Planes in 1920-30s: 1920-30ರ ದಶಕದ ವಿಮಾನಗಳು ಹೇಗಿದ್ದವು ಗೊತ್ತೆ? ಇಲ್ಲಿದೆ ಅಪರೂಪದ ಫೋಟೊ
ಹಲವು ದಶಕಗಳ ಹಿಂದೆ ಈಗ ಇರುವಂತೆ ವಿಮಾನಗಳು ಇರಲಿಲ್ಲ. 1920-30ರ ದಶಕದಲ್ಲಿ ವಿಮಾನಗಳು ಹೇಗಿದ್ದಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ದುಬಾರಿ, ತುಂಬಾ ಅನುಕೂಲ ಹೊಂದಿದ್ದ ಅಂದಿನ ವಿಮಾನಗಳು ಒಳಗಿನಿಂದ ಹೇಗಿದ್ದವು? ಪ್ರಯಾಣ ವೆಚ್ಚ ಎಷ್ಟಿತ್ತು? ಎನ್ನುವ ಕುತೂಹಲವಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.



1920-30ರ ದಶಕದಲ್ಲಿ ವಿಮಾನಗಳ ಪ್ರಯಾಣ ಈಗಿನಷ್ಟು ದುಬಾರಿಯಾಗಿರಲಿಲ್ಲ. ಆಗ ನ್ಯೂಯಾರ್ಕ್ನಿಂದ ಲಾಸ್ ಏಂಜಲೀಸ್ಗೆ ಒಂದು ಸುತ್ತಿನ ಪ್ರವಾಸಕ್ಕೆ ಒಬ್ಬ ವ್ಯಕ್ತಿ ಕೇವಲ 260 ಡಾಲರ್ ಅಂದರೆ ಸರಿಸುಮಾರು ಆಗಿನ ಕಾಲದಲ್ಲಿ668 ರೂ. ಪಾವತಿಸಿದರೆ ಸಾಕಿತ್ತು. ಇದು ಆಗ ಹೊಚ್ಚ ಹೊಸ ಕಾರಿನ ಅರ್ಧದಷ್ಟು ಬೆಲೆಯಾಗಿತ್ತು.

ಬಹುತೇಕ ವಿಮಾನಗಳು ಇಂದು ಆರಾಮ ಮತ್ತು ಐಷಾರಾಮಿಯಾಗಿದೆ. ಆದರೆ ಆಗಿನ ಕಾಲದಲ್ಲಿನ ವಿಮಾನದಲ್ಲಿ ಪ್ರಯಾಣಿಸುವುದು ತುಂಬಾ ಅನಾನುಕೂಲವೆಂದೇ ಪರಿಗಣಿಸಲಾಗಿತ್ತು. ಯಾಕೆಂದರೆ ಆಗ ವಿಮಾನದೊಳಗೆ ಬೆತ್ತದ ಕುರ್ಚಿಗಳಿದ್ದವು. ಕ್ಯಾಬಿನ್ಗಳಲ್ಲಿ ಹೆಚ್ಚು ಒತ್ತಡವಿರುತ್ತಿರಲಿಲ್ಲ.

1920 ಮತ್ತು 30ರ ದಶಕದ ವಿಮಾನಗಳ ಫೋಟೊಗಳು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿವೆ. ಇದು ಆಗಿನ ವಿಮಾನಗಳ ಸಂಪೂರ್ಣ ಚಿತ್ರಣವನ್ನು ತೋರಿಸಿವೆ. 1914ರಲ್ಲಿ ಮೊದಲ ವಿಮಾನ ಹಾರಾಟ ಪ್ರಾರಂಭವಾಯಿತು. ಮುಂದಿನ ಕೆಲವು ವರ್ಷಗಳಲ್ಲಿ ಹಲವಾರು ವಿಮಾನಯಾನ ಕಂಪೆನಿಗಳು ರೂಪುಗೊಂಡವು. ಆದರೆ ವಿಮಾನಯಾನವು ಶ್ರೀಮಂತರಿಗೆ ಮಾತ್ರ ಮೀಸಲಾಗಿತ್ತು.

ಆಗಿನ ಕಾಲದಲ್ಲಿ ನ್ಯೂಯಾರ್ಕ್ನಿಂದ ಲಾಸ್ ಏಂಜಲೀಸ್ಗೆ ಒಂದು ಸುತ್ತಿನ ವಿಮಾನಯಾನಕ್ಕೆ ಒಬ್ಬ ವ್ಯಕ್ತಿಗೆ 260 ಡಾಲರ್ ವೆಚ್ಚವಾಗುತ್ತಿತ್ತು. ಅದು ಆಗ ಹೊಸ ಕಾರು ಖರೀದಿಸಿದರೆ ಪಾವತಿಸಬೇಕಾದ ಅರ್ಧದಷ್ಟು ಮೊತ್ತವಾಗಿತ್ತು.

ಆಗಿನ ವಿಮಾನಗಳು ಕಡಿಮೆ ಹಾರಾಟ ಮಾತ್ರ ನಡೆಸುತ್ತಿತ್ತು. ವಿಮಾನಗಳು ಹವಾಮಾನ ಮತ್ತು ಗಾಳಿಯಿಂದ ಹೆಚ್ಚು ಪ್ರಭಾವಿತವಾಗುತ್ತಿತ್ತು. ಇದು ಪ್ರಯಾಣಿಕರ ಆರೋಗ್ಯವನ್ನೂ ಕೆಡಿಸುತ್ತಿತ್ತು. ಯಾವುದೇ ತಾಪಮಾನ ನಿಯಂತ್ರಣವಿರಲಿಲ್ಲ.

1930ರಲ್ಲಿ ಮೊದಲ ಬಾರಿಗೆ ವಿಮಾನಯಾನ ಕಂಪೆನಿಯು ಮೊದಲ ವ್ಯವಸ್ಥಾಪಕಿಯನ್ನು ನೇಮಿಸಿಕೊಂಡಿತು. ಆರಂಭಿಕ ವ್ಯವಸ್ಥಾಪಕಿಗಳು ಹೆಚ್ಚಾಗಿ ತರಬೇತಿ ಪಡೆದ ದಾದಿಯರಾಗಿದ್ದರು. ಅವರು ಪ್ರಯಾಣಿಕರಿಗೆ ಆತಂಕ ಮತ್ತು ವಾಯು ಕಾಯಿಲೆಯನ್ನು ನಿಭಾಯಿಸಲು ಸಹಾಯ ಮಾಡುತ್ತಿದ್ದರು.

ವಿಮಾನಗಳಲ್ಲಿ ಹೆಚ್ಚು ಗದ್ದಲವಿರುತ್ತಿತ್ತು. ಕೆಲವರು ಶಾಶ್ವತವಾಗಿ ಕಿವುಡರಾಗುತ್ತಿದ್ದರು. ಇದರಿಂದ ಅನೇಕ ವಿಮಾನ ಸಿಬ್ಬಂದಿ ಮೆಗಾಫೋನ್ಗಳನ್ನು ಬಳಸಿಕೊಂಡು ಪ್ರಯಾಣಿಕರೊಂದಿಗೆ ಮಾತನಾಡಬೇಕಾಗಿತ್ತು.

1930ರ ದಶಕದ ಅಂತ್ಯದ ವೇಳೆಗೆ ಹೆಚ್ಚು ವಿಶಾಲವಾದ ಮತ್ತು ಐಷಾರಾಮಿ ವಿಮಾನಗಳು ಬಂದವು. ಇವು ವಿಮಾನ ಪ್ರಯಾಣದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿತ್ತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಳೆಯ ಕಾಲದ ವಿಮಾನಗಳನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.