ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pooja Hegde: ಕಾಂಜೀವರಂ ಸೀರೆಯುಟ್ಟ ಮಸ್ತಾಗಿ ಪೋಸ್ ಕೊಟ್ಟ ನಟಿ ಪೂಜಾ ಹೆಗ್ಡೆ

ಬಹುಭಾಷಾ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿರುವ ಕರಾವಳಿ ಬೆಡಗಿ ನಟಿ ಪೂಜಾ ಹೆಗ್ಡೆ ತಮ್ಮ ಗ್ಲ್ಯಾಮರ್​​​​ ಲುಕ್‌ನಿಂದಲೂ‌ ಸದ್ದು ಮಾಡುತ್ತಿರುತ್ತಾರೆ. ಇದೀಗ ಅವರು ‌ರೇಷ್ಮೆ ಸೀರೆ ಧರಿಸಿ ಫೋಟೊಗಳಿಗೆ ಪೋಸ್ ನೀಡಿದ್ದಾರೆ. ನಟಿಯ ಈ ಸೊಬಗಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Pooja Hegde
1/6

ʼಮುಗಮೂಡಿ' ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ ಪೂಜಾ ಹೆಗ್ಡೆ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ನಲ್ಲೂ ನಟಿಸಿದ್ದಾರೆ. ಸದ್ಯ ನಟಿ ಕಾಂಜಿವರಂ ಸೀರೆ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು. ಇವರ ಲುಕ್‌ಗೆ ಫ್ಯಾನ್ಸ್​ ಮನ ಸೋತಿದ್ದಾರೆ.

2/6

ಪೂಜಾ ಹೆಗ್ಡೆ ಕಾಂಜೀವರಂ ಸೀರೆ ಧರಿಸಿ ಪೋಸ್ ನೀಡಿದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಗಾಢ ನೇರಳೆ ಬಣ್ಣದ ಸೀರೆಯಲ್ಲಿ ನಟಿ ಮಹಾರಾಣಿಯಂತೆ ಕಂಡಿದ್ದು ಲಕ್ಷಾಂತರ ಲೈಕ್, ಕಾಮೆಂಟ್ ಬಂದಿದೆ.

3/6

ಪೂಜಾ ಹೆಗ್ಡೆ ಹಸಿರು ಮತ್ತು ಗೋಲ್ಡ್ ಕಾಂಬಿನೇಶನ್‌ ಸೀರೆಯಲ್ಲಿಯೂ ಮಿಂಚಿದ್ದಾರೆ. ಜತೆಗೆ ಕೈಗೆ ಹಸಿರು ಪ್ಲೈನ್ ಬಳೆಗಳನ್ನು ಧರಿಸಿದ್ದು ಸೀರೆಗೆ ತಕ್ಕನಾದ ಆಭರಣ ತೊಟ್ಟು ಸಾಂಪ್ರಾದಾಯಿಕವಾಗಿ ರೆಡಿಯಾಗಿದ್ದಾರೆ.

4/6

ಜತೆಗೆ ಪೂಜಾ ಹೆಗ್ಡೆ ಆಕರ್ಷಕವಾದ ಹಳದಿ ಬಣ್ಣದ ಸೀರೆ ಉಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ. ನಟಿ ಸೀರೆಗೆ ಮ್ಯಾಚ್ ಆಗುವ ಆಭರಣ ತೊಟ್ಟು ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಅವರ ಫೋಟೊ ಇದೀಗ ಬಹಳಷ್ಟು ವೈರಲ್ ಆಗಿದೆ.

5/6

ನಾಗ ಚೈತನ್ಯ ಅಭಿನಯದ 'ಒಕಾ ಲೈಲಾ ಕೋಸಂ' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿಕೊಟ್ಟ ಪೂಜಾ ಹೆಗ್ಡೆ ನಂತರ ವರುಣ್ ತೇಜ್ ನಟಿಸಿದ 'ಮುಕುಂದ' ಚಿತ್ರದಲ್ಲೂ ಕಾಣಿಸಿಕೊಂಡರು. ಬಾಲಿವುಡ್‌ನಲ್ಲೂ ಮಿಂಚಿದ ಅವರು ಹೃತಿಕ್ ರೋಷನ್ ಜತೆ ʼಮೊಹೆಂಜೊ ದಾರೋʼ ಚಿತ್ರದಲ್ಲಿ ನಟಿಸಿದ್ದಾರೆ.

6/6

ಪ್ರಸ್ತುತ ರಜನಿಕಾಂತ್ ʼಕೂಲಿʼ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಹಿಂದಿಯ ʼಹೇ ಜವಾನಿʼ ಮತ್ತು ತಮಿಳಿನಲ್ಲಿ ದಳಪತಿ ವಿಜಯ್ ಅವರ ಕೊನೆಯ ಚಿತ್ರ ʼಜನನಾಯಕನ್ʼ, ಲಾರೆನ್ಸ್ ಅವರೊಂದಿಗೆ ʼಕಾಂಚನಾʼ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.