ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಬಿಜಿಎಸ್ ಶಾಲೆಯಲ್ಲಿ ಬೀಜದುಂಡೆ ಗಣಪನ ತಯಾರಿ ಮೂಲಕ ಪರಿಸರ ಜಾಗೃತಿ

ಗಣಪತಿ ಹಬ್ಬವೆಂದರೆ ಗಣಪತಿಯನ್ನು ಕೂರಿಸಿ ಕಡುಬು ಕಾಯಿ ಮಾಡಿ ತಿಂದುಂಡು ಕುಣಿಯುವುದಲ್ಲ. ಭಾರತೀಯತೆ ಯನ್ನು ಸಾರುವ ಪ್ರಮುಖ ಆಚರಣೆಯಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿತುಂಬಿದ ಗಣಪತಿ ಹಬ್ಬವನ್ನು ನೆಪವಾಗಿರಿಸಿಕೊಂಡು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ವಾಗಿದೆ. ಅರಣ್ಯ ಸಂಪತ್ತು ವಿರಳವಾಗುತ್ತಿರುವ ಈ ಹೊತ್ತಿನಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಕೃಪಾಶೀರ್ವಾ ದಿಂದ ಕಳೆದ ೬ ವರ್ಷಗಳಿಂದ ಸೀಡ್‌ಬಾಲ್ ಗಣಪನನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.

ಬಿಜಿಎಸ್ ಶಾಲೆಯಲ್ಲಿ ಬೀಜದುಂಡೆ ಗಣಪನ ತಯಾರಿ ಮೂಲಕ ಪರಿಸರ ಜಾಗೃತಿ

ವಿದ್ಯಾರ್ಥಿಗಳ ಕೈಯಲ್ಲಿ ಮಣ್ಣಿನ ಗಣಪನನ್ನು ಮಾಡಿಸಿ ತಲೆ ಮತ್ತು ಹೊಟ್ಟೆಯ ಭಾಗದಲ್ಲಿ ಅರಣ್ಯ ಸಂವರ್ಧನೆಯ ಬೀಜಗಳನ್ನಿಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಕೆಲಸವನ್ನು ಬಿಜಿಎಸ್ ಶಾಲೆಯು ಸದ್ದು ಸುದ್ದಿಲ್ಲದಂತೆ ಕಳೆದ ೬ ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಚಿತ್ರ..

Ashok Nayak Ashok Nayak Aug 24, 2025 10:52 PM

ಚಿಕ್ಕಬಳ್ಳಾಪುರ : ವಿದ್ಯಾರ್ಥಿಗಳ ಕೈಯಲ್ಲಿ ಮಣ್ಣಿನ ಗಣಪನನ್ನು ಮಾಡಿಸಿ ತಲೆ ಮತ್ತು ಹೊಟ್ಟೆಯ ಭಾಗದಲ್ಲಿ ಅರಣ್ಯ ಸಂವರ್ಧನೆಯ ಬೀಜಗಳನ್ನಿಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಕೆಲಸವನ್ನು ಬಿಜಿಎಸ್ ಶಾಲೆಯು ಸದ್ದು ಸುದ್ದಿಲ್ಲದಂತೆ ಕಳೆದ ೬ ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ.

ನಗರ ಹೊರವಲಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೂ ಪೂರ್ವದಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಸೀಡ್‌ಬಾಲ್ ಗಣಪನನ್ನು ಮಾಡಿಸಿ ಪರಿಸರ ಜಾಗೃತಿ ಮೂಡಿಸಲಾಯಿತು.

ಸದಾಕಾಲ ಪಾಠಪ್ರವಚನ ಇತ್ಯಾದಿ ಶೈಕ್ಷಣಿಕ ಚಟವಟಿಕೆಗಳಲ್ಲಿ ತೊಡಗಿರುವ ಮಕ್ಕಳ ಕೈಗೆ ಮಣ್ಣನ್ನು ನೀಡಿ ಅವರ ಮನೋಭಿತ್ತಿಯಲ್ಲಿರುವ ಗಣಪನ ಸೃಷ್ಟಿಗೆ ಅವಕಾಶ ಮಾಡಿಕೊಡುವ ಮೂಲಕ ಪರಿಸರ ಕಾಪಾಡುವ ಹೊಣೆಗಾರಿಕೆಯನ್ನು ಮಕ್ಕಳ ಮನಸ್ಸಲ್ಲಿ ತುಂಬುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾದರು.

ಬಣ್ಣಗಳ ಗೊಡವೆಯಿಲ್ಲದೆ, ಅಲಂಕಾರದ ಸೋಂಕಿಲ್ಲದೆ ಮಕ್ಕಳು ತಮ್ಮ ಮನಸ್ಸಿಗೆ ತೋಚಿದಂತೆ ಗಣಪನನ್ನು ಸೃಷ್ಟಿಸಿ ಸಂತೋಷ ಪಟ್ಟರು.೫೦ಕ್ಕೂ ಹೆಚ್ಚು ಮಕ್ಕಳು ಗಣಪನನ್ನು ಮಾಡಿ ಗುರು ಗಳಿಗೆ ತೋರಿಸಿ ಆನಂದಪಡುತ್ತಿರುವ ದೃಶ್ಯವು ನೋಡಲು ಸುಂದರವಾಗಿತ್ತು.

ಇದನ್ನೂ ಓದಿ: Chinthamani News: ಭಕ್ತಿಯಿಂದ ಅಂತರಂಗದ ಶುದ್ಧಿ ಸಾಧ್ಯ: ಕೈವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಮತ

ಈ ಬಗ್ಗೆ ಮಾತನಾಡಿದ ಪ್ರಾಂಶುಪಾಲ ಬಿ.ಸಿ ಮೋಹನ್ ಕುಮಾರ್, ಗಣಪತಿ ಹಬ್ಬವೆಂದರೆ ಗಣಪತಿಯನ್ನು ಕೂರಿಸಿ ಕಡುಬು ಕಾಯಿ ಮಾಡಿ ತಿಂದುಂಡು ಕುಣಿಯುವುದಲ್ಲ. ಭಾರತೀಯತೆ ಯನ್ನು ಸಾರುವ ಪ್ರಮುಖ ಆಚರಣೆಯಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿತುಂಬಿದ ಗಣಪತಿ ಹಬ್ಬವನ್ನು ನೆಪವಾಗಿರಿಸಿಕೊಂಡು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ವಾಗಿದೆ. ಅರಣ್ಯ ಸಂಪತ್ತು ವಿರಳವಾಗುತ್ತಿರುವ ಈ ಹೊತ್ತಿನಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಕೃಪಾಶೀರ್ವಾ ದಿಂದ ಕಳೆದ ೬ ವರ್ಷಗಳಿಂದ ಸೀಡ್‌ಬಾಲ್ ಗಣಪನನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಇಲ್ಲಿ ತಯಾರಾಗುವ ಗಣಪನ ಹೊಟ್ಟೆ ಮತ್ತು ಶಿರಭಾಗದಲ್ಲಿ ಬೀಜಗಳನ್ನಿಟ್ಟು ತಯಾರಾದ ಗಣಪನನ್ನು ಮಕ್ಕಳ ಮನೆಗೆ ಹಿಂದಿರುಗಿಸುತ್ತೇವೆ.ಮನೆಯಲ್ಲಿ ಪೂಜೆ ಮಾಡಿ ವಿಸರ್ಜನೆ ಮಾಡುವ ಬದಲಿಗೆ ಭೂಮಿಯಲ್ಲಿ ಹೂಳುವ ಮೂಲಕ ಅಲ್ಲೊಂದು ಗಿಡಬೆಳೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

೬ ವರ್ಷಗಳಲ್ಲಿ ಸರಿಸುಮಾರು ಒಂದು ಸಾವಿರಕ್ಕೂ ಹೆಚ್ಚು ಮರಗಿಡಗಳನ್ನು ಬೆಳೆಸಿ ಪೋಷಣೆ ಮಾಡಲಾಗಿದೆ. ಈ ಅಭಿಯಾನ ಹೀಗೆಯೇ ಮುಂದುವರೆಯಲಿದೆ ಎಂದು ತಿಳಿಸಿದ ಅವರು ಎಲ್ಲರಿಗೂ ವಿಘ್ನನಿವಾರಕ ಗಣಪತಿ ಪರಿಸರ ಪ್ರೇಮ ಮೆರೆಯುವ ಸದ್ಬುದ್ಧಿ ನೀಡಲಿ ಎಂದು ಶುಭ ಹಾರೈಸಿದರು.