ಸಿಕ್ಕಿಂ ಯುವಕರೊಂದಿಗೆ ಫುಟ್‌ಬಾಲ್ ಆಡಿ ಸಂಭ್ರಮಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಮಂಗಳವಾರ ಯುವಕರೊಂದಿಗೆ ಫುಟ್‌ಬಾಲ್ ಆಡಿ ಸಂಭ್ರಮಿಸಿದರು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ಹಂಚಿಕೊಂಡ ಅವರು ಇದು ಅತ್ಯಂತ ಸುಂದರ ಬೆಳಗ್ಗೆ ಮತ್ತು ಅತ್ಯಂತ ಶಕ್ತಿಯುತವಾದ ಅವಧಿ. ಇದಕ್ಕಿಂತ ಸಂತೋಷದ ಕ್ಷಣ ಬೇರೆ ಇಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಯುವಕರೊಂದಿಗೆ ಫುಟ್‌ಬಾಲ್ ಆಡಿ ಸಂಭ್ರಮಿಸಿದರು. ಇದೊಂದು ಅತ್ಯಂತ ಸುಂದರ ಕ್ಷಣ ಎಂದು ಬಣ್ಣಿಸಿದರು. ಇದರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು ಇದು ಅತ್ಯಂತ ಸುಂದರ ಬೆಳಗ್ಗೆ ಮತ್ತು ಅತ್ಯಂತ ಶಕ್ತಿಯುತವಾದ ಅವಧಿಯಾಗಿದೆ ಎಂದು ಹೇಳಿದ್ದಾರೆ.
ಯುವಕರೊಂದಿಗೆ ಫುಟ್ ಬಾಲ್ ಆಡುವ ಕೆಲವು ಚಿತ್ರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಸುಂದರವಾದ ಗ್ಯಾಂಗ್ಟಾಕ್. ಬೆಳಗ್ಗೆ ಸಿಕ್ಕಿಂನಲ್ಲಿ ನನ್ನ ಯುವ ಸ್ನೇಹಿತರೊಂದಿಗೆ ಫುಟ್‌ಬಾಲ್ ಆಡುವುದಕ್ಕಿಂತ ಸಂತೋಷದ ಕ್ಷಣ ಬೇರೆ ಇಲ್ಲ ಎಂದು ತಿಳಿಸಿದರು.
ಸಿಕ್ಕಿಂ ರಾಜ್ಯತ್ವದ 50ನೇ ವಾರ್ಷಿಕೋತ್ಸವವನ್ನು ಗುರುತಿಸುವ ಸಮಾರೋಪ ಸಮಾರಂಭಕ್ಕಾಗಿ ಪ್ರಧಾನಿ ಮೋದಿ ಅವರು ಸೋಮವಾರ ಗ್ಯಾಂಗ್‌ಟಾಕ್‌ಗೆ ತೆರಳಿದ್ದು, ಈ ಸಂದರ್ಭದಲ್ಲಿ ಮಂಗಳವಾರ ಬೆಳಗ್ಗೆ ಯುವಕರೊಂದಿಗೆ ಸಮಯ ಕಳೆದರು. ಇದರ ಇನ್ನೊಂದು ಪೋಸ್ಟ್‌ನಲ್ಲಿ ಅವರು ಇದೊಂದು ಚೈತನ್ಯದಾಯಕ ಅವಧಿ ಎಂದು ಹೇಳಿದ್ದಾರೆ.
ಈಶಾನ್ಯ ಪ್ರದೇಶದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಫುಟ್‌ಬಾಲ್ ಕ್ರೀಡೆಯು ಸಿಕ್ಕಿಂ, ಮಿಜೋರಾಂ, ಮಣಿಪುರ ಮತ್ತು ಮೇಘಾಲಯದಂತಹ ರಾಜ್ಯಗಳಲ್ಲಿ ಕ್ರಿಕೆಟ್‌ಗೂ ಪೈಪೋಟಿ ನೀಡುತ್ತದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರ ರಾಜ್ಯಗಳಿಂದಲೇ ದೇಶದ ಪ್ರಮುಖ ಫುಟ್ಬಾಲ್ ಪ್ರತಿಭೆಗಳು ಹೊರಹೊಮ್ಮುತ್ತಿವೆ.
ಪ್ರಧಾನಿ ಮೋದಿ ಅವರು ಸೋಮವಾರ ಪದ್ಮ ಪ್ರಶಸ್ತಿ ಪುರಸ್ಕೃತರು ಮತ್ತು ವಿವಿಧ ಕ್ಷೇತ್ರಗಳ ಹಲವಾರು ಗಣ್ಯ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ಸಭೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯ ಹಂಚಿಕೊಂಡು ವಿಶಾಲ ಶ್ರೇಣಿಯ ವಿಷಯಗಳ ಕುರಿತು ಚರ್ಚಿಸುವುದು ಅದ್ಭುತವಾಗಿದೆ ಎಂದು ಹೇಳಿದರು.
ಬಳಿಕ ಪ್ರಧಾನಿ ಮೋದಿ ಅವರು ಗ್ಯಾಂಗ್ಟಾಕ್‌ನಲ್ಲಿರುವ ಆರ್ಕಿಡೇರಿಯಂಗೆ ಭೇಟಿ ನೀಡಿದರು. ಅನಂತರ ಅವರು ಪಲ್ಜೋರ್ ಕ್ರೀಡಾಂಗಣದಲ್ಲಿ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಮೂಲಸೌಕರ್ಯ, ಸಂಪರ್ಕ, ಆರೋಗ್ಯ ರಕ್ಷಣೆ, ಶಿಕ್ಷಣ, ವಿದ್ಯುತ್, ನಗರಾಭಿವೃದ್ಧಿ, ಪರಿಸರ, ಪ್ರವಾಸೋದ್ಯಮ ಮತ್ತು ಕೃಷಿ ಮುಂತಾದ ಕ್ಷೇತ್ರಗಳನ್ನು ಒಳಗೊಂಡ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು.