ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashi Tharoor: "ನಾನು ಶಶಿ ತರೂರ್‌ ಒಂದೇ ವೇದಿಕೆಯಲ್ಲಿರುವುದನ್ನು ನೋಡಿ ಹಲವರಿಗೆ ನಿದ್ದೆ ಬರುವುದಿಲ್ಲ" ; ಕೇರಳದಲ್ಲಿ ಮೋದಿ ಹೇಳಿಕೆ

ಕೇರಳದ ವಿಝಿಂಜಂ ಅಂತಾರಾಷ್ಟ್ರೀಯ ಬಂದರು ಉದ್ಘಾಟನೆ ನೆರವೇರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಶಶಿ ತರೂರ್‌ ಅವರ ಕುರಿತು ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಹೆಸರನ್ನು ಪ್ರಸ್ತಾಪಿಸಿ, "ಶಶಿ ತರೂರ್‌ ಅವರು ನನ್ನ ಪಕ್ಕ ಕುಳಿತಿರುವುದನ್ನು ನೋಡಿ ಕೆಲವರು ನಿದ್ದೆ ಹಾರಿಹೋಗಲಿದೆ ಎಂದು ಹೇಳಿದ್ದಾರೆ.

1/5

ಕೇರಳದ ವಿಝಿಂಜಂ ಅಂತಾರಾಷ್ಟ್ರೀಯ ಬಂದರು ಉದ್ಘಾಟನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೇರಳಕ್ಕೆ ಆಗಮಿಸಿದ್ದಾರೆ. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೊಂದಿಗೆ ಪ್ರಧಾನಿ ವೇದಿಕೆಯನ್ನು ಹಂಚಿಕೊಂಡಿದ್ದಾರೆ.

2/5

ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಹೆಸರನ್ನು ಪ್ರಸ್ತಾಪಿಸಿ, "ಶಶಿ ತರೂರ್‌ ಅವರು ನನ್ನ ಪಕ್ಕ ಕುಳಿತಿರುವುದನ್ನು ನೋಡಿ ಕೆಲವರು ನಿದ್ದೆ ಹಾರಿಹೋಗಲಿದೆ ಎಂದು ಹೇಳಿದ್ದಾರೆ. ತರೂರ್‌ ನನ್ನ ಪಕ್ಕದಲ್ಲೇ ಇದ್ದರು, ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೂ ಬಂದಿದ್ದರೂ ಎಂಬುದನ್ನು ತಿಳಿದು ಕೆಲವರಿಗೆ ರಾತ್ರಿ ಇಡೀ ನಿದ್ದೆ ಬರುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ತರೂರ್‌ ಮುಗುಳ್ನಕ್ಕರು.

3/5

ಈ ಬಂದರನ್ನು ಭಾರತದ ಅತಿದೊಡ್ಡ ಬಂದರು ಅಭಿವೃದ್ಧಿ ಸಂಸ್ಥೆ ಮತ್ತು ಅದಾನಿ ಗ್ರೂಪ್‌ನ ಭಾಗವಾಗಿರುವ ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (APSEZ) ಸರ್ಕಾರಿ-ಖಾಸಗಿ ಮಾದರಿಯಡಿಯಲ್ಲಿ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಿದೆ. ಈ ಯೋಜನೆಗೆ ಸುಮಾರು 8,900 ಕೋಟಿ ರೂ. ವೆಚ್ಚವಾಗಿದ್ದು, ಯಶಸ್ವಿ ಪ್ರಾಯೋಗಿಕ ಹಂತದ ನಂತರ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಾಣಿಜ್ಯಿಕವಾಗಿ ಚಾಲನೆ ನೀಡಲಾಯಿತು.

4/5

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಿಂದ ವಿಝಿಂಜಂಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಶಶಿ ತರೂರ್‌, ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ಕೋರಿದ್ದರು. ಈ ವೇಳೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೂಡ ಉಪಸ್ಥಿತರಿದ್ದರು.

5/5

ಸಂಸದ ಶಶಿ ತರೂರ್‌ ಅವರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳುವಾಗಲೇ ಮೋದಿ ಅವರಿಂದ ಈ ಹೇಳಿಕೆ ಬಂದಿದೆ. ಈ ಹಿಂದೆ ತರೂರ್‌ ವಿದೇಶಾಂಗ ಸಚಿವ ಜೈಶಂಕರ್‌ ಅವರ ಜೊತೆ ಸೆಲ್ಫಿ ಒಂದನ್ನು ಪೋಸ್ಟ್‌ ಮಾಡಿದ್ದರು. ಅದಕ್ಕೂ ಮೋದಿ ಆಡಳಿತವನ್ನು ಹೊಗಳಿದ್ದರು. ಇದರಿಂದ ಕಾಂಗ್ರೆಸ್‌ ತರೂರ್‌ ಮೇಲೆ ಅಸಮಾಧನ ತೋರಿತ್ತು.