New Year Fashion Tips 2026: ಹೊಸ ವರ್ಷದ ನ್ಯೂ ಲುಕ್‌ಗೆ ಇಲ್ಲಿವೆ ಸಿಂಪಲ್ ಟಿಪ್ಸ್
Fashion Tips: ಕಳೆದ ವರ್ಷ ಒಂದೇ ರೀತಿಯ ಡ್ರೆಸ್ಸಿಂಗ್ ಸೆನ್ಸ್ ನಿಮಗೆ ಬೇಸರ ತರಿಸಿದ್ದಲ್ಲಿ, ಈ ವರ್ಷದ ಸ್ಟೈಲಿಂಗ್‌ನಲ್ಲಿ ಕೊಂಚ ಸುಧಾರಣೆ ಹಾಗೂ ಬದಲಾವಣೆ ತನ್ನಿ. ಗ್ಲಾಮರಸ್ ಟಚ್ ನೀಡಿ ಎನ್ನುತ್ತಾರೆ ಗ್ರೂಮಿಂಗ್ ಎಕ್ಸ್‌ಪರ್ಟ್ಸ್.
ಹೊಸ ವರ್ಷದ ನ್ಯೂ ಲುಕ್‌ಗೆ ಹಲೋ ಹೇಳಲು ಬಯಸುತ್ತಿದ್ದೀರಾ! ಹಾಗಾದಲ್ಲಿ, ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿ, ಟ್ರೈಮಾಡಿ ನೋಡಿ ಎನ್ನುತ್ತಿದ್ದಾರೆ ಗ್ರೂಮಿಂಗ್ ಎಕ್ಸ್‌ಪರ್ಟ್ಸ್.
ಮೊದಲು ಡ್ರೆಸ್ಸಿಂಗ್ ಸೆನ್ಸ್ ಬದಲಿಸಿಕೊಳ್ಳಿ
ಫ್ಯಾಷನಿಸ್ಟಾ ಜೆನ್ ಹೇಳುವಂತೆ, ಹಳೆಯ ಲುಕ್‌ಗೆ ಮೊದಲು ಇತಿಶ್ರೀ ಹಾಡಬೇಕು. ನಂತರ ಹಳೆಯ ಡ್ರೆಸ್ಸಿಂಗ್ ಸೆನ್ಸ್ ಬದಲಿಸಿಕೊಳ್ಳಬೇಕು. ಟ್ರೆಂಡಿಯಾಗಿರುವ ಸೀಸನ್ ವೇರ್ಸ್ ಹಾಗೂ ಕ್ಲಾಸಿ ಲುಕ್ ನೀಡುವ ಲೇಯರ್ ಲುಕ್ ಜತೆಗೆ ಮಿಕ್ಸ್ ಅಂಡ್ ಮ್ಯಾಚ್ ಡ್ರೆಸ್‌ಗಳನ್ನು ಪ್ರಯೋಗಿಸಬೇಕು ಎನ್ನುತ್ತಾರೆ.
ಔಟ್‌ಫಿಟ್‌ನೊಂದಿಗೆ ಸ್ಟೇಟ್‌ಮೆಂಟ್ ಆಕ್ಸೆಸರೀಸ್
ಧರಿಸುವ ಒಂದೊಂದು ಔಟ್‌ಫಿಟ್‌ಗೂ ಮ್ಯಾಚಿಂಗ್ ಇಲ್ಲವೇ ಸ್ಟೇಟ್‌ಮೆಂಟ್ ಆ್ಯಕ್ಸೆಸರೀಸ್ ಧರಿಸಿ. ಫಂಕಿ ಪ್ರಿಯರಾಗಿದ್ದಲ್ಲಿ, ಇದೀಗ ಲಭ್ಯವಿರುವ ಜಂಕ್, ಫೆದರ್ ಹಾಗೂ ಬರ್ಡ್ಸ್ ಆ್ಯಕ್ಸೆಸರೀಸ್ ಧರಿಸಿ. ಕೈಗಳಿಗೆ ಬ್ರೇಸ್ಲೇಟ್ ಇಲ್ಲವೇ ಕಂಗನ್ ಮಾದರಿಯ ಫಂಕಿ ಬ್ಯಾಂಗಲ್ಸ್ ಧರಿಸಿ. ಜ್ಯುವೆಲರಿಗಳು ನಿಮ್ಮ ಲುಕ್ ಬದಲಿಸಬಲ್ಲವು ಎನ್ನುತ್ತಾರೆ ಮಾಡೆಲ್ ರಿಶಾ.
ಮೇಕಪ್ ಮಾಯೆ
ನಿತ್ಯದ ಅಲಂಕಾರವೇ ಬೇರೆ. ವಿಶೇಷ ಅಲಂಕಾರವೇ ಬೇರೆ! ಹಾಗಾಗಿ ಆಯಾ ಸಂದರ್ಭಕ್ಕೆ ತಕ್ಕಂತೆ ಮೇಕಪ್ ಮಾಡಿ. ಪ್ರತಿದಿನ ಐ-ಲೈನರ್, ಮಸ್ಕರಾ ಅಥವಾ ಕಾಡಿಗೆ ಮೇಕಪ್‌ಗೆ ಸೇರಿಸಿಕೊಳ್ಳಿ. ಬ್ಲಷರ್‌ನಿಂದ ಗಲ್ಲವನ್ನು ಹೈಲೈಟ್ ಮಾಡಿ. ಮುಖಕ್ಕೆ ಶೇಪ್ ನೀಡಿ. ತಿಳಿಯಾದ ಲಿಪ್ಸ್‌ಟಿಕ್ ಲೇಪಿಸಿ, ಸೌಂದರ್ಯ ಹೆಚ್ಚಿಸಿಕೊಳ್ಳಿ ಎನ್ನುತ್ತಾರೆ ಮೇಕಪ್ ಎಕ್ಸ್‌ಪರ್ಟ್ಸ್.
ಸೀಸನ್ ನೈಲ್ ಆರ್ಟ್‌ಗೆ ಸೈ ಎನ್ನಿ
ಎಲ್ಲರಿಗೂ ತಿಳಿದಿರುವಂತೆ, ಈಗ ಫ್ಯಾಷನಬಲ್ ನೇಲ್ ಆರ್ಟ್ ಕಾಲ. ಇದಕ್ಕೆ ಪೂರಕ ಎಂಬಂತೆ, ಎಲ್ಲೆಡೆ ನೇಲ್ ಬಾರ್‌ಗಳಿವೆ. ಅಲ್ಲಿಗೆ ಭೇಟಿ ನೀಡಿ, ಸೀಸನ್‌ಗೆ ತಕ್ಕಂತೆ ನೇಲ್ ಡಿಸೈನ್ ಆರ್ಟ್ ಮಾಡಿಸಿಕೊಳ್ಳಿ. ಇದು ಉಗುರುಗಳ ಅಂದ ಹೆಚ್ಚಿಸಬಲ್ಲದು.
ಮುಖಚರ್ಯೆ ಬದಲಿಸುವ ಹೇರ್ ಸ್ಟೈಲ್
ಯಾವಾಗಲೂ ಒಂದೇ ಬಗೆಯ ಕೇಶ ವಿನ್ಯಾಸ ಮಾಡಿಕೊಳ್ಳುತ್ತಿದ್ದಲ್ಲಿ, ಮೊದಲು ಕೂದಲಿಗೆ ಹೊಸ ಲುಕ್ ನೀಡಿ. ಕೂದಲನ್ನು ಉಲ್ಟಾ ಬಾಚಿ ನಂತರ ಕೇಶ ವಿನ್ಯಾಸ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆಗ ಬಲವಿಲ್ಲದೆ ನಲುಗಿದಂತಿರುವ ಕಳಾಹೀನ ಕೂದಲೂ ಕೂಡ ಆಕರ್ಷಕವಾಗಿ ಕಾಣಿಸುತ್ತದೆ. ನಿಮ್ಮ ವಧನಕ್ಕೆ ಹೊಂದುವ ಹೊಸ ಹೇರ್‌ಸ್ಟೈಲ್ ಟ್ರೈ ಮಾಡಿ.
ಪಾದರಕ್ಷೆಗಳ ಜಾದೂ
ಔಟ್‌ಫಿಟ್ ಜತೆಗೆ ನೀವು ಧರಿಸುವ ಸ್ಯಾಂಡಲ್‌ಗಳು ಕೂಡ ನಿಮ್ಮ ಇಮೇಜ್ ಬದಲಿಸಬಲ್ಲದು. ಹಾಗಾಗಿ ಟ್ರೆಂಡಿಯಾಗಿರುವ ಶೂ ಹಾಗೂ ಸ್ಯಾಂಡಲ್‌ಗಳನ್ನು ಧರಿಸುವುದನ್ನು ರೂಢಿಸಿಕೊಳ್ಳಿ.