ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Poila Boishakh 2025: ಪಶ್ಚಿಮ ಬಂಗಾಳದ ಪೊಯಿಲಾ ಬೈಸಾಖ್ ಹೇಗಿರುತ್ತೆ? ಇಲ್ಲಿವೆ ಫೋಟೋಸ್‌

ಪೊಹೆಲಾ ಬೋಯಿಶಾಖ್, ಅಥವಾ ಪೊಯಿಲಾ ಬೈಸಾಖ್ ಅಥವಾ ನೊಬೊಬೋರ್ಷೊ ಎಂದೂ ಕರೆಯಲ್ಪಡುತ್ತದೆ, ಇದು ಬಂಗಾಳಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ . ಬಂಗಾಳಿ ಸೌರ ಕ್ಯಾಲೆಂಡರ್‌ನಲ್ಲಿ ಬೊಯಿಶಾಖ್‌ನ ಮೊದಲ ದಿನದಂದು ಆಚರಿಸಲಾಗುವ ಈ ಉತ್ಸಾಹಭರಿತ ಹಬ್ಬವನ್ನು ಬಾಂಗ್ಲಾದೇಶದಾದ್ಯಂತ ಮತ್ತು ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ.

1/5

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚರಣೆಯ ನಡುವೆ ರಾಜ್ಯದಾತ್ಯಂತ 2025 ರ ಪೊಹೆಲಾ ಬೊಯಿಶಾಖ್‌ನನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪೋಹೆಲಾ ಬೋಯಿಶಾಖ್ ಎಂದೂ ಕರೆಯಲ್ಪಡುವ ನಬ ಬರ್ಷಾ, ಬಂಗಾಳಿ ಕ್ಯಾಲೆಂಡರ್‌ನ ಮೊದಲ ದಿನವಾಗಿದೆ. "ಪೋಹೆಲಾ" ಎಂದರೆ ಮೊದಲು ಮತ್ತು ಬಂಗಾಳಿ ವರ್ಷದ ಮೊದಲ ತಿಂಗಳನ್ನು "ಬೋಯಿಶಾಖ್" ಎಂದು ಕರೆಯಲಾಗುತ್ತದೆ.

2/5

ಬಂಗಾಳಿ ಕಲ್ಯಾಣ ಸಮಿತಿಯ ಸದಸ್ಯರು ಬಂಗಾಳಿ ಹೊಸ ವರ್ಷಾಚರಣೆಗೆ ಮುಂಚಿತವಾಗಿ ಪ್ರಭಾತ್ ಫೆರಿಯಲ್ಲಿ ಭಾಗವಹಿಸಿದ್ದಾರೆ. ಜನರು ಪ್ರಾರ್ಥನೆ ಸಲ್ಲಿಸಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

3/5

ಬಂಗಾಳದ ಬೀದಿಗಳು ಇಂದು ವರ್ಣರಂಜಿತವಾಗಿದ್ದವು. ಮಹಿಳೆಯರು ಬಂಗಾಳಿ ಉಡುಗೆತೊಟ್ಟು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಬಂಗಾಳಿ ಹೊಸ ವರ್ಷವನ್ನು ಆಚರಿಸುವ ಆಚರಣೆಯ ಸಮಯದಲ್ಲಿ ಜನರು ಬೀದಿಯಲ್ಲಿ ಮೆರವಣಿಗೆ ನಡೆಸುತ್ತಿರುವಾಗ ಭದ್ರತಾ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾವಲು ಕಾದಿದ್ದಾರೆ.

4/5

ಡ್ರೈಕ್ ಪಂಚಾಂಗ್ ಪ್ರಕಾರ, ಬಂಗಾಳಿ ಯುಗವನ್ನು ಪ್ರಾಚೀನ ಬಂಗಾಳದ ರಾಜ ಶೋಶಾಂಗ್ಕೊ ಪ್ರಾರಂಭಿಸಿದನು ಎಂದು ನಂಬಲಾಗಿದೆ, ಇದು ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಸುಮಾರು 594 CE ಯಷ್ಟು ಹಿಂದಿನದು. ಈ ಶುಭ ದಿನದಂದು ಜನರು ಸಮೃದ್ಧ ಸುಗ್ಗಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ವ್ಯಾಪಾರಿಗಳು ಹೊಸ ಹಣಕಾಸು ವರ್ಷವನ್ನು ಹಾಲ್ ಖಾತಾ ಎಂದು ಕರೆಯಲ್ಪಡುವ ತಮ್ಮ ಹೊಸ ಲೆಕ್ಕಪತ್ರ ಪುಸ್ತಕಗಳನ್ನು ತೆರೆಯುವ ಮೂಲಕ ಪ್ರಾರಂಭಿಸುತ್ತಾರೆ.

5/5

ಕುಟುಂಬದೊಂದಿಗೆ ಪೊಯ್ಲಾ ಬೈಸಾಖ್ ಆಚರಿಸಲು, ಸಾಂಪ್ರದಾಯಿಕ ಬಂಗಾಳಿ ಉಡುಪನ್ನು ಧರಿಸಿ ಮತ್ತು ಆಶೀರ್ವಾದಕ್ಕಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಗುತ್ತದೆ. ಮಿಶ್ತಿ ದೋಯಿ ಮತ್ತು ರೋಶೊಗೊಲ್ಲಾದಂತಹ ಸಿಹಿ ತಿನಿಸುಗಳೊಂದಿಗೆ ಹಬ್ಬದ ಭೋಜನವನ್ನು ತಯಾರಿಸಲಾಗುತ್ತದೆ. ಕೋಲ್ಕತ್ತಾದಲ್ಲಿ, ಈ ದಿನವನ್ನು ಹೆಚ್ಚಾಗಿ ಪ್ರಮುಖ ಸ್ಥಳಗಳಲ್ಲಿ ಭವ್ಯ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ.