ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyanka Chopra: ಮಗಳ ಜೊತೆ ಪ್ರಿಯಾಂಕಾ ಚೋಪ್ರಾ ಮದರ್ಸ್ ಡೇ ಸೆಲೆಬ್ರೇಶನ್; ಫೋಟೋಸ್‌ ಇಲ್ಲಿದೆ

ಮಗಳು ಮಾಲ್ಟಿ ಮೇರಿ ಜೋನಾಸ್ ಜೊತೆ ಪ್ರಿಯಾಂಕಾ ಚೋಪ್ರಾ ತಾಯಂದಿರ ದಿನವನ್ನು ಆಚರಣೆ ಮಾಡಿದ್ದಾರೆ. ನಿಕ್ ಜೋನಾಸ್ ತಾಯಿ-ಮಗಳ ಜೋಡಿಯ ಕೆಲವು ಸುಂದರ ಕ್ಷಣಗಳನ್ನು ಸೆರೆಹಿಡಿದಿದ್ದು ಈ ಪೋಟೋವನ್ನು ಸೋಷಿಯಲ್ ‌ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

1/6

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಕೆಲಸದ ನಡುವೆಯು ನಟಿ ಪ್ರಿಯಾಂಕಾ ಚೋಪ್ರಾ ಫ್ಯಾಮಿಲಿ ಜೊತೆಗೂ ಹೆಚ್ಚು ಸಮಯ ಕಳೆಯುತ್ತಾರೆ. ಸದ್ಯ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು ತಮ್ಮ ಪುತ್ರಿ ಮಾಲ್ತಿ ಮೇರಿಯ ಜೊತೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.

2/6

ನಟಿ ಸಿನಿಮಾ ಶೂಟಿಂಗ್ ನಡುವೆಯು ತನ್ನ ಮಗಳ ಜೊತೆ ಮದರ್ಸ್ ಡೇ ಆಚರಣೆ ಮಾಡಿದ್ದಾರೆ. ತಾಯಂದಿರ ದಿನದಂದು ಕುಟುಂಬದೊಂದಿಗೆ ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್ ಉದ್ಯಾನವನದಲ್ಲಿ ಸಮಯ ಕಳೆದಿದ್ದಾರೆ‌.

3/6

ಪ್ರಿಯಾಂಕಾ ಚೋಪ್ರಾ ಮತ್ತು ಮಾಲ್ತಿ ಮೇರಿ ಜೋನಾಸ್ ನಡುವಿನ ಸುಂದರ ಕ್ಷಣಗಳನ್ನುನಿಕ್ ಜೋನಾಸ್ ತಮ್ಮ ಫೋನ್‌ನಲ್ಲಿ ಸೆರೆಹಿಡಿದಿದ್ದು, ಅವರ ಸುಂದರ ಹೃದಯಸ್ಪರ್ಶಿ ಫೋಟೋ ವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಕ್ ಜೋನಾಸ್ ಈ ಪೋಸ್ಟ್‌ ನಲ್ಲಿ ತನ್ನ ಮಡದಿಗೆ ತಾಯಂದಿರ ದಿನ ಪ್ರಯುಕ್ತ ಶುಭಾಶಯ ತಿಳಿಸಿ ಉದ್ಯಾನವನದಲ್ಲಿ ತಾಯಂದಿರ ದಿನ ಆಚರಣೆ ಎಂದು ಶೀರ್ಷಿಕೆ ನೀಡಿದ್ದಾರೆ.

4/6

ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ಸುಂದರವಾದ ಸರೋವರದ ಬಳಿ ಮಗಳು ಮಾಲ್ಟಿ ಮೇರಿಯೊಂದಿಗೆ ಎಂಜಾಯ್ ಮಾಡುವ ದೃಶ್ಯ ಕಾಣಬಹುದು. ಮಗಳನ್ನು ತನ್ನ ಜೊತೆ ಕೂರಿಸಿಕೊಂಡು ಹ್ಯಾಪಿ ಮದರ್ಸ್ ಡೇ ಎಂಬ ಫಲಕ ಹಿಡಿದಿರುವ ದೃಶ್ಯ ಇದೆ. ಇನ್ನೊಂದು ಫೋಟೊ ದಲ್ಲಿ ಪ್ರಿಯಾಂಕಾ ಮತ್ತು ಮಗಳು ಮಾಲ್ತಿ ಮೇರಿ ಪಾರ್ಕ್‌ನಲ್ಲಿ ಕೈ ಕೈ ಹಿಡಿದಿರುವ ಫೋಟೋ ಇದೆ.

5/6

ಪ್ರಿಯಾಂಕಾ ಚೋಪ್ರಾ ತನ್ನ ಮಗಳನ್ನು ಆಟವಾಡಿಸುತ್ತ ಸುಂದರ ಸಮಯ ಕಳೆದಿದ್ದಾರೆ. ಪಾರ್ಕ್ ಪಿಕ್ನಿಕ್ ಸೆಟ್ ಅಪ್ ವಿಶೇಷವಾಗಿ ಗಮನ ಸೆಳೆದಿದ್ದು, ಹೂವುಗಳ ಆಲಂಕಾರ ದೊಂದಿಗೆ ಸುಂದರ ಡೈನಿಂಗ್ ಅರೆಂಜ್‌ ಮೆಂಟ್‌ಗಳ ದೃಶ್ಯ ಇದೆ. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರೊಬ್ಬರು ಇದು ಸುಂದರ ಸಮಯ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ಮಗಳು ನಿಮ್ಮಂತೆ ಮುದ್ದಾಗಿದ್ದಾಳೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

6/6

ಪ್ರಿಯಾಂಕಾ ಮತ್ತು ನಿಕ್ 2018 ರಲ್ಲಿ ವೈವಾಹಿಕ ಜೀವನ ಆರಂಭಿಸಿದ್ದು ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ ಈ ಜೋಡಿ ಮದುವೆಯಾಗಿತ್ತು.ಇತ್ತೀಚಿಗಷ್ಟೇ ಪ್ರಿಯಾಂಕಾ ಚೋಪ್ರಾ ನಟಿಸಿದ 'ಸಿಟಾಡೆಲ್' ಸೀರಿಸ್ ಹಿಟ್ ಆಗಿ ಪ್ರಿಯಾಂಕಾ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ರಾಜಮೌಳಿ ನಿರ್ದೇಶನದ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.