Pop Star Fashion 2026: ಪಾಪ್ ಸ್ಟಾರ್ ಶಕೀರಾ ಫ್ಯಾಷನ್‌ಗೆ ಜೈ ಎಂದ ಜೆನ್ ಜಿ ಫ್ಯಾನ್ಸ್!
ಪಾಪ್ ಸ್ಟಾರ್ ಶಕೀರಾ ಮಾಡಿದ್ದೇ ಫ್ಯಾಷನ್! ಈ ಬಾರಿ ಅವರು ಧರಿಸಿದ್ಧ ಫಂಕಿ ಲುಕ್ ನೀಡುವ ಕಾರ್ಸೆಟ್- ಪ್ಯಾಂಟ್ ಫ್ಯಾಷನ್‌ಗೆ ಜೆನ್ ಜಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದ್ಯಾವ ಫ್ಯಾಷನ್? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಗ್ಲಾಮರಸ್ ಫಂಕಿ ಕಾರ್ಸೆಟ್ -ಪ್ಯಾಂಟ್ ಫ್ಯಾಷನ್‌ಗೆ ಶಕೀರಾ ಸೈ ಎಂದಿದ್ದಾರೆ.
ಹೈ ಫ್ಯಾಷನ್ ಲಿಸ್ಟ್‌ಗೆ ಶಕೀರಾ ಫ್ಯಾಷನ್
ಎಲ್ಲರಿಗೂ ತಿಳಿದಿರುವಂತೆ, ಜಾಗತೀಕ ಮಟ್ಟದಲ್ಲಿ ಪಾಪ್‌ಸ್ಟಾರ್‌ಗಳ ಫ್ಯಾಷನ್ ಕ್ಲಿಕ್ ಆಗುತ್ತದೆ. ಅದರಲ್ಲೂ ಪಾಪ್ ಸ್ಟಾರ್ ಶಕೀರಾ ಮಾಡಿದ್ದೇ ಫ್ಯಾಷನ್! ಅವರು ಅದೇನೇ ಧರಿಸಲಿ, ಅದು ಹೈ ಫ್ಯಾಷನ್ ಲಿಸ್ಟ್‌ಗೆ ಸೇರುತ್ತದೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಅವರು ಧರಿಸಿದ್ಧ ಕಾರ್ಸೆಟ್ -ಪ್ಯಾಂಟ್ ಕೋ ಆರ್ಡ್ ಸೆಟ್ ಸದ್ಯ ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡುತ್ತಿದೆ. ಮಾತ್ರವಲ್ಲ, ಶಕೀರಾ ಈ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದೇ ತಡ, ಆಗಲೇ ಗ್ಲೋಬಲ್ ಹೈ ಫ್ಯಾಷನ್ ಪ್ರಿಯರ ಸ್ಟೈಲ್ ಸ್ಟೇಟ್‌ಮೆಂಟ್ ಲಿಸ್ಟ್‌ಗೆ ಸೇರಿದೆ.
ಜೆನ್ ಜಿ ಹುಡುಗಿಯರ ಕ್ರೇಝ್
ಇನ್ನು, ಶಕೀರಾ ಧರಿಸಿದ್ಧ ಫಂಕಿ ಲುಕ್ ನೀಡುವ ಕಾರ್ಸೆಟ್ - ಪ್ಯಾಂಟ್ ತಕ್ಷಣಕ್ಕೆ ನೋಡಲು ಅಂತಹ ವಿಶೇಷವೆಂದೆನಿಸದಿದ್ದರೂ ಡಿಫರೆಂಟ್ ಲುಕ್ ನೀಡಿದೆ. ಕ್ಯಾಶುವಲ್ ಲುಕ್ ನೀಡಿರುವ ಈ ಸಿಂಪಲ್ ಫ್ಯಾಷನ್‌ವೇರ್ ಆಗಲೇ ಜೆನ್ ಜಿ ಹುಡುಗಿಯರ ಕ್ರೇಝಿ ಫ್ಯಾಷನ್‌ಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಫಂಕಿ ಕಾರ್ಸೆಟ್-ಜೀನ್ಸ್ ಪ್ಯಾಂಟ್
ಪ್ರತಿಷ್ಠಿತ ಡಿಯೋರ್ ಬ್ರಾಂಡ್‌ನ ಸಿಲ್ಕ್ ಫಂಕಿ ಪ್ರಿಂಟೆಡ್ ಕಾರ್ಸೆಟ್ ಜತೆ ಪ್ಯಾಚ್ ವರ್ಕ್‌ನಂತೆ ಕಾಣಿಸುವ ಈ ಪ್ರಿಂಟೆಡ್ ಪ್ಯಾಂಟ್, ಒಟ್ನಲ್ಲಿ, ಪಾಪ್‌ಸ್ಟಾರ್ ಶಕೀರಾ ಅವರಿಗೆ ಅಲ್ಟ್ರಾ ಮಾರ್ಡನ್ ಜೆನ್ ಜಿ ಹುಡುಗಿಯಂತೆ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಶಕೀರಾ ಕ್ಯಾಶುವಲ್ ಲುಕ್
ಅಚ್ಚರಿ ಎಂಬಂತೆ, ಸದಾ ಸ್ಟೇಜ್ ಮೇಲೆ ಜಗಮಗಿಸುತ್ತಿದ್ದ ಶಕೀರಾ ಈ ಬಾರಿ ಜಸ್ಟ್ ಕ್ಯಾಶುವಲ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಹೈ ಫ್ಯಾಷನ್ ಫಾಲೋ ಮಾಡುವ ಹುಡುಗಿಯರಿಗೂ ಇಷ್ಟವಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.