ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika Mandanna: ನ್ಯಾಷನಲ್‌ ಕ್ರಶ್‌ ಈಗ ವಿಲನ್‌; ಅಲ್ಲು-ಅಟ್ಲಿ-ದೀಪಿಕಾ ಚಿತ್ರದಲ್ಲಿ ರಶ್ಮಿಕಾಗೆ ನೆಗೆಟಿವ್‌ ರೋಲ್‌?

ಬಾಲಿವುಡ್‌ನಲ್ಲೂ ಛಾಪು ಮೂಡಿಸಿರುವ ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಅಟ್ಲಿ ಇದೀಗ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಸದ್ಯ ʼಪುಷ್ಪ 2ʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್‌ ಜತೆ ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಈ ಸಿನಿಮಾದ ಚಟುವಟಿಕೆ ಈಗಾಗಲೇ ಆರಂಭವಾಗಿದ್ದು, ಸನ್‌ ಪಿಕ್ಚರ್ಸ್‌ ಬರೋಬ್ಬರಿ 800 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಿದೆ. ನಾಯಕಿಯಾಗಿ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ಅವರು ಅಲ್ಲು ಅರ್ಜುನ್‌ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಜತೆಗೆ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ.

1/6

ಯಶಸ್ವಿ ಜೋಡಿ

ʼಪುಷ್ಪʼ ಮತ್ತು ʼಪುಷ್ಪ 2ʼ ಚಿತ್ರದ ಮೂಲಕ ಈಗಾಗಲೇ ಅಲ್ಲು ಅರ್ಜುನ್‌-ರಶ್ಮಿಕಾ ಜೋಡಿ ಗಮನ ಸೆಳೆದಿದೆ. ಈ ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವುದರಿಂದ ಈ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಇವರನ್ನು ತೆರೆಮೇಲೆ ತರಲು ನಿರ್ದೇಶಕ ಅಟ್ಲಿ ಮುಂದಾಗಿದ್ದಾರೆ. ಪುಷ್ಪರಾಜ್‌-ಶ್ರೀವಲ್ಲಿಯಾಗಿ ರಂಜಿಸಿದ್ದ ಇವರು ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

2/6

ವಿಲನ್‌ ಪಾತ್ರದಲ್ಲಿ ರಶ್ಮಿಕಾ?

ಮತ್ತೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯ ಬದಲು ವಿಲನ್‌ ಪಾತ್ರದಲ್ಲಿ ನಟಿಸಲಿದ್ದಾರಂತೆ. ಖಳನಾಯಕಿ ಪಾತ್ರಕ್ಕಾಗಿ ರಶ್ಮಿಕಾ ಅವರನ್ನು ಸಂಪರ್ಕಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಈ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇದೆ ಎನ್ನಲಾಗುತ್ತಿದೆ.

3/6

ಮೊದಲ ಬಾರಿಗೆ ವಿಲನ್‌ ಆಗಲಿದ್ದಾರೆ ರಶ್ಮಿಕಾ

ರಶ್ಮಿಕಾ ಇದುವವರೆಗೆ ವಿವಿಧ ಭಾಷೆಗಳಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳಲ್ಲೆಲ್ಲ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ವಿಲನ್‌ ಪಾತ್ರ ಒಪ್ಪಿಕೊಂಡಿದ್ದಾರೆ. ಈ ಪಾತ್ರಕ್ಕೂ ನಿರ್ದೇಶಕರು ಸಾಕಷ್ಟು ಒತ್ತು ನೀಡಿರುವುದರಿಂದ ಅವರು ಅಳೆದೂ ತೂಗಿ ಸಮ್ಮತಿಸಿದ್ದಾರೆ ಎಂದು ವರದಿಯೊಂದು ಹೇಳಿದೆ.

4/6

ವಿಲನ್‌ ಪಾತ್ರ ಅಯ್ಕೆ ಮಾಡಿಕೊಂಡಿದ್ದೇಕೆ?

ʼʼರಶ್ಮಿಕಾ ಅವರಿಗೆ ಏಕಕಾಲಕ್ಕೆ ಅಲ್ಲು ಅರ್ಜುನ್‌-ಅಟ್ಲಿ ಸಿನಿಮಾ ಹಾಗೂ ಮತ್ತೊಂದು ಪ್ಯಾನ್‌ ಇಂಡಿಯಾ ಚಿತ್ರದ ಅವಕಾಶ ಬಂದಿತ್ತು. ಅಲ್ಲು ಚಿತ್ರದಲ್ಲಿ ವಿಲನ್‌ ಪಾತ್ರವಾದರೂ ಹೊಸ ರೀತಿಯಲ್ಲಿ ಕಟ್ಟಿಕೊಡುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಗೆ ಇದು ಭಿನ್ನ ಅನುಭವವಾಗಲಿದೆʼʼ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

5/6

ಲುಕ್‌ ಟೆಸ್ಟ್‌ ಪೂರ್ಣ

ಮೂಲಗಳ ಪ್ರಕಾರ ರಶ್ಮಿಕಾ ಈಗಾಗಲೇ ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಅಟ್ಲಿ ಮತ್ತು ಅಲ್ಲು ಅರ್ಜುನ್‌ ಜತೆ ಲಾಸ್‌ ಏಂಜಲೀಸ್‌ಗೆ ತೆರಳಿ ಲುಕ್‌ ಟೆಸ್ಟ್‌ ಪೂರ್ಣಗೊಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ಶೂಟಿಂಗ್‌ ಆರಂಭಿಸಲಿದ್ದಾರೆ ಎನ್ನಲಾಗಿದೆ.

6/6

'ಅವತಾರ್‌' ಮಾದರಿಯ ಚಿತ್ರ?

ಅಟ್ಲಿ ಹೊಸ ಮಾದರಿಯ ಚಿತ್ರದ ಮೂಲಕ ಭಾರತೀಯ ಸಿನಿಮಾರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕನಸು ಕಂಡಿದ್ದಾರೆ. ಹಾಲಿವುಡ್‌ನ ʼಅವತಾರ್‌ʼ ಮಾದರಿಯಲ್ಲಿ ಇದು ಮೂಡಿ ಬರಲಿದ್ದು, ಎರಡು ವಿಭಿನ್ನ ಜಗತ್ತಿನಲ್ಲಿ ಕಥೆ ಸಾಗಲಿದೆ. ಈ ಸೈನ್ಸ್‌ ಫಿಕ್ಷನ್‌ 2026 ಅಥವಾ 2027ರಲ್ಲಿ ತೆರೆಗೆ ಬರಲಿದೆ.