ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಯುತ್ತಿದ್ದರೆ ಹೂಗ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಲಿ ರೈಡ್

ಒಂದನೇ ಹಂತದ ಮತದಾನ ಮುಗಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಯುತ್ತಿದೆ. ಒಂದನೇ ಹಂತದ ಮತದಾನ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದರ ಚಿಂತೆ ಬಿಟ್ಟು ಹೂಗ್ಲಿ ನದಿಯಲ್ಲಿ ಕೆಮರಾ ಹಿಡಿದುಕೊಂಡು ದೋಣಿ ವಿಹಾರವನ್ನು ಆನಂದಿಸಿದರು. ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಅವರು ಚಿತ್ರಗಳನ್ನು ಹಂಚಿಕೊಂಡರು.

ಸಂಗ್ರಹ ಚಿತ್ರ
1/6

ಪಶ್ಚಿಮ ಬಂಗಾಳ ವಿಧಾನ ಸಭೆಯ ಒಂದನೇ ಹಂತದ ಮತದಾನದ ಮುಗಿದ ಬಳಿಕ ಏಪ್ರಿಲ್ 29 ರಂದು ನಡೆಯುವ ಎರಡನೇ ಹಂತದ ಮತದಾನಕ್ಕೆ ಸಿದ್ಧವಾಗುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ಶುಕ್ರವಾರ ದೋಣಿ ವಿಹಾರ ನಡೆಸಿದರು.

2/6

ಪಶ್ಚಿಮ ಬಂಗಾಳದ ಮೊದಲ ಹಂತದಲ್ಲಿ ದೇಶದ ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಅತ್ಯಧಿಕ ಶೇಕಡಾ 92.88 ರಷ್ಟು ಮತದಾನವಾಗಿದೆ. ಇದಾಗಿ ಕೆಲವೇ ಗಂಟೆಗಳ ಬಳಿಕ ಪ್ರಧಾನಿ ಮೋದಿ ಕೈಯಲ್ಲಿ ಕೆಮರಾ ಹಿಡಿದು ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ಮತ್ತು ದಡದಲ್ಲಿ ಸಮಯ ಕಳೆಯುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

3/6

ಪ್ರಧಾನಿ ಮೋದಿ ಅವರು ಹಂಚಿಕೊಂಡಿರುವ ಚಿತ್ರದ ಹಿನ್ನೆಲೆಯಲ್ಲಿ ವಿದ್ಯಾಸಾಗರ್ ಸೇತುವನ್ನು ಕಾಣಬಹುದು. ಪ್ರಧಾನಿ ಮೋದಿ ಅವರು ಕೆಮರಾ ಹಿಡಿದು ಮರದ ದೋಣಿಯ ಮೇಲೆ ಕುಳಿತಿರುವುದನ್ನು ನೋಡಬಹುದು.

4/6

ಗಂಗಾ ನದಿಯ ಪಶ್ಚಿಮದ ಅತ್ಯಂತ ಉಪನದಿಯಾಗಿರುವ ಹೂಗ್ಲಿಯಲ್ಲಿ ಮಾ ಗಂಗೆಗೆ ಕೃತಜ್ಞತೆ ಸಲ್ಲಿಸಿದ ಮೋದಿ, ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿ ಜನರ ಸಮೃದ್ಧಿಗಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

5/6

ಪ್ರತಿಯೊಬ್ಬ ಬಂಗಾಳಿಯ ಹೃದಯದಲ್ಲಿ ಗಂಗೆಗೆ ಬಹಳ ವಿಶೇಷ ಸ್ಥಾನವಿದೆ. ಗಂಗಾ ನದಿಯು ಬಂಗಾಳದ ಆತ್ಮದ ಮೂಲಕ ಹರಿಯುತ್ತದೆ. ಕೋಲ್ಕತ್ತಾದಲ್ಲಿ ಹೂಗ್ಲಿ ನದಿಯ ದಡದಲ್ಲಿ ಸ್ವಲ್ಪ ಸಮಯ ಕಳೆದೆ. ಮಾತೆ ಗಂಗಾಗೆ ಕೃತಜ್ಞತೆ ಸಲ್ಲಿಸುವ ಅವಕಾಶವಿದು ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

6/6

ಪ್ರಧಾನಿ ಮೋದಿ ಅವರು ಗಂಗಾ ನದಿ ದಡದಲ್ಲಿ ಶುಕ್ರವಾರ ಬೆಳಗ್ಗೆ ನಡೆದಾಡಿ ಜನರನ್ನು ಭೇಟಿಯಾಗಿ ಸ್ವಾಗತಿಸುವ ಚಿತ್ರಗಳನ್ನು ಹಂಚಿಕೊಂಡಿರುವ ಮೋದಿ, ಈ ಸಂದರ್ಭದಲ್ಲಿ ನದಿಯ ದಡದಲ್ಲಿ ಕೆಲವು ಸ್ಥಳೀಯರು ಮತ್ತು ದೋಣಿ ವಿಹಾರಿಗಳನ್ನು ಭೇಟಿಯಾಗಿರುವುದಾಗಿ ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author