಕೂಡ ಇಂತಹ ಕಟೌಟ್‌ ಗೌನ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಬಹುದು ಎಂಬುದನ್ನು ಜೋಯಾ ಗೌನ್‌ ಪ್ರೂವ್‌ ಮಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಶೀಲಾ ಸಿ ಶೆಟ್ಟಿ

View all posts by this author