Chikkaballapur News: ದೈಹಿಕವಾಗಿ ಸದೃಢವಾಗಿದ್ದರೆ ಸಾಲದು ಮಾನಸಿಕ ಆರೋಗ್ಯವೂ ಮುಖ್ಯ : ಡಾ.ಪ್ರಕಾಶ್ ಅಭಿಮತ
ನಿವೃತ್ತ ನೌಕರರು ಮೂರು ತಿಂಗಳಿಗೊಮ್ಮೆ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಔಷದೋಪಚಾರ ಪಡೆಯುವುದು ಮುಖ್ಯ.ದೇಹ ಆರೋಗ್ಯವಾಗಿರುವಂತೆ ಕಂಡರೂ ಕೂಡ ತಪಾಸಣೆಗೆ ಒಳಗಾಗುವುದು ಅಗತ್ಯ.ಔಷದಗಳೇ ಎಲ್ಲಕ್ಕೂ ಅಂತಿಮವಲ್ಲ, ದೈಹಿಕವಾದ ಚಟು ವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೂ ಕೂಡ ಮುಖ್ಯ


ಚಿಕ್ಕಬಳ್ಳಾಪುರ : ಹಿರಿಯ ನಾಗರೀಕರು ರಿಟೈರ್‌ಮೆಂಟ್ ನಂತರ ಒತ್ತಡಮುಕ್ತ ಜೀವನ ನಡೆಸ ಬೇಕಾದರೆ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ ಎಂದು ಎಂದು ಡಾ.ಪ್ರಕಾಶ್ ಸಲಹೆ ನೀಡಿದರು.
ನಗರದ ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಮಾಹೆಗೊಮ್ಮೆ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯ ನಾಗರೀಕರಲ್ಲಿ ವಯಸ್ಸಾದಂತೆ ಆರೋಗ್ಯ ಕ್ಷೀಣಿಸುತ್ತದೆ.ಮಧುಮೇಹ, ಅಧಿಕರಕ್ತದೊತ್ತಡ, ಹೃದ್ರೋಗದಂತಹ ದೀರ್ಘಕಾಲದ ಖಾಯಿಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ದೈಹಿಕ ಸಮಸ್ಯೆಗಳ ಜತೆಗೆ, ಮಾನಸಿಕ ಸಮಸ್ಯೆಗಳಾದ ಖಿನ್ನತೆ, ಬುದ್ಧಿಮಾಂದ್ಯತೆ, ಆತಂಕ, ನಿದ್ರಾ ಹೀನತೆಗಳು ಇತ್ಯಾದಿಗಳು ಒಂಟಿತನದಿಂದ ಉಂಟಾಗುತ್ತವೆ. ಇವುಗಳಿಂದ ಪಾರಾಗಬೇಕಾದರೆ ಯೋಗ ಧ್ಯಾನ ಜಪ ತಪ,ಗೆಳೆಯರೊಂದಿಗೆ ಬೆರೆಯುವುದು, ಏನಾದರೊಂದು ಕೆಲಸ ಕಾರ್ಯಗಳಲ್ಲಿ ಕ್ರೀಯಾಶೀಲರಾಗುವುದು ಅಗತ್ಯ ಎಂದರು.
ಇದನ್ನೂ ಓದಿ: Chinthamani News: ಭಕ್ತಿಯಿಂದ ಅಂತರಂಗದ ಶುದ್ಧಿ ಸಾಧ್ಯ: ಕೈವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಮತ
ನಿವೃತ್ತ ನೌಕರರು ಮೂರು ತಿಂಗಳಿಗೊಮ್ಮೆ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಔಷದೋಪಚಾರ ಪಡೆಯುವುದು ಮುಖ್ಯ.ದೇಹ ಆರೋಗ್ಯವಾಗಿರುವಂತೆ ಕಂಡರೂ ಕೂಡ ತಪಾಸಣೆಗೆ ಒಳಗಾಗುವುದು ಅಗತ್ಯ. ಔಷಧಗಳೇ ಎಲ್ಲಕ್ಕೂ ಅಂತಿಮವಲ್ಲ, ದೈಹಿಕ ವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೂ ಕೂಡ ಮುಖ್ಯ ಎಂದರು.
ನಗರೀಕರಣ ಮತ್ತು ಆಧುನಿಕ ಜೀವನ ಶೈಲಿಯಿಂದಾಗಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬ ಗಳಾಗಿ ಒಡೆದುಹೋಗಿರುವುದು ಕೂಡ ಹಿರಿಯನಾಗರೀಕರು ಒಂಟಿತನ ಅನುಭವಿಸಲು ಕಾರಣ ವಾಗಿವೆ. ಇದಾಗಬಾರದು ಎನ್ನುವುದಾದರೆ ಮಕ್ಕಳು ತಂದೆತಾಯಿಯನ್ನು ಗೌರವ ಭಾವದಿಂದ ಕಾಣಬೇಕು ಎಂದರು.
sನಿವೃತ್ತ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಕೃಷ್ಣ ಮಾತನಾಡಿ, ತಪ್ಪುಗಳನ್ನು ತಿದ್ದಿ ಹೇಳುವ ಹಿರಿಯ ನಾಗರೀಕರು ಮನೆಯಲ್ಲಿರಬೇಕು.ಇತ್ತೀಚಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಇಲ್ಲದ ಕಾರಣ ವೈವಾಹಿಕ ಹಾಗೂ ಆಸ್ತಿ ಸಂಬAಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಣ್ಣಪುಟ್ಟ ವಿಚಾರಗಳಿಗೂ ಕೋರ್ಟು ಕಛೇರಿ ಅಂತ ಅಲೆಯುವುದು ಸಾಮಾನ್ಯವಾಗಿದೆ. ಸದ್ಯ ನಮ್ಮ ಜಿಲ್ಲೆ ಯಲ್ಲಿ ಇಂತಹ ಪ್ರಕರಣಗಳು ಇಲ್ಲದಿರುವುದು ಸಮಾಧಾನದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಎಲ್ಲಾ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರ ನೀಡಿದ ವೈದ್ಯ ಡಾ.ಪ್ರಕಾಶ್ ಅವರನ್ನು ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.