IPL 2025: ಚೆನ್ನೈ ಸೂಪರ್ ಕಿಂಗ್ಸ್ನಿಂದ ಬಿಡುಗಡೆಯಾಗಲಿರುವ ಟಾಪ್ 5 ಆಟಗಾರರು!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀರಸ ಪ್ರದರ್ಶನ ತೋರಿದೆ. ಇಲ್ಲಿತನಕ ಆಡಿದ 13 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ 10 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ನಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಮಂಗಳವಾರ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು.



ಸಿಎಸ್ಕೆಯಿಂದ ಹೊರ ಬೀಳಲಿರುವ ಅಗ್ರ 5 ಆಟಗಾರರು
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯಂತ ಹೀನಾಯ ಪ್ರದರ್ಶನವನ್ನು ತೋರಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಅಂದ ಹಾಗೆ ಈ ಐಪಿಎಲ್ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದ ಅಗ್ರ ಐವರು ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಕೈ ಬಿಡುವ ಸಾಧ್ಯತೆ ಇದೆ.

1 .ರಾಹುಲ್ ತ್ರಿಪಾಠಿ
ಚೆನ್ನೈ ಸೂಪರ್ ಕಿಂಗ್ಸ್ ಮೆಗಾ ಹರಾಜಿನಲ್ಲಿ ರಾಹುಲ್ ತ್ರಿಪಾಠಿ ಅವರನ್ನು 3.40 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಅವರು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಈ ಋತುವಿನಲ್ಲಿ ಅವರು ಚೆನ್ನೈ ಪರ 55 ರನ್ಗಳನ್ನು ಮಾತ್ರ ಗಳಿಸಿದ್ದಾರೆ. ನಂತರ ಅವರನ್ನು ಪ್ಲೇಯಿಂಗ್ xiನಿಂದ ಕೈಬಿಡಲಾಯಿತು. ಅಂದ ಹಾಗೆ ಇವರನ್ನು 2026ರ ಐಪಿಎಲ್ ನಿಮಿತ್ತ ಅವರನ್ನು ಕೈ ಬಿಡಲಾಗುವುದು.

2 ಆರ್ ಅಶ್ವಿನ್
ಈ ಋತುವಿನಲ್ಲಿ ರವಿಚಂದ್ರನ್ ಅಶ್ವಿನ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ, ಅನುಭವಿ ಆಟಗಾರ 10ರ ಎಕಾನಮಿ ರೇಟ್ನಲ್ಲಿ ಕೇವಲ ಐದು ವಿಕೆಟ್ಗಳನ್ನು ಮಾತ್ರ ಪಡೆದರು. ಮೆಗಾ ಹರಾಜಿನಲ್ಲಿ ಇವರನ್ನು 9.75 ಕೋಟಿ ರೂ.ಗೆ ಖರೀದಿಸಲಾಗಿತ್ತು. ಮುಂದಿನ ಋತುವಿನಲ್ಲಿ ನೂರ್ ಅಹ್ಮದ್ ಮತ್ತು ರವೀಂದ್ರ ಜಡೇಜಾ ಅವರನ್ನು ಉಳಿಸಿಕೊಂಡು ಅಶ್ವಿನ್ರನ್ನು ಕೈ ಬಿಡುವ ಸಾಧ್ಯತೆ ಇದೆ.

3. ವಿಜಯ್ ಶಂಕರ್
ವಿಜಯ್ ಶಂಕರ್ ಅವರನ್ನು ಚೆನ್ನೈ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ 1.2 ಕೋಟಿ ರೂ.ಗೆ ಖರೀದಿಸಿತು. ಆರಂಭದಲ್ಲಿ ಅವರು ಆಡುವ XI ತಂಡದ ಭಾಗವಾಗಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನದ ನಂತರ ಅವರಿಗೆ ಅವಕಾಶ ಸಿಕ್ಕಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕದ ಹೊರತಾಗಿಯೂ ಸ್ಥಿರ ಪ್ರದರ್ಶನ ತೋರುವಲ್ಲಿ ಅವರು ವಿಫಲರಾಗಿದ್ದರು.

4. ಡವೋನ್ ಕಾನ್ವೇ
ನ್ಯೂಜಿಲೆಂಡ್ ಆಟಗಾರ ಡೆವೊನ್ ಕಾನ್ವೇ 2023ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು 16 ಪಂದ್ಯಗಳಲ್ಲಿ 672 ರನ್ ಗಳಿಸಿದ್ದರು. ಚೆನ್ನೈ ತಂಡ ಟ್ರೋಫಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಗಾಯದಿಂದಾಗಿ ಅವರು 2024ರ ಟೂರ್ನಿಯನ್ನು ಮುಗಿಸಲು ಸಾಧ್ಯವಾಗಲಿಲ್ಲ. ಆದರೂ, ಚೆನ್ನೈ ಮತ್ತೊಮ್ಮೆ ಅವರ ಮೇಲೆ ನಂಬಿಕೆ ಇರಿಸಿ 6.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ, ಈ ಋತುವಿನಲ್ಲಿ ಅವರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

5.ದೀಪಕ್ ಹೂಡಾ
2025ರ ಐಪಿಎಲ್ ಟೂರ್ನಿಯಲ್ಲಿ ದೀಪಕ್ ಹೂಡ ಐದು ಪಂದ್ಯಗಳಲ್ಲಿ 31 ರನ್ ಗಳಿಸಿದ್ದರು. 30ರ ವಯಸ್ಸಿನ ಹೂಡಾ ಅವರನ್ನು 1.70 ಕೋಟಿ ರೂ.ಗೆ ಖರೀದಿಸಲಾಗಿತ್ತು. ಅವರನ್ನು ತಕ್ಷಣವೇ ಆಡುವ XI ಗೆ ಸೇರಿಸಲಾಯಿತು. ಆದರೆ ಅವರಿಂದ ನಿರೀಕ್ಷೆಗೆ ತಕ್ಕ ಆಟ ಮೂಡಿ ಬರಲಿಲ್ಲ. ಹಾಗಾಗಿ ಅವರನ್ನು ಮುಂದಿನ ಆವೃತ್ತಿಗೆ ಕೈ ಬಿಡಬಹುದು.