Ramzan Fashion 2026: ರಂಜಾನ್ ವೇಳೆ ಟ್ರೆಂಡಿಯಾಗಿರುವ ಸಲ್ವಾರ್ ಸೂಟ್ಸ್
ರಂಜಾನ್ ಹಬ್ಬದ ಸಂಭ್ರಮದಲ್ಲಿ ನಾನಾ ವಿನ್ಯಾಸದ ಸಲ್ವಾರ್ ಸೂಟ್‌ಗಳು ಟ್ರೆಂಡಿಯಾಗಿವೆ. ನೋಡಲು ಆಕರ್ಷಕ ವಿನ್ಯಾಸದೊಂದಿಗೆ ಟ್ರೆಂಡಿ ಕಲರ್‌ನಲ್ಲಿ ಕಾಲಿಟ್ಟಿವೆ. ಅವುಗಳಲ್ಲಿ ಕೆಲವು ಹೆಚ್ಚು ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ರಂಜಾನ್ ಹಬ್ಬದ ಸಂಭ್ರಮಕ್ಕೆ ಲೆಕ್ಕವಿಲ್ಲದಷ್ಟು ಬಗೆಯ ಗ್ರ್ಯಾಂಡ್ ಸಲ್ವಾರ್ ಸೂಟ್ಸ್ ಆಗಮಿಸಿವೆ. ನೋಡಲು ಆಕರ್ಷಕ ವಿನ್ಯಾಸದೊಂದಿಗೆ ಟ್ರೆಂಡಿ ಕಲರ್‌ನಲ್ಲಿ ಕಾಲಿಟ್ಟಿವೆ. ಅವುಗಳಲ್ಲಿ ಕೆಲವು ಹೆಚ್ಚು ಟ್ರೆಂಡಿಯಾಗಿವೆ.
ಜಗಮಗಿಸುವ ಸಿಕ್ವೀನ್ಸ್ ಸಲ್ವಾರ್ ಸೂಟ್
ಇಡೀ ಡ್ರೆಸ್ ಒಂದೇ ಶೇಡ್‌ನಲ್ಲಿ ಇರುವಂತವು, ಸೆಲ್ಫ್ ಡಿಸೈನ್‌ನ ಸಿಕ್ವೀನ್ಸ್ ಸಲ್ವಾರ್ ಸೂಟ್ಸ್ ಈ ರಂಜಾನ್ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿವೆ. ಗೋಲ್ಡನ್, ಸಿಲ್ವರ್, ಡಾರ್ಕ್ ಕಲರ್ಸ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ಶಿಮ್ಮರ್ ಸಲ್ವಾರ್ ಸೂಟ್
ರಂಜಾನ್ ಹಬ್ಬದ ಸಂಭ್ರಮದ ಕಳೆ ಹೆಚ್ಚಿಸುವಲ್ಲಿ ಶಿಮ್ಮರ್ ಫ್ಯಾಬ್ರಿಕ್‌ನ ಸಲ್ವಾರ್ ಸೂಟ್‌ಗಳು ಪ್ರಮುಖ ಪಾತ್ರವಹಿಸಿವೆ. ಇವು ನಾನಾ ಡಿಸೈನ್ಗಳಲ್ಲಿ ಬಿಡುಗಡೆಗೊಂಡಿವೆ. ಧರಿಸಿದವರು, ಮಿನುಗುತ್ತಿದ್ದಾರೆ.
ಗ್ರ್ಯಾಂಡ್ ಬಾರ್ಡರ್ ಸಲ್ವಾರ್ ಸೂಟ್
ಸಲ್ವಾರ್ ಸೂಟ್‌ಗಳಲ್ಲಿ ಇದೀಗ ಗ್ರ್ಯಾಂಡ್ ಬಾರ್ಡರ್‌ನವು ಹೆಚ್ಚು ಮಾರಾಟವಾಗುತ್ತಿವೆ. ಚಿಕ್ಕ ಕ್ರಿಸ್ಟಲ್ ಬಾರ್ಡರ್‌ನಿಂದಿಡಿದು, ದೊಡ್ಡ ಅಟ್ಯಾಚ್ ಮಾಡಿರುವಂತಹ ಬಾರ್ಡರ್‌ನ ಸಲ್ವಾರ್‌ಗಳು ಈ ಬಾರಿ ಹುಡುಗಿಯರನ್ನೂ ಸವಾರಿ ಮಾಡತೊಡಗಿವೆ. ಅದರಲ್ಲೂ ಕಟೌಟ್ ಬಾರ್ಡರ್‌ನಂತವು ಯುವತಿಯರನ್ನು ಆಕರ್ಷಿಸಿದರೇ, ಎಂಬ್ರಾಯ್ಡರಿ ಇರುವಂತಹ ಗೋಲ್ಡನ್ ಹಾಗೂ ಸಿಲ್ವರ್ ಬೀಡ್ಸ್‌ನ ಬಾರ್ಡರ್ ಸಲ್ವಾರ್ ಸೂಟ್‌ಗಳು ಮಾನಿನಿಯರನ್ನು ಸಿಂಗರಿಸಿವೆ.
ಕಾಂಟ್ರಾಸ್ಟ್ ಶೇಡ್ ಸಲ್ವಾರ್ ಸೂಟ್
ಟಾಪ್ ಒಂದು ಕಲರ್‌ನದ್ದು, ಬಾಟಮ್ ಮತ್ತೊಂದು ಕಲರ್ ಇವುಗಳಿಗೆ ಮ್ಯಾಚ್ ಆಗುವ ಮಿಕ್ಸ್ ಮ್ಯಾಚ್ ಕಲರ್‌ನ ದುಪಟ್ಟಾ ಹೀಗೆ ನಾನಾ ಬಗೆಯ ಕಾಂಟ್ರಾಸ್ಟ್ ಶೇಡ್‌ನ ಸಲ್ವಾರ್ ಸೂಟ್‌ಗಳು ಡಿಸೇಂಟ್ ಲುಕ್ ಬಯಸುವ ಮಹಿಳೆಯರನ್ನು ಅಲಂಕರಿಸಿವೆ.
ತ್ರೀ ಪೀಸ್ ಕೋ ಆರ್ಡ್ ಸಲ್ವಾರ್ ಸೂಟ್ಸ್
ಈ ಶೈಲಿಯ ಸಲ್ವಾರ್ ಸೂಟ್‌ಗಳು ಟೀನೇಜ್ ಹಾಗೂ ಯುವತಿಯರನ್ನು ಸಿಂಗರಿಸುತ್ತಿವೆ. ಕೋ ಆರ್ಡ್ ಸೆಟ್‌ನಂತೆ ಕಾಣುವ ಇವು ಕೊಂಚ ಮಾಡರ್ನ್ ಶೈಲಿಯಲ್ಲೂ ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ನಗ್ಮಾ.