Radhika Pandit: ಟ್ರೆಡಿಶನಲ್ ಲುಕ್‌ನಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್; ಇಲ್ಲಿದೆ ಫೋಟೋಸ್!
Radhika Pandit Saree Look: ಮೊಗ್ಗಿನ ಮನಸ್ಸು, ಅದ್ದೂರಿ, ದೊಡ್ಮನೆ ಹುಡುಗ, ರಾಮಾಚಾರಿ ಇತ್ಯಾದಿ ಸಿನಿಮಾ ಮೂಲಕ ಖ್ಯಾತಿ ಪಡೆದ ಸ್ಯಾಂಡಲ್ ವುಡ್ ಫೇಮಸ್ ನಟಿ ರಾಧಿಕಾ ಪಂಡಿತ್ ಅವರಿಗೆ ದೊಡ್ಡ ಮಟ್ಟಿಗೆ ಫ್ಯಾನ್ಸ್ ಬಳಗ ಇದೆ. ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಇವರು ತಮ್ಮ ಮಕ್ಕಳ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ.ಈ ಬಾರಿ ಕೂಡ ರಾಧಿಕಾ ಅವರು ತಮ್ಮ ನಾದಿನಿ ನಂದಿನಿ ಜೊತೆಗೆ ಕಾರ್ಯ ಕ್ರಮ ಒಂದರಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದು ಸದ್ಯ ಅವರ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ತಂಗಿ ನಂದಿನಿ ಜೊತೆಗೆ ನಟಿ ರಾಧಿಕಾ ಪಂಡಿತ್ ಅವರು ಫ್ಯಾಮಿಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮ ಯಾವುದು ಎಂಬ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಹಾಗಿದ್ದರೂ ನಂದಿನಿ ಅವರ ಮಕ್ಕಳ ಬರ್ತಡೆ ಪಾರ್ಟಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಕುಟುಂಬವು ಪಾಲ್ಗೊಂಡಿದ್ದು ಅವರ ಫೋಟೊ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.
ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ರಾಧಿಕಾ ಪಂಡಿತ್ ಅವರು ಪಿಂಕ್ ಕಲರ್ ಸೀರೆ ಉಟ್ಟು ಟ್ರೆಡಿಶನಲ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ. ಆ್ಯಂಟಿಕ್ ಆಭರಣದಲ್ಲಿ ಸಿಂಪಲ್ ಮೇಕಪ್ ಜೊತೆ ಫ್ರೀ ಹೇರ್ ಸ್ಟೈಲ್ ನಲ್ಲಿ ನಟಿ ರಾಧಿಕಾ ಪಂಡಿತ್ ಅವರು ಗಮನ ಸೆಳೆದಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರ ಇನ್ನೊಂದು ಫೋಟೊದಲ್ಲಿ ಅವರು ಸ್ವಿಮ್ಮಿಂಗ್ ಪುಲ್ ಸೈಡ್ ನಲ್ಲಿ ನಿಂತು ಫೋಟೊಗೆ ಪೋಸ್ ನೀಡಿದ್ದಾರೆ. ಇವರ ಸೀರೆಯಲ್ಲಿ ಪಿಂಕ್ ಕಲರ್ ವಿಭಿನ್ನವಾದ ಶೇಡ್ಸ್ ಗಳಿದ್ದು ಅದಕ್ಕೆ ಗೋಲ್ಡನ್ ಕಲರ್ ಬಾರ್ಡರ್ ನೀಡಲಾಗಿದೆ. ಈ ಮೂಲಕ ಇವರು ತೊಟ್ಟಿದ್ದ ಸೀರೆ ಕೂಡ ಈಗ ಟ್ರೆಂಡ್ ನಲ್ಲಿದೆ.
ಸ್ವಿಮ್ಮಿಂಗ್ ಪೂಲ್ ಹತ್ತಿರ ಪಿಂಕ್ ಸೀರೆಯಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ನಟಿ ರಾಧಿಕಾ ಪಂಡಿತ್ ಪೋಸ್ ನೀಡಿದ್ದಾರೆ. ಅವರ ಕಿವಿಯೋಲೆ, ಬ್ಯಾಂಗಲ್ , ಉಂಗುರ ಎಲ್ಲವೂ ಅವರ ಅಂದಕ್ಕೆ ಮತ್ತಷ್ಟು ಮೆರುಗು ನೀಡಿದಂತಿದೆ. ಫ್ರೀ ಹೇರ್ ಸ್ಟೈಲ್ ನಲ್ಲಿ ಸೈಡ್ ಆ್ಯಂಗಲ್‌ನಲ್ಲಿ ಈ ಫೋಟೋ ಅತೀ ಹೆಚ್ಚು ಅಭಿಮಾನಿಗಳ ಮನ ಸೆಳೆದಿದೆ.
ಇವರ ಫೋಟೋ ಕಂಡು ಫ್ಯಾನ್ಸ್ ತರತರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಯಶ್ ಭಾಯ್ ಪತ್ನಿ ಅಂದ್ರೆ ಸುಮ್ನೆನಾ... ನಮ್ಮ ಅತ್ತಿಗೆ ನಿಜಕ್ಕೂ ಗ್ರೇಟ್, ಎಷ್ಟು ಚೆಂದ ಇವರು... ದೃಷ್ಟಿ ತೆಗೀರಿ ಎಂದು ಬಳಕೆದಾರರೊಬ್ಬರು ಕಾಮೆಂಟ್ ಹಾಕಿದ್ದಾರೆ. ಈ ಮೂಲಕ ನಟಿ ರಾಧಿಕಾ ಪಂಡಿತ್ ಮತ್ತೆ ಸಿನಿಮಾ ರಂಗಕ್ಕೆ ಬಂದು ಮಿಂಚಬೇಕು ಎಂಬುದು ಅಭಿಮಾನಿಗಳ ಮನದಾಸೆಯಾಗಿದೆ.