ಮೂರು ಬಾರಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ: ರಾಜಕೀಯ ಜರ್ನಿಯ ಝಲಕ್ ಇಲ್ಲಿದೆ
ಪ್ರಧಾನಿ ನರೇಂದ ಮೋದಿ ಅವರು ದೇಶದ ಅತ್ಯಂತ ದೀರ್ಘಾವಧಿ ಆಡಳಿತ ಮಾಡಿದ ಪ್ರಧಾನಿ ಎಂದು ಗುರುತಿಸಿಕೊಂಡಿದ್ದಾರೆ. ಈ ಮೂಲಕ ಅವರು ಜವಾಹರಲಾಲ್ ನೆಹರು, ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದಾರೆ. ಒಟ್ಟು ಮೂರು ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರ ವಚನ ಸ್ವೀಕಾರ ಸಮಾರಂಭದ ಒಂದು ಮೆಲುಕು ಇಲ್ಲಿದೆ.
ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿದ್ದ 4,398 ಆಡಳಿತ ದಿನಗಳ ದಾಖಲೆಯನ್ನು ಮುರಿದರು.
ಮೊದಲ ಬಾರಿಗೆ 2014ರ ಮೇ 26ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರಕ್ಕೆ ನಿರಂತರ ಅಧಿಕಾರಾವಧಿಯಲ್ಲಿ 4,399 ದಿನಗಳನ್ನು ಪೂರೈಸಿದ್ದಾರೆ.
ದೇಶದ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಈ ಐತಿಹಾಸಿಕ ಸಾಧನೆಯು ಜವಾಹರ್ ಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರ ಸುದೀರ್ಘಾವಧಿ ಆಡಳಿತ ನಡೆಸಿದ ದಾಖಲೆಯನ್ನು ಮುರಿದಿದೆ.
2014ರ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ದೆಹಲಿಯ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಅವರು ಕೆನೆ ಬಣ್ಣದ ಲಿನಿನ್ ಕುರ್ತಾ ಮತ್ತು ಪೈಜಾಮವನ್ನು ಗೋಲ್ಡನ್ ಬಣ್ಣದ ಜಾಕೆಟ್‌ನೊಂದಿಗೆ ಧರಿಸಿದ್ದರು.
ಎರಡನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2019ರ ಮೇ 30ರಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನವದೆಹಲಿಯ ರಾಷ್ಟ್ರಪತಿ ಭವನದ ಅಂಗಳದಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಅವರು ಸಾಂಪ್ರದಾಯಿಕ ಶೈಲಿಯ ಪೂರ್ಣ ತೋಳಿನ ಬಿಳಿ ಕುರ್ತಾ ಮತ್ತು ಪೈಜಾಮದೊಂದಿಗೆ ಬೂದು ಬಣ್ಣದ ಅರ್ಧ ತೋಳಿನ ನೆಹರೂ ವೇಸ್ಟ್ ಕೋಟ್ ಧರಿಸಿದ್ದರು.
ಜವಾಹರಲಾಲ್ ನೆಹರೂ ಬಳಿಕ ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 2024ರ ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನವನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಅವರು ಸಾಂಪ್ರದಾಯಿಕ ಬಿಳಿ ಕುರ್ತಾದೊಂದಿಗೆ ನೀಲಿ ಬಣ್ಣದ ಚೆಕ್ಕರ್ಡ್ ಜಾಕೆಟ್ ಅನ್ನು ಧರಿಸಿದ್ದರು.