ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nora Fatehi: ನೋರಾ ಫತೇಹಿ ಸೆಕ್ಸಿ ಲುಕ್‌ ಕಂಡು 'ಅಬ್ಬಬ್ಬಾ' ಎಂದ್ರು ಫ್ಯಾನ್ಸ್​

ಕಿರುತೆರೆ, ಬಾಲಿವುಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ನೋರಾ ಫತೇಹಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಅಲ್ಲದೇ ಬೋಲ್ಡ್ ಪೋಟೋ ಶೂಟ್ ಮುಖಾಂತರವು ಅವರು ಸುದ್ದಿಯಲ್ಲಿರುತ್ತಾರೆ. ನಟಿ ನೋರಾ ಫತೇಹಿ ಶೇರ್ ಮಾಡಿರುವ ಕೆಲವು ಫೋಟೋಗಳು ಇಲ್ಲಿವೆ.

1/6

ರೋರ್: ಟೈಗರ್ಸ್ ಆಫ್ ದಿ ಸುಂದರಬನ್ಸ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನೋರಾ ಫತೇಹಿ ಹಲವು ಆಲ್ಬಂ ಸಾಂಗ್​ಗಳಲ್ಲೂ ಸೊಂಟ ಬಳುಕಿಸಿದ್ದಾರೆ.‌ ಹೊಸ ಫೋಟೋ ಶೂಟ್ ಮಾಡಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸುವ ನಟಿ ಇತ್ತೀಚೆಗೆ ಹೊಸ ಫೋಟೋ ಶೇರ್ ಮಾಡಿದ್ದಾರೆ..

2/6

ನಟಿ ಕಪ್ಪು ಬಣ್ಣದ ನೆಕ್‌ಲೈನ್ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್​ನಲ್ಲಿ ಇವರು ನೀಡಿರುವ ಫೋಸ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

3/6

ನೋರಾ ಫತೇಹಿ ಸೋಷಿಯಲ್ ಮೀಡಿಯಾದಲ್ಲೂ ಬಹಳಷ್ಟು ಆ್ಯಕ್ಟೀವ್ ಆಗಿದ್ದಾರೆ. ಇವರ ಬೋಲ್ಡ್ ಲುಕ್ ಫೋಟೋ ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಈ ಭಾರಿಯು ನಟಿ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ.

4/6

ನೋರಾ ಫತೇಹಿ ಬ್ಲಾಕ್ ಕಲರ್ ಬಾಡಿಕಾನ್ ಡ್ರೆಸ್‌ನಲ್ಲಿ ತಮ್ಮ ಫಿಟ್ ಫಿಗರ್‌ನ್ನು ತೋರ್ಪಡಿಸಿದ್ದಾರೆ. ಈ ಉಡುಪಿನಲ್ಲಿ ನಟಿಯ ಗ್ಲಾಮರ್ ಲುಕ್ ಮತ್ತಷ್ಟು ಆಕರ್ಷಕವಾಗಿ ಕಂಡಿದೆ.

5/6

ನೋರಾ ಫತೇಹಿ ಬ್ಲಾಕ್ ಬಾಡಿಕಾನ್ ಡ್ರೆಸ್ ನಲ್ಲಿ ಹಾಟ್ ಲುಕ್ ಕೊಟ್ಟಿದ್ದಾರೆ. ಈ ಡ್ರೆಸ್ ಗೆ ಬೆಳ್ಳಿಯ ಸ್ಟಡ್ಸ್‌ ನ ವಿಶಿಷ್ಟ ವಿನ್ಯಾಸ ಮಾಡಲಾಗಿತ್ತು. ನಟಿ ಈ ಗ್ರ್ಯಾಂಡ್ ನೋಟಕ್ಕೆ ಸಿಂಪಲ್ ಮೇಕಪ್ ಮಾಡಿದ್ದು ನ್ಯೂಡ್ ಪಿಂಕ್ ಲಿಪ್ಸ್ ಸ್ಟಿಕ್ ನೊಂದಿಗೆ ಫ್ರೀ ಹೇರ್ ಸ್ಟೈಲ್ ಮಾಡಿದ್ದರು.

6/6

ಟೆಂಪರ್, ಕಿಕ್ 2, ಲೋಫರ್ ಮತ್ತು ಊಪಿರಿ ಸೇರಿದಂತೆ ಅನೇಕ ಹಿಟ್ ಚಿತ್ರದಲ್ಲಿ ನಟಿಸಿದ್ದ ನೋರಾ ಫತೇಹಿ‌ ಕೊನೆಯದಾಗಿ ನೆಟ್ ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ದಿ ರಾಯಲ್ಸ್ ನಲ್ಲಿ ಕಾಣಿಸಿಕೊಂಡಿದ್ದರು.