ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗಳಿಗೆ ಎಂಥ ಅರ್ಥಪೂರ್ಣ ಹೆಸರನ್ನಿಟ್ಟಿದ್ದಾರೆ ನೋಡಿ ʻನಿನಗಾಗಿʼ ಧಾರಾವಾಹಿ ರಿತ್ವಿಕ್‌ ಮಠದ್;‌ ಇಲ್ಲಿವೆ ಮಗುವಿನ ಮುದ್ದಾದ ಫೊಟೋಗಳು

'ಅನುರೂಪ', 'ಗಿಣಿರಾಮ', ʻನಿನಗಾಗಿʼ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್‌ ಆಗಿರುವ ರಿತ್ವಿಕ್‌ ಮಠದ್‌ ಅವರು ಈಚೆಗೆ ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಇದೀಗ ತಮ್ಮ ಮಗಳಿಗೆ ಅರ್ಥಪೂರ್ಣ ಹೆಸರನ್ನು ಇಟ್ಟು, ಅದನ್ನು ರಿವೀಲ್‌ ಮಾಡಿದ್ದಾರೆ. ಮಗಳಿಗೆ ಲಿಪಿ ಎಂದು ರಿತ್ವಿಕ್‌ ಹೆಸರನ್ನು ಇಟ್ಟಿದ್ದಾರೆ. "ಲಿಪಿ ಅಂದರೆ ಬರಹ, ನಮ್ಮ ಜೀವನದ ಅತ್ಯಂತ ಸುಂದರ ಕಥೆ.." ಎಂದು ಬರೆದುಕೊಂಡಿದ್ದಾರೆ. ರಿತ್ವಿಕ್‌ ಅವರು 2020ರಲ್ಲಿ ಸುಮನ್‌ ಎಂಬುವವರನ್ನು ಮದುವೆ ಆಗಿದ್ದರು. ರಿತ್ವಿಕ್‌ ಅವರು ಮಗಳ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1/7

ಉತ್ತರ ಕರ್ನಾಟಕ ಮೂಲದ ನಟ ರಿತ್ವಿಕ್‌ ಮಠದ್‌ ಅವರು ಕನ್ನಡ ಕಿರುತೆರೆಯಲ್ಲಿ ಫೇಮಸ್‌ ಆಗಿದ್ದಾರೆ.

2/7

ಜನಪ್ರಿಯ ಧಾರಾವಾಹಿಗಳ ಜೊತೆಗೆ ಯುವ ಸಾಮ್ರಾಟ್', 'ಶಂಭು ಮಹಾದೇವ', 'ಆ ಎರಡು ವರ್ಷಗಳು', 'ಗಿಫ್ಟ್ ಬಾಕ್ಸ್', ʻಮಾರ್ನಮಿʼ ಮುಂತಾದ ಸಿನಿಮಾಗಳಲ್ಲೂ ನಟಿಸಿದ್ದಾರೆ.

3/7

'ಗಿಣಿರಾಮ' ಧಾರಾವಾಹಿಯ ಶಿವರಾಮನ ಪಾತ್ರವು ರಿತ್ವಿಕ್‌ಗೆ ಭಾರಿ ಜನಪ್ರಿಯತೆಐನ್ನು ತಂದುಕೊಟ್ಟಿತ್ತು.

4/7

ರಿತ್ವಿಕ್ ಮಠದ್‌ ಮತ್ತು ಸುಮನ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಸುಮನ್‌ ಅವರು ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.

5/7

ಕಳೆದ ವರ್ಷ ಆಗಸ್ಟ್‌ನಲ್ಲಿ ರಿತ್ವಿಕ್‌ ಅವರು ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿದ್ದರು.

6/7

ರಿತ್ವಿಕ್ ಮಠದ್‌ ಹಂಚಿಕೊಂಡಿರುವ ಮಗಳ ಫೋಟೋಗಳಿಗೆ ಅಭಿಮಾನಿಗಳು ಲೈಕ್‌ ಒತ್ತಿದ್ದಾರೆ.

7/7

ತಾರೆಯರಾದ ದಿವ್ಯಾ ಉರುಡುಗ, ಚೈತ್ರಾ ಜೆ ಆಚಾರ್, ಸುಜಾತಾ ಅಕ್ಷಯ ಸೇರಿದಂತೆ ಅನೇಕರು ರಿತ್ವಿಕ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.