ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಾಯಕ ಅನಿರುದ್ಧ ಶಾಸ್ತ್ರಿ ಆರತಕ್ಷತೆಯಲ್ಲಿ ಸ್ಯಾಂಡಲ್‌ವುಡ್‌ ತಾರೆಯರ ಸಮಾಗಮ; ಇಲ್ಲಿವೆ ಸುಂದರ ಫೋಟೋಗಳು

ಸ್ಯಾಂಡಲ್‌ವುಡ್‌ನ ಖ್ಯಾತ ಗಾಯಕ ಮತ್ತು ಗೀತ ರಚನಕಾರ ಅನಿರುದ್ಧ ಶಾಸ್ತ್ರಿ ಅವರು ಈಚೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ʻರಾಬರ್ಟ್‌ʼ, ʻಬಘೀರʼ, ʻಕ್ರಾಂತಿʼ, ʻಕಾಟೇರʼ, ʻದಿ ಡೆವಿಲ್‌ʼ ಮುಂತಾದ ಹಿಟ್‌ ಸಿನಿಮಾಗಳ ಗೀತೆಗೆ ಧ್ವನಿಯಾಗಿರುವ ಅನಿರುದ್ದ ಶಾಸ್ತ್ರಿ, ಹಲವು ಸಿನಿಮಾ-ಧಾರಾವಾಹಿಗಳಲಿ ಬಾಲ ನಟರಾಗಿಯೂ ಮಿಂಚಿದ್ದಾರೆ. ಫೆಬ್ರವರಿ 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಬಾಲಾಜಿ ಅವರ ಜೊತೆ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಅನಿರುದ್ಧ ಶಾಸ್ತ್ರಿ. ಈಚೆಗೆ ಈ ಜೋಡಿಯ ಮದುವೆ ಆರತಕ್ಷತೆಯು ಅದ್ದೂರಿಯಾಗಿ ನಡೆದಿತ್ತು. ಈ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಇಲ್ಲಿವೆ ನೋಡಿ ಅನಿರುದ್ಧ ಶಾಸ್ತ್ರಿಯ ಮದುವೆ ಆರತಕ್ಷತೆಯ ಕಲರ್‌ಫುಲ್‌ ಫೋಟೋಗಳು.

1/10

ಅನಿರುದ್ಧ ಶಾಸ್ತ್ರಿ - ಶ್ರೇಯಾ ಬಾಲಾಜಿ ಜೋಡಿಗೆ ಶುಭ ಹಾರೈಸಿದ ನಾದಬ್ರಹ್ಮ ಡಾ. ಹಂಸಲೇಖ

2/10

ಅನಿರುದ್ಧ ಶಾಸ್ತ್ರಿಗೆ ವಿಶ್‌ ಮಾಡಿದ ದಿ ಡೇವಿಲ್‌ ನಿರ್ದೇಶಕ ಪ್ರಕಾಶ್‌ ವೀರ್‌ - ಕಾಟೇರ ಡೈರೆಕ್ಟರ್‌ ತರುಣ್ ಸುಧೀರ್‌

3/10

ಅನಿರುದ್ಧ ಮದುವೆಯಲ್ಲಿ ಶಾಸಕ ಡಾ. ಸಿ ಎನ್‌ ಅಶ್ವತ್ಥ್‌ ನಾರಾಯಣ್‌, ಹೊಂಬಾಳೆ ಫಿಲ್ಮ್ಸ್‌ನ ಚೆಲುವೆ ಗೌಡ

4/10

ರವಿಚಂದ್ರನ್‌ ಅವರಿಂದ ಆಶೀರ್ವಾದ ಪಡೆದ ಅನಿರುದ್ಧ ಶಾಸ್ತ್ರಿ - ಶ್ರೇಯಾ ಬಾಲಾಜಿ ಜೋಡಿ

5/10

ಅನಿರುದ್ಧ ಶಾಸ್ತ್ರಿಗೆ ಶುಭ ಹಾರೈಸಿದ ಸಂಗೀತ ನಿರ್ದೇಶಕ ಗುರುಕಿರಣ್‌

6/10

ಮಾಜಿ ಶಾಸಕ, ಹಿರಿಯ ನಟ ಕುಮಾರ್‌ ಬಂಗಾರಪ್ಪ, ಲಹರಿ ಆಡಿಯೋ ಸಂಸ್ಥೆಯ ವೇಲು

7/10

ಅನಿರುದ್ಧ ಶಾಸ್ತ್ರಿ ಮದುವೆಗೆ ಬಂದ ಬಹುಭಾಷಾ ಗಾಯಕಿ ಮಂಗ್ಲಿ

8/10

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರಿಂದ ಅನಿರುದ್ಧ ಶಾಸ್ತ್ರಿಗೆ ಶುಭ ಹಾರೈಕೆ

9/10

ಅನಿರುದ್ಧ ಶಾಸ್ತ್ರಿ - ಶ್ರೇಯಾ ಬಾಲಾಜಿ ಜೋಡಿಗೆ ಶುಭ ಹಾರೈಸಿದ ಸಂಗೀತ ನಿರ್ದೇಶಕ ವಿ. ಮನೋಹರ್‌

10/10

ಅನಿರುದ್ಧ ಶಾಸ್ತ್ರಿಗೆ ಶುಭ ಹಾರೈಸಿದ ʻರೋರಿಂಗ್‌ ಸ್ಟಾರ್‌ʼ ಶ್ರೀಮುರಳಿ