ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyanka Chopra: ಪ್ರಿಯಾಂಕಾ ಚೋಪ್ರಾ ಸ್ಟೈಲಿಶ್ ಲುಕ್‌ಗೆ ಫ್ಯಾನ್ಸ್ ಫುಲ್ ಫಿದಾ! ಇಲ್ಲಿದೆ ಫೋಟೊಸ್‌

ಮಿಸ್ ವರ್ಲ್ಡ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ ವೈಯಕ್ತಿಕ ವಿಚಾರದಲ್ಲಿಯೂ ಆಗಾಗ ಸುದ್ದಿಯಲ್ಲಿರುತ್ತಾರೆ. ಫ್ಯಾಷನ್ ಸೆನ್ಸ್ ಮೂಲಕವು ಜನಪ್ರಿಯರಾಗಿರುವ ಪ್ರಿಯಾಂಕಾ ಚೋಪ್ರಾ ವೃತ್ತಿಪರ ಕಾರ್ಯಕ್ರಮಗಳ ನಿಮಿತ್ತ ಮುಂಬೈಗೆ ಆಗಮಿಸಿದ್ದು, ಹೊಸ ಗೋಲ್ಡ್ ಮಳಿಗೆಯನ್ನು ಉದ್ಘಾಟಿಸಿದ್ದಾರೆ. ಈ ವೇಳೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Priyanka Chopra
1/5

ಪ್ರಿಯಾಂಕಾ ಚೋಪ್ರಾ ಮುಂಬೈನಲ್ಲಿ‌ಗೋಲ್ಡ್ ಮಳಿಗೆಯನ್ನು ಉದ್ಘಾಟಿಸಲು ಹಾಜರಾಗಿದ್ದು, ಡಿಫರೆಂಟ್‌ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕಾಗಿ ಸ್ಟೈಲಿಶ್ ಬ್ರೌನ್ ಬಣ್ಣದ ಆಫ್-ಶೋಲ್ಡರ್ ಡ್ರೆಸ್‌ ಧರಿಸಿದ್ದರು.

2/5

ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು ಫ್ಯಾನ್ಸ್ ಲೈಕ್, ಕಾಮೆಂಟ್ ನೀಡುತ್ತಿದ್ದಾರೆ. ಅವರು ಬಲ್ಗರಿ ಬ್ರ್ಯಾಂಡ್‌ನಿಂದ ಆಕರ್ಷಕವಾದ ಆಭರಣಗಳನ್ನು ಧರಿಸಿ, ತಮ್ಮ ಉಡುಪಿಗೆ ಹೊಸ ಮೆರುಗು ನೀಡಿದರು.

3/5

ತಮ್ಮ ಪರಿಪೂರ್ಣ ನೋಟಕ್ಕೆ ಹೊಂದಿಕೆಯಾಗುವಂತೆ, ಸ್ಟೈಲಿಶ್ ಬ್ಲ್ಯಾಕ್ ಸ್ಯಾಂಡಲ್‌‌ ಆರಿಸಿಕೊಂಡಿದ್ದು ಬಹಳ ವಿಭಿನ್ನವಾಗಿ ಕಂಡಿದ್ದಾರೆ.

4/5

ಪ್ರಿಯಾಂಕಾ ಈ ಲುಕ್‌ಗೆ ಫ್ರೀ ಹೇರ್ ಸ್ಟೈಲ್ ಮಾಡಿದ್ದು ನ್ಯೂಡ್ ಮೇಕಪ್‌ ಅನ್ನು ಆಯ್ಕೆ ಮಾಡಿಕೊಂಡು, ಸಿಂಪಲ್ ಮೇಕಪ್‌ನೊಂದಿಗೆ ಗಮನ ಸೆಳೆದರು.

5/5

ಹಾಲಿವುಡ್ ಜತೆಗೆ ಬಾಲಿವುಡ್‌ನ ಸಿನಿಮಾದಲ್ಲೂ ಪ್ರಿಯಾಂಕಾ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂಬರುವ ಚಿತ್ರದಲ್ಲಿ ಪ್ರಿಯಾಂಕ ಚೊಪ್ರಾ ಅಭಿನಯಿಸಲಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದಿರುವ ʼಎಸ್ಎಸ್ಎಂಬಿ 29ʼ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ.