ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Pongal Fashion 2026: ಪೊಂಗಲ್ ಹಬ್ಬದ ಸೆಲೆಬ್ರೇಷನ್‌ಗೆ 5 ಫ್ಯಾಷನ್ ಮಂತ್ರ

ಪೊಂಗಲ್ ಹಬ್ಬದ ಸೆಲೆಬ್ರೇಷನ್ ಇದೀಗ ಕೇವಲ ಕೇರಳದ ಮಾನಿನಿಯರಿಗೆ ಸೀಮಿತವಾಗಿಲ್ಲ! ಬದಲಿಗೆ ಹಬ್ಬದ ಸೀರೆ ಉಡುವುದು ಎಲ್ಲಾ ಮಾನಿನಿಯರನ್ನು ಕೂಡ ಸೆಳೆದಿದೆ. ಇದಕ್ಕೆ ಪೂರಕ ಎಂಬಂತೆ, ಪೊಂಗಲ್ ಸೆಲೆಬ್ರೇಟ್ ಮಾಡಲು ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ಬಗೆಯ ಸೀರೆಗಳು ಕಾಲಿಟ್ಟಿವೆ. ಪೊಂಗಲ್ ಸೆಲೆಬ್ರೇಟ್ ಮಾಡುವ ಮಾನಿನಿಯರಿಗೆ 5 ಸಿಂಪಲ್ ಫ್ಯಾಷನ್ ಹಾಗೂ ಸ್ಟೈಲಿಂಗ್ ಟಿಪ್ಸನ್ನು ಸ್ಟೈಲಿಸ್ಟ್‌ಗಳು ನೀಡಿದ್ದಾರೆ. ಟ್ರೈ ಮಾಡಿ, ನೋಡಿ.

ಸಾಂದರ್ಭಿಕ ಚಿತ್ರ (ಚಿತ್ರಗಳು: ಪಿಕ್ಸೆಲ್)
1/5

ಪೊಂಗಲ್ ಹಬ್ಬದ ಸೆಲೆಬ್ರೇಷನ್ ಇದೀಗ ಕೇವಲ ಕೇರಳದ ಮಾನಿನಿಯರಿಗೆ ಸೀಮಿತವಾಗಿಲ್ಲ! ಬದಲಿಗೆ ಹಬ್ಬದ ಸೀರೆ ಉಡುವುದು ಎಲ್ಲಾ ಮಾನಿನಿಯರನ್ನು ಕೂಡ ಸೆಳೆದಿದೆ. ಇದಕ್ಕೆ ಪೂರಕ ಎಂಬಂತೆ, ಪೊಂಗಲ್ ಸೆಲೆಬ್ರೇಟ್ ಮಾಡಲು ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ಬಗೆಯ ಸೀರೆಗಳು ಕಾಲಿಟ್ಟಿವೆ. ಆಯಾ ಸೀರೆಗೆ ಹೇಗೆಲ್ಲಾ ಸ್ಟೈಲಿಂಗ್ ಮಾಡಿದಲ್ಲಿ ಪೊಂಗಲ್‌ನಲ್ಲಿ ಅಂದವಾಗಿ ಕಾಣಿಸಬಹುದು ಎಂಬುದರ ಬಗ್ಗೆ ಫ್ಯಾಷನಿಸ್ಟಾ ಜಿಯಾ ತಿಳಿಸಿದ್ದಾರೆ.

2/5

ಪೊಂಗಲ್ ಸ್ಪೆಷಲ್ ಸೀರೆ ಆಯ್ಕೆ

ಈ ಹಬ್ಬದ ಸ್ಪೆಷಲ್ ಸೀರೆಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ., ಕಸವು ಸೀರೆ. ಇಂದಿನ ಜನರೇಷನ್‌ಗೂ ಮ್ಯಾಚ್ ಆಗುವಂತಹ ನಾನಾ ಡಿಸೈನ್ಸ್‌ನಲ್ಲಿ ಲಭ್ಯವಿರುವ ಈ ಸೀರೆಯನ್ನು ಉಟ್ಟು, ಸಿಂಗರಿಸಿಕೊಳ್ಳಿ. ಕಂಪ್ಲೀಟ್ ಪೊಂಗಲ್ ಹಬ್ಬದ ಲುಕ್ ನಿಮ್ಮದಾಗುವುದು.

3/5

ಹಾಫ್ ವೈಟ್-ಕ್ರೀಮ್ ಸೀರೆ ಆಯ್ಕೆ

ನಿಮ್ಮ ಬಳಿ ಪೊಂಗಲ್‌ಗಾಗಿ ವಿಶೇಷ ಸೀರೆ ಇಲ್ಲದಿದ್ದಲ್ಲಿ, ಕಾಟನ್ ಸಿಲ್ಕ್ ಸೀರೆಗಳನ್ನು ಆಯ್ಕೆ ಮಾಡಬಹುದು. ಐವರಿ ಶೇಡ್, ಹಾಫ್ ವೈಟ್, ಕ್ರೀಮ್ ಹಾಗೂ ವೈಟ್‌ನ ಬಾರ್ಡರ್ ಸೀರೆಗಳನ್ನು ಉಡಬಹುದು.

4/5

ಸೀರೆಗೆ ಪರ್ಫೆಕ್ಟ್ ಜ್ಯುವೆಲರಿ ಧರಿಸಿ

ಪೊಂಗಲ್ ಹಬ್ಬಕ್ಕೆ ಉಡುವ ಸೀರೆಗೆ ಮ್ಯಾಚ್ ಆಗುವಂತಹ ಜ್ಯುವೆಲರಿ ಧರಿಸಿ. ಯಾಕೆಂದರೆ, ಜಂಕ್ ಹಾಗೂ ಕ್ವಿರ್ಕ್ ಜ್ಯುವೆಲರಿಗಳು ಮ್ಯಾಚ್ ಆಗುವುದಿಲ್ಲ. ಬಂಗಾರದ ಅಥವಾ ಇಮಿಟೇಷನ್ ಜ್ಯುವೆಲರಿಗಳು ಮಾತ್ರ ಟ್ರೆಡಿಷನಲ್ ಲುಕ್ ನೀಡಬಲ್ಲವು.

5/5

ಮಲ್ಲಿಗೆ ಅಲಂಕಾರ

ಪೊಂಗಲ್ ಫೆಸ್ಟಿವ್ ಸೀಸನ್‌ನಲ್ಲಿ ಸೀರೆ ಹಾಗೂ ಆಭರಣದೊಂದಿಗೆ ಕೂದಲ ವಿನ್ಯಾಸದ ಬಗ್ಗೆಯೂ ಗಮನವಹಿಸಿ. ಲೂಸಾಗಿರುವ ಯಾವುದೇ ಲೋಕಲ್ ಹೇರ್‌ಸ್ಟೈಲ್ ಮಾಡಿ. ನೀರಜಡೆ ಹಾಕಿ. ಇಲ್ಲವೇ ಲೂಸಾದ ಜಡೆ ಹಾಕಿ. ದುಂಡು ಮಲ್ಲಿಗೆ ಅಥವಾ ಇತರೇ ಯಾವುದೇ ಮಲ್ಲಿಗೆಯನ್ನು ಉದ್ದನಾಗಿ ಹಾಕಿ. ನೋಡಲು ಸಖತ್ತಾಗಿ ಕಾಣಿಸುವುದು.

ಟ್ರೆಡಿಷನಲ್ ಮೇಕಪ್

ಹಣೆಗೆ ಬಿಂದಿ, ಕಣ್ಣಿಗೆ ಕಾಡಿಗೆ, ಮಸ್ಕರಾ ಹಾಗೂ ತುಟಿಗೆ ಹೊಂದುವ ಲಿಪ್‌ಸ್ಟಿಕ್ ಲೇಪಿಸಿ. ಟ್ರೆಡಿಷನಲ್ ಮೇಕಪ್‌ಗೆ ಆದ್ಯತೆ ನೀಡಿ.

ಶೀಲಾ ಸಿ ಶೆಟ್ಟಿ

View all posts by this author