Rakshabandhan Shopping 2025: ವೀಕೆಂಡ್‌ನಲ್ಲೇ ಆರಂಭವಾಯ್ತು ರಕ್ಷಾ ಬಂಧನದ ಶಾಪಿಂಗ್!
Rakshabandhan Shopping 2025: ವೀಕೆಂಡ್‌ನಲ್ಲೆ ರಕ್ಷಾ ಬಂಧನ ಹಬ್ಬದ ಶಾಪಿಂಗ್ ಆರಂಭಗೊಂಡಿದೆ. ಇದಕ್ಕೆ ಪೂರಕ ಎಂಬಂತೆ ಮಾರುಕಟ್ಟೆಗಳಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್ ರಾಖಿಗಳು ಬಿಡುಗಡೆಗೊಂಡಿವೆ. ಈ ಬಾರಿ ಯಾವ್ಯಾವ ಬಗೆಯ ರಾಖಿಗಳು ಬಂದಿವೆ? ಮಾರಾಟಗಾರರು ಏನು ಹೇಳುತ್ತಾರೆ? ಇಲ್ಲಿದೆ ವರದಿ.
ವೀಕೆಂಡ್‌ನಲ್ಲಿ ರಕ್ಷಾ ಬಂಧನದ ಶಾಪಿಂಗ್ ಆರಂಭಗೊಂಡಿದೆ. ಮಾರುಕಟ್ಟೆಯಲ್ಲಿ ವೈವಿಧ್ಯಮಯ ರಾಖಿಗಳು ಲಗ್ಗೆ ಇಟ್ಟಿವೆ.
ವೈವಿಧ್ಯಮಯ ರಾಖಿಗಳ ಆಗಮನ
ರಾಖಿ ಹಬ್ಬಕ್ಕೆ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಬಗೆಯ ರಾಖಿಗಳು ಹಳೆಯ ಡಿಸೈನ್‌ನ ರಾಖಿಗಳೊಂದಿಗೆ ಸೇರಿಕೊಳ್ಳುತ್ತಿವೆ. ಆಯಾ ಸಾಲಿನ ಟ್ರೆಂಡ್ ಹಾಗೂ ಹುಡುಗರ ಮನೋಭಿಲಾಷೆಗೆ ಹೊಂದುವಂತೆ ಹೊಸ ಹೊಸ ಡಿಸೈನ್‌ನ ರಾಖಿಗಳು ಬಂದಿವೆ. ಕೇವಲ 5 ರೂ.ಗಳಿಂದ ಆರಂಭವಾಗಿ 5 ಸಾವಿರ ರೂ. ಗಳವರೆಗಿನ ರಾಖಿಗಳು ಬಂದಿವೆ. ಅಷ್ಟೇಕೆ? ಸಿಂಪಲ್ ಡಿಸೈನ್‌ನಿಂದಿಡಿದು ಬೆಳ್ಳಿ-ಬಂಗಾರದ ಲೇಪನವಿರುವಂತಹ ವಿಶೇಷ ರಾಖಿಗಳು ಎಕ್ಸ್‌ಕ್ಲೂಸೀವ್ ಡಿಸೈನ್‌ಗಳಲ್ಲೂ ಆಗಮಿಸಿವೆ ಎನ್ನುತ್ತಾರೆ ಮಲ್ಲೇಶ್ವರದ ಶಾಪ್‌ವೊಂದರ ಮಾಲೀಕರು.
ವೆರೈಟಿ ರಾಖಿಗಳ ಮಾರಾಟ
ಈ ಬಾರಿ ಫಂಕಿ ರಾಖಿಗಳು ಅತಿ ಹೆಚ್ಚಾಗಿ ಸೇಲ್ ಆಗುತ್ತಿವೆಯಂತೆ. ಟ್ರೆಡಿಷನಲ್ ರಾಖಿಗಳನ್ನು ಕೇವಲ ಹಿರಿಯರು ಹೆಚ್ಚಾಗಿ ಕೊಳ್ಳುತ್ತಿದ್ದಾರಂತೆ. ಇನ್ನು, ಬ್ರೇಸ್ಲೆಟ್ ಶೈಲಿಯ ರಾಖಿಗಳು ಕೂಡ ಹಂಗಾಮ ಎಬ್ಬಿಸಿವೆಯಂತೆ. ಕಾಲೇಜು ಹುಡುಗರು ಈ ರೀತಿಯ ರಾಖಿ ಇಷ್ಟಪಡಲಾರಂಭಿಸಿದ್ದು, ಇದನ್ನು ಕೊಳ್ಳುವವರು ಜಾಸ್ತಿಯಾಗಿದ್ದಾರಂತೆ. ಕಾರ್ಪೋರೇಟ್ ಕ್ಷೇತ್ರದಲ್ಲಿನ ಪುರುಷರಿಗಾಗಿಯೇ ಡಿಸೆಂಟ್ ಲುಕ್ ನೀಡುವ ಸಿಂಪಲ್ ರಾಖಿಗಳು ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆಯಂತೆ. ಬೆಳ್ಳಿ-ಬಂಗಾರ ಇಷ್ಟಪಡುವ ಹುಡುಗರಿಗೆಂದು ಜ್ಯುವೆಲರಿ ಶಾಪ್‌ಗಳಲ್ಲಿ ಆಕರ್ಷಕ ಸಿಲ್ವರ್-ಗೋಲ್ಡ್ ರಾಖಿಗಳು ಆಭರಣ ಅಂಗಡಿಗಳಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ರಾಖಿ ಡಿಸೈನರ್ಸ್
ಹೋಮ್ ಡಿಲಿವರಿ ಮಾಡುವ ಆನ್‌ಲೈನ್ ಶಾಪ್
ಆನ್‌ಲೈನ್ ಶಾಪ್‌ಗಳಲ್ಲಂತೂ ಊಹೆಗೂ ಮೀರಿದ ಟ್ರೆಂಡಿ ರಾಖಿಗಳು ಬಿಡುಗಡೆಗೊಂಡಿವೆ. ದೂರ ಊರಿನಲ್ಲಿರುವ ಅಣ್ಣ-ತಮ್ಮಂದಿರಿಗೆ ನೇರವಾಗಿ ಮನೆಗೆ ಡಿಲಿವೆರಿ ಮಾಡಬಹುದಾದ ಸೌಲಭ್ಯವನ್ನು ಸಾಕಷ್ಟು ಆನ್‌ಲೈನ್ ವೆಬ್‌ಸೈಟ್‌ಗಳು ಕಲ್ಪಿಸಿವೆ.
- ಚಿನ್ನ-ಬೆಳ್ಳಿಯ ರಾಖಿಗಳನ್ನು ಜ್ಯುವೆಲರಿ ಶಾಪ್‌ನಲ್ಲೆ ಕೊಳ್ಳಿ.
- ಬಣ್ಣ ಬಣ್ಣದ ರಾಖಿಗಳಿಗಿಂತ ಇಕೋ ಫ್ರೆಂಡ್ಲಿಯವನ್ನು ಆಯ್ಕೆ ಮಾಡಿ.
- ಕಾಲೇಜು ಹುಡುಗರಿಗೆ ಫಂಕಿ ಬ್ರೇಸ್ಲೆಟ್ ರಾಖಿ ಆಯ್ಕೆ ಉತ್ತಮ.